ಐತಿಹಾಸಿಕ ‘ಧರ್ಮ ಸಂಸದ್’ಗೆ ಕೇಸರಿಮಯಗೊಂಡ ಉಡುಪಿ; ಪೂರ್ಣಗೊಂಡ ಸಿದ್ದತೆ

Spread the love

ಐತಿಹಾಸಿಕ ‘ಧರ್ಮ ಸಂಸದ್’ಗೆ ಕೇಸರಿಮಯಗೊಂಡ ಉಡುಪಿ; ಪೂರ್ಣಗೊಂಡ ಸಿದ್ದತೆ

ಚಿತ್ರಗಳು; ಪ್ರಸನ್ನ ಕೊಡವೂರು

ಉಡುಪಿ: ನವೆಂಬರ್ 24ರಿಂದ ಆರಂಭವಾಗಿ ಮೂರು ದಿನಗಳ ಕಾಲ ನಡೆಯುವ ಧರ್ಮ ಸಂಸತ್ ಸಂತರ ಸಮ್ಮೇಳನಕ್ಕೆ ಸಿದ್ಧತೆ ಭರದಿಂದ ನಡೆಯುತ್ತಿದ್ದು ಅಂತಿಮ ಹಂತದಲ್ಲಿದೆ.

ಸಮ್ಮೇಳನದ ಬಗ್ಗೆ ಮಾಹಿತಿ ನೀಡುವ ಬ್ಯಾನರ್, ಜಾಹೀರಾತು ಫಲಕ ಗಳು, ಹೋರ್ಡಿಂಗ್ಸ್, ಟ್ಸಿಂಗ್  ನಗರದಲ್ಲಿ  ರಾರಾಜಿಸತೊಡಗಿದ್ದು  ಉಡುಪಿ ನಗರವಿಡೀ ಕೇಸರಿಮಯಗೊಂಡಿದೆ.  ಕಾರ್ಕಳ,  ಕುಂದಾಪುರ  ನಗರ  ಹಾಗೂ ಗ್ರಾಮಗಳಲ್ಲಿ ಸಹ ಅಳವಡಿಸ ಲಾಗಿದೆ. ಜಿಲ್ಲೆಯ ಹಾಗೂ ಹೊರ ಜಿಲ್ಲೆಯ ಜನರಿಗೆ ಮಾಹಿತಿ ನೀಡಲು ಭಾರಿ ಸಂಖ್ಯೆಯಲ್ಲಿ ಪ್ರಚಾರ ಸಾಮಗ್ರಿ ಬಳಸಲಾಗಿದೆ.

 26ರಂದು ನಗರದ ಎಂಜಿಎಂ ಕಾಲೇಜಿನ ಮೈದಾನದಲ್ಲಿ ಹಿಂದೂ ಸಮಾಜೋತ್ಸವ ನಡೆಯಲಿದ್ದು, ಅದರ ಬಗ್ಗೆ ಮಾಹಿತಿ ಹಾಗೂ ಆಹ್ವಾನ ನೀಡುವ ಜಾಹೀರಾತು ಫಲಕಗಳು ಹೆಚ್ಚಿನ ಸಂಖ್ಯೆಯಲ್ಲಿವೆ.ಪ್ರಚಾರಕ್ಕೆಂದೇ ವಿನ್ಯಾಸಗೊಳಿಸಿದ್ದ ‘ಸುಧರ್ಮ ರಥ’ ಜಿಲ್ಲೆಯ ಮೂಲೆ ಮೂಲೆಗಳಲ್ಲಿ ಈಗಾಗಲೇ ಒಂದು ಸುತ್ತಿನ ಪ್ರಚಾರ ಮುಗಿಸಿದೆ. ಸುಮಾರು ಒಂದೂವರೆ ಲಕ್ಷ ಜನರು ಸಮಾಜೋತ್ಸವದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.

