ಎರಡು ರಸ್ತೆ ನಿರ್ಮಾಣಕ್ಕೆ ಸಿಆರ್ ಎಫ್ ಫಂಡ್ ನಿಂದ 8 ಕೋಟಿ ಮಂಜೂರು: ಜೆ.ಆರ್.ಲೋಬೊ

Spread the love

ಎರಡು ರಸ್ತೆ ನಿರ್ಮಾಣಕ್ಕೆ ಸಿಆರ್ ಎಫ್ ಫಂಡ್ ನಿಂದ  8 ಕೋಟಿ ಮಂಜೂರು: ಜೆ.ಆರ್.ಲೋಬೊ

ಮಂಗಳೂರು: ಕುಲಶೇಖರ-ಕಣ್ಣಗುಡ್ಡೆಗೆ ರಸ್ತೆ ನಿರ್ಮಾಣ ಮಾಡಲು ಮತ್ತು ನೇತ್ರಾವತಿ ಸೇತುವೆಯಿಂದ ನದಿ ತೀರದಲ್ಲಿ  ಕಣ್ಣೂರು ಮಸೀದಿವರೆಗೆ ಹೊಸದಾಗಿ ರಸ್ತೆ ನಿರ್ಮಿಸಲು ಕೇಂದ್ರ ಸರ್ಕಾರದಿಂದ ಸಿಆರ್ ಎಫ್ ಫಂಡ್ ಮೂಲಕ  8 ಕೋಟಿ ರೂಪಾಯಿ ಮಂಜೂರು ಮಾಡಿಸುವಲ್ಲಿ ಶಾಸಕ ಜೆ.ಆರ್.ಲೋಬೊ ಯಶಸ್ವಿಯಾಗಿದ್ದಾರೆ.

ಕುಲಶೇಖರ- ಕಣ್ಣಗುಡ್ಡೆ ರಸ್ತೆಗೆ 5 ಕೋಟಿ ರೂಪಾಯಿ ಮತ್ತು ನೇತ್ರಾವತಿ ಸೇತುವೆಯಿಂದ ಕಣ್ಣೂರು ಮಸೀದಿವರೆಗೆ ಹೊಸ ರಸ್ತೆ ನಿರ್ಮಿಸಲು 3 ಕೋಟಿ ರೂಪಾಯಿ ಬಿಡುಗಡೆಯಾಗಿದೆ.

road-jr-lobo

ಈ ರಸ್ತೆಯ ವಿಶೇಷತೆಯೆಂದರೆ ಇದು ಗ್ರಾಮೀಣ ರಸ್ತೆ. ಇದಕ್ಕೆ ಹಣ ಒದಗಿಸಲು ಸಾಧ್ಯವಿಲ್ಲ. ಆದರೆ ಶಾಸಕ ಜೆ.ಆರ್.ಲೋಬೊ ಇದಕ್ಕೂ ಮಂಜೂರಾತಿ ಮಾಡಿಸಿದ್ದಾರೆ. ಇದು ಲೋಕೋಪಯೋಗಿ ಖಾತೆ ಸಚಿವರ ಮನವೊಲಿಸಿ ಕೆಲಸ ಸಾಧಿಸಿದ್ದಾರೆ.

ಶಾಸಕ ಜೆ.ಆರ್.ಲೋಬೊ ಅವರು ಈ ರಸ್ತೆಯನ್ನು ಮಾಡಿಸಿಕೊಡಬೇಕು. ಈ ಭಾಗದ ಜನರು ಬವಣೆ ಪಡುತ್ತಿದ್ದಾರೆ ಎನ್ನುವುದನ್ನು ಮನವರಿಕೆ ಮಾಡಿಕೊಟ್ಟು ಕೇಂದ್ರ ರಸ್ತೆ ನಿಧಿಯಿಂದ ಅನುದಾನ ದೊರಕಿಸಿಕೊಡುವಂತೆ ಮಾಡಿದ್ದಾರೆ.

ನೇತ್ರಾವತಿ ಸೇತುವೆಯಿಂದ ನದಿ ತೀರದಲ್ಲಿ ರಸ್ತೆ ಮಾಡುವಂತೆಯೂ ಶಾಸಕ ಜೆ.ಆರ್.ಲೋಬೊ ಲೋಕೋಪಯೋಗಿ ಖಾತೆ ಸಚಿವರಿಗೆ ಒತ್ತಡ ಹೇರಿ ಅದರಲ್ಲೂ ಯಶಸ್ವಿಯಾಗಿದ್ದಾರೆ. ಇದನ್ನು ಸರ್ವೇಮಾಡಲು ರಾಜ್ಯ ಸರ್ಕಾರ 25 ಲಕ್ಷ ರೂಪಾಯಿಯನ್ನು ಬಿಡುಗಡೆ ಮಾಡಿದೆ.

ಈ ಎರಡೂ ರಸ್ತೆಗಳು ಲೋಕೋಪಯೋಗಿ ರಸ್ತೆಯಾಗಿರದೆ ಗ್ರಾಮೀಣ ರಸ್ತೆಗಳು. ಈ ರಸ್ತೆಗಳಿಗೆ ಸಿಆರ್ ಎಫ್ ಫಂಡ್ ವ್ಯಾಪ್ತಿಗೆ ಒಳಗಾಗದಿದ್ದರೂ ವಿಶೇಷವೆಂದು ಪರಿಗಣಿಸಿ ಇವುಗಳಿಗೆ ಮಂಜೂರಾತಿ ಸಿಗುವಂತೆ ಮಾಡಿರುವ ಶಾಸಕ ಜೆ.ಆರ್.ಲೋಬೊ ಅವರನ್ನು ಸ್ಥಳೀಯರು ಅಭಿನಂದಿಸಿದ್ದಾರೆ.


Spread the love