ಐ.ಸಿವೈ.ಎಮ್. ಪೆರಂಪಳ