ದೇಶದ ಮೂಲೆ ಮೂಲೆಗಳಿಂದ ಧರ್ಮ ಸಂಸದ್ ಸಭೆಗಾಗಿ ಆಗಮಿಸುವ ಎಲ್ಲಾ ಪೂಜ್ಯರ ವಾಸ್ತವ್ಯದ ವ್ಯವಸ್ಥೆಯನ್ನು ಮಾಡಲಾಗಿದೆ. ಸುಮಾರು 2000ದಷ್ಟು ಪೂಜ್ಯರು ಇಲ್ಲಿಗೆ ಹೊರಟಿರುವ ವಿಷಯ ತಿಳಿದು ಬಂದಿದೆ. ಪೂಜ್ಯರ ವೈಯಕ್ತಿಕ ಅವಶ್ಯಕತೆಗಳಿಗೆ ಪೂರಕವಾಗಿ ಕೆಲವರನ್ನು ಸಮಾಜ ಬಂಧುಗಳ ಮನೆಯಲ್ಲಿ ಇನ್ನೂ ಕೆಲವರನ್ನು ಮಠ ಛತ್ರ ಹಾಗೂ ಮದುವೆ ಹಾಲ್ ಗಳಲ್ಲಿ ವಾಸ್ತವ್ಯದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಈಗಾಗಲೇ ಸುಮಾರು 20ರಷ್ಟು ಪೂಜ್ಯ ಸಂತರು ಆಗಮಿಸಿದ್ದು , 23ನೇ ತಾರೀಕು ಸಂಜೆಯ ವೇಳೆಗೆ ಹೆಚ್ಚಿನ ಪೂಜ್ಯರು ಉಡುಪಿ ಸೇರಲಿದ್ದಾರೆ. ಪೂಜ್ಯರುಗಳನ್ನು ವಿಮಾನ ನಿಲ್ಧಾಣ, ರೈಲ್ವೇ ನಿಲ್ದಾಣ ಹಾಗೂ ಬಸ್ ನಿಲ್ದಾಣದಿಂದ ವಾಹನಗಳ ಮೂಲಕ ಕರೆದು ತರುವ ವ್ಯವಸ್ಥೆಯನ್ನು ಮಾಡಲಾಗಿದೆ. ಒಟ್ಟು ಧರ್ಮ ಸಂಸದ್ ನ ವ್ಯವಸ್ಥೆಯನ್ನು ಮಾಡಲಾಗಿದೆ. ಒಟ್ಟು ಧರ್ಮ ಸಂಸದ್ ನ ಈ ಮಹತ್ವಪೂರ್ಣದ ಕೆಲಸಗಳಿಗಾಗಿ ಸುಮಾರು 500ಕ್ಕಿಂತಲೂ ಹೆಚ್ಚುಪ್ರಬಂಧಕರು ಈಗಾಗಲೇ ಉದುಪಿಯಲ್ಲಿದ್ದು ಅವರುಗಳಿಗೆ ಒಟ್ಟು ವ್ಯವಸ್ಥೆಯ ಬೇರೆ ಬೇರೆ ಜವಾಬ್ಧಾರಿಯನ್ನು ಕೊಡಲಾಗಿದೆ. ಪ್ರತಿಯೊಂದು ವಿಭಾಗಕ್ಕೂ ಒಬ್ಬ ಮುಖ್ಯಸ್ಥರನ್ನು ನೇಮಿಸಿ ಅವರಿಗೆ ತಕ್ಕುದಾದ ಜವಬ್ಧಾರಿಯನ್ನು ವಹಿಸಿಕೊಟ್ಟಿದೆ. 21ನೇ ತಾರೀಕಿನಿಂದಲೇ ಪಾಕ ಶಾಲೆ ತನ್ನ ಕೆಲಸವನ್ನು ಆರಂಬಿಸಿದ್ದು ಪ್ರಬಂಧಕರಿಗೆ ಮತ್ತು ವಿಶ್ವ ಹಿಂದು ಪರಿಷತ್ ನ ಹಿರಿಯರಿಗೆ ಉತ್ತಮವಾದ ಭೋಜನ ವ್ಯವಸ್ಥೆಯನ್ನು ಮಾಡಲಾಗಿದ್ದು ಪ್ರತಿಯೊಂದು ಪ್ರಭಂಧಕರಿಗೂ ಗುರುತಿನ ಚೀಟಿಯನ್ನು ಕೊಡುವ ವ್ಯವಸ್ಥೆ ನಡೆಯುತ್ತಿದೆ.

ಉತ್ಸವದ ವಾತಾವರಣ ಉಂಟುಮಾಡುವ ಸಲುವಾಗಿ ಬಜರಂಗದಳದ ಸ್ವಂಯಂಸೇವಕರು 7 ಗುಂಪುಗಳಲ್ಲಿ ರಾತ್ರಿಯಿಡಿ ನಗರದ ಅಲಂಕಾರವನ್ನು ಮಾಡುತ್ತಿದ್ದಾರೆ. ನಮ್ಮ ಹಿರಿಯರ ಆಶಯದಂತೆ ಇಡೀ ಉಡುಪಿ ನಗರದ ಅಲಂಕಾರವನ್ನು ಮಾಡುತ್ತಿದ್ದಾರೆ. ನಮ್ಮ ಹಿರಿಯರ ಆಶಯದಂತೆ ಸಂತ ಮಹಾ ಸಂತರನ್ನು ಪ್ರೀತಿಯಿಂದ ಆಹ್ವಾನಿಸುವ ಕೆಲಸ ನಡೆದಿದೆ.

“ಹಿಂದು ವೈಭವ ಎನ್ನುವ ಉತ್ಕ್ರಷ್ಟ ಪ್ರದರ್ಶಿನಿಯ ಅನಾವರಣದ ಕ್ಷಣಗಣನೆ ನದೆಯುತ್ತಿದೆ. ಭಾರತದ ಹಿಂದು ಧರ್ಮದ ಧಾರ್ಮಿಕ ಹಿನ್ನಲೆ ಚರಿತ್ರೆ ಗತವೈಭವಗಳನ್ನು ಪ್ರಚುರ ಪಡಿಸುವ ಹಲವಾರು ವಿಚಾರಗಳನ್ನು ಈ ಪ್ರದರ್ಶಿನಿಯು ಒಳಗೊಂಡಿದ್ದು 23 ನೇ ತಾರಿಕು ಸಾಯಂಕಾಲ ಗಂಟೆ 4ಕ್ಕೆ ರಾ.ಸ್ವ. ಸಂಘದ ಮಾನ್ಯ ಸಹ ಸರಕಾರ್ಯವಾಹರಾದ ಶ್ರೀ ಭಾಗಯ್ಯರವರು ಉದ್ಘಾಟಿಸಲಿದ್ದಾರೆ.

ನವೆಂಬರ್ 24ನೇ ಶುಕ್ರವಾರ ಬೆಳಗ್ಗೆ 9.30ಕ್ಕೆ ಸರಿಯಾಗಿ ಪರಮಪೂಜ್ಯ ಪೇಜಾವರ ಶ್ರೀಗಳಾದ   ಶ್ರೀ ವೀಶ್ವೇಶ ತೀರ್ಥರ ಅಧ್ಯಕ್ಷತೆಯಲ್ಲಿ   ಶ್ರೀ ಡಾ. ಶಿವಕುಮಾರ ಮಹಾಸ್ವಾಮಿಗಳು ಶ್ರೀ ಸಿಧ್ದಗಂಗಾ ಮಠ ತುಮಕೂರು ಮತ್ತು ಪೂಜ್ಯ ಶ್ರೀ ಪ್ರಸನ್ನರೇಣುಕಾ ಡಾ. ವೀರ ಸೋಮೆಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಬಾಳೆಹೊನ್ನೂರು ಹಾಗೂ ಪೊಜ್ಯ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಮಾನ್ಯ ಶ್ರೀ ಮೋಹನ್ ಜಿ ಭಾಗವತ್ ಸರಸಂಘಚಾಲಕರು ರಾ.ಸ್ವ.ಸಂಘ ಹಾಗೂ ಪದ್ಮ ವಿಭೂಷಣ ಡಾ. ವಿರೇಂದ್ರ ಹೆಗಡೆ ಹಾಗೂ ಇನ್ನಿತರ ಪೂಜ್ಯ ಸಂತರನ್ನು ಕೃಷ್ಣ ಮಠದ ರಾಜಾಂಗಣದ ದ್ವಾರದಲ್ಲಿ ಸ್ವಾಗತಿಸಿ ಅಲ್ಲಿಂದ ಪೂರ್ಣಕುಂಭದೊಂದಿಗೆ ಕಾರ್ಯಕ್ರಮ ನದೆಯುವ ಪ್ರಾಂಗಣಕ್ಕೆ ಕರೆತರಲಾಗುವುದು. 10.00ಕ್ಕೆ ಸರಿಯಾಗಿ ಸಭಾಂಗಣದ ಭವ್ಯ ವೇದಿಕೆಯಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.

ಅಪರಾಹ್ನ 3.30ರಿಂದ ಸಭಾವೇದಿಕೆಯಲ್ಲಿ “ರಾಮ ಜನ್ಮ ಭೂಮಿ ಮಂದಿರ ನಿರ್ಮಾಣದ ಬಗ್ಗೆ ಹಾಗೂ ಗೋ ರಕ್ಷಣೆ ಹಾಗೂ ಗೋ ಸಂರಕ್ಷಣೆಯ ಬಗ್ಗೆ ಚರ್ಬೆ ನಡೆಯಲಿದ್ದು ನಿರ್ಣಯಗಳನ್ನು ಸಿದ್ದಪಡಿಸಲಾಗುವುದು.

24 ಮತ್ತು 25ರ ಸಾಯಂಕಾಲ 8.00 ರಿಂದ 10.00 ರವರೆಗೆ ಸುಪ್ರಸಿದ್ದ  ಮೂಡುಬಿದಿರೆಯ ಆಳ್ವಾಸ್ ನುದಿಸಿರಿ ತಂಡದಿಂದ ವೈವಿದ್ಯಮಯ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಲಿದೆ.

ಶನಿವಾರ ಧರ್ಮ ಸಂಸದ್‍ನಲ್ಲಿ ಬೇರೆ ಬೇರೆ ಸಂತರುಗಳ ಗುಂಪುಗಳಲ್ಲಿ ಸಮಾಜದ ಸಾಮರಸ್ಯದಲ್ಲಿ ಸಂತರ ಪಾತ್ರ ಹಾಗೂ ಸಾಮರಸ್ಯವನ್ನು ವೃದ್ದಿಪದಿಸುವ ಕಾರ್ಯ ಚಟುವಟಿಕೆಗಳ ಬಗ್ಗೆ ಚರ್ಚಿಸಲಾಗುವುದು. ಅಪರಾಹ್ನ 3.30ರಿಂದ ಹಿಂದು ಧರ್ಮಿಯರ ಮತಾಂತರ ಹಾಗೂ  ಮರಳಿ ಧರ್ಮಕ್ಕೆ ಮತಾಂತರಗೊಂಢ ಹಿಂದುಗಳ ಕರೆತರುವ ವಿಚಾರ ಹಾಗೂ ಭಾರತೀಯ ಸಂಸ್ಕ್ರತಿಯ ಸಂರಕ್ಷಣೆ ಹಾಗೂ ಸಂವರ್ಧನೆ ವಿಚಾರವಾಗಿ ಚರ್ಚೆ ನದೆಯಲಿದ್ದು ನಿರ್ಣಯಗಳನ್ನು ಸಿದ್ದ ಪಡಿಸಲಾಗುವುದು.

ನವೆಂಬರ್ 26ರಂದು ಪೂರ್ವಾಹ್ನ ಹಿಂದು ಸಮಾಜದ ಮುಖಂಡರುಗಳ ಮತ್ತು ಜಾತಿ ಪ್ರಮುಖರ ಸಮಾವೇಶ ಕೃಷ್ಣ ಮಠದ ರಾಜಾಂಗಣದಲ್ಲಿ  ಸುರೇಂದ್ರ ಕುಮಾರ ಜೈನ್ ಅವರ ದಿಕ್ಸೂಚಿ ಭಾಷಣದೊಂದಿಗೆ ನಡೆಯಲಿದೆ. ಅಲ್ಲಿ ಧರ್ಮ ಸಂಸದ್ ಸ್ವೀಕರಿಸಿದ ನಿರ್ಣಾಯಗಳನ್ನು ಹಿಂದು ಸಮಾಜದಲ್ಲಿ ಜಾರಿಗೊಳಿಸುವ ಕಾರ್ಯತಂತ್ರಿಗಳ ಬಗ್ಗೆ ಚರ್ಚಿಸಿ ಕಾರ್ಯವಿಧಾನಗಳನ್ನು ನಿಶ್ಚಯಿಸಲಾಗುವುದು.

ಅಪರಾಹ್ನ ಬೃಹತ್ ಹಿಂದೂ ಸಮಾಜ್ಯೋತ್ಸವ ಹಾಗೂ ಚಾರಿತ್ರಿಕ ಶೋಭಾ ಯಾತ್ರೆ ನಡೆಯಲಿದ್ದು, ಹಿಂದು ಸಮಾಜ್ಯೋತ್ಸವ ಮುಖ್ಯವೇದಿಕೆ ಎಂ.ಜಿ.ಎಂ ಕಾಲೇಜಿನ ವಿಶಾಲವಾದ ಮೈದಾನದಲ್ಲಿ ನಿರ್ಮಾಣಗೊಳ್ಳಲಿದ್ದು ಮಂಗಳೂರು ವಿಭಾಗ ಅಂದರೆ ಮಡಿಕೇರಿ, ಪುತ್ತೂರು, ಬಂಟ್ವಾಳ ಮಂಗಳೂರು, ಕಾಸರಗೋಡು ಭಾಗದಿಂದ ಬರುವವರಿಗೆ ಉದ್ಯಾವರ ಸೇತುವೆಯ ನಂತರ ಎಡಭಾಗದಲ್ಲಿ ಊಟದ ವ್ಯವಸ್ಥೆಗೊಳಿಸಲಾಗಿದೆ. ಹಾಗೂ ಉತ್ತರ ಬಾಗದಿಂದ ಬರುವ ಕಾರ್ಯಕರ್ತರಿಗೆ ಕಲ್ಯಾಣಪುರದ ಎಲ್.ವಿ.ಟಿ ಶಾಲಾ  ಮೈದಾನದಲ್ಲಿ ವ್ಯವಸ್ಥೆಗೊಳಿಸಲಾಗಿದೆ. ಪೂರ್ವ ದಿಕ್ಕಿನಿಂದ ಬರುವ ಕಾರ್ಯಕರ್ತರಿಗೆ ಊಟದ ವ್ಯವಸ್ತೆಯನ್ನು ಪರ್ಕಳದ ದೇವಾಡಿಗರ ಸಭಾಭವನದಲ್ಲಿ ಏರ್ಪಡಿಸಲಾಗುವುದು. ಬರುವ ಸಾವಿರರು ವಾಹನಗಳ ನಿಲುಗಡೆಗೆ ವ್ಯವಸ್ತೆಯನ್ನು ಮಾಡಲಾಗಿದ್ದು ಉಡುಪಿಯ ಜೋಡುಕಟ್ಟೆಯಿಂದ ಹೊರಡುವ ಭವ್ಯ ಶೋಭಯಾತ್ರೆ 2.30 ಆರಂಭವಾಗಿ ಸುಮಾರು 1 ಲಕ್ಷಕ್ಕೂ ಮಿಕ್ಕಿದ ಉತ್ಶಾಹಿ ಕಾರ್ಯಕರ್ತರ ಘೋಷಣೆಗಳ ಮೆರವಣಿಗೆ 4.00ರ ಒಳಗೆ ಎಮ್.ಎಮ್ ಮೈದಾನ ತಲುಪಲಿದ್ದು ಪೂಜ್ಯ ಸಂತರನ್ನು ವಾಹನಗಳ ಮೂಲಕ ವೇದಿಕೆಯ ಬಳಿ ಶೋಭಯಾತ್ರೆಯ ಮುಂಭಾಗದಿಂದ ಕರೆತರಲಾಗುವುದು. ಭವ್ಯ ಹಿಂದು ಸಮಾಜ್ಯೋತ್ಸವದ ಸಭಾ ಕಾರ್ಯಕ್ರಮ ಸಾಯಂಕಾಲ 4ಕ್ಕೆ ಸರಿಯಾಗಿ ಡಿ. ವಿರೇಂದ್ರ ಹೆಗಡೆ ಹಾಗೂ   ಶ್ರೀ ವಿಶ್ವೇಶ ತಿರ್ಥಸ್ವಾಮೀಜಿಉಡುಪಿ ಹಾಗು ಇನ್ನಿತರ ಪೂಜ್ಯ ಸಾದು ಸಂತರನ್ನು ವೇದಿಕೆಯಲ್ಲಿ ಕುಳ್ಳಿರಿಸಿ ಪ್ರಮುಖರಿಂದ ಹಿಂದು ಸಮಾಜದ ಬಗ್ಗೆ ಸಂದೇಶಗಳು ಮೊಳಗಿ ಕೊನೆಯಲ್ಲಿ ಯೋಗಿ ಆದಿತ್ಯನಾಥ ಜೀ ಪೀಠಾಧ್ಯಕ್ಷರು ಗೋರಕ್ಷಾ ಪೀಠ ಅವರಿಂದ ದಿಕ್ಸೂಚಿ ಭಾಷಣ ನಡೆಯಲಿದೆ. ಅಧ್ಯಕ್ಷತೆ ವಹಿಸಿದ ಪೂಜ್ಯ ಶ್ರೀವಿಶ್ವೇಶತೀರ್ಥ ಸ್ವಾಮೀಜಿಯವರ ಅನುಗ್ರಹಭಾಷಣದೊಂದಿಗೆ ಕಾರ್ಯಕ್ರಮ ಸಮಾಪನಗೊಳ್ಳಲಿದೆ.

ಹಿಂದು ಸಮಾಜದ ಭದ್ರ ಬುನಾದಿಗೆ ತಳಪಾಯ ಹಾಕುವತ್ತ ಈ ಐತಿಹಾಸಿಕ ಧರ್ಮ ಸಂಸದ್ ಅಧಿವೇಶನವು ನಡೆಯಲಿದ್ದು, ಜಾತಿ ಲಿಂಗ ತಾರತಮ್ಯವಿರದೆ ಸಮಸ್ತ ಹಿಂದು ಬಂಧು ಭಗಿನಿಯರಿಗೆ ಸಮಾನ ಧಾರ್ಮಿಕ ಸ್ವಾತಂತ್ರ್ಯ, ಗೋ ಸಂವರ್ಧನೆ, ಗೋ ರಕ್ಷಣೆ,ಸಮಗ್ರ ಗೋ ಸಂರಕ್ಷಣಾ ಕಾನೂನು, ಮತಾಂತರ ತಡೆದು ಪುನರಾಗಮನದ ವೇಗ ಹೆಚ್ಚಿಸಲು ಸಂತರ ಸಕ್ರಿಯತೆ, ಸಾಂಸ್ಕೃತಿಕ ಆಕ್ರಮಣಕ್ಕೆ ತಡೆ, ಮನೆಗಳಲ್ಲಿ ಹಿಂದು ಸಂಸ್ಕೃತಿ ಸ್ವಾಭಿಮಾನ ಬೆಳೆಸುವ ಯೋಜನೆ, ಅಯೋದ್ಯಾ ಶ್ರೀರಾಮ ಜನ್ಮಭೂಮಿ ಮಂದಿರ ಪುನರ್ನಿರ್ಮಾಣದ ಕುರಿತು ಚಿಂತನೆ ನಡೆಸಿ ನಿರ್ಣಾಯಕ ನಿರ್ಧಾರಕ್ಕಾಗಿ ಕಾಲೋಚಿತ ನಿರ್ಣಯಗಳನ್ನು ತೆಗೆದು ಕೊಳ್ಳುವತ್ತ ವಿಚಾರ ಮಂಥನ ನಡೆಯಲಿದೆ.


Spread the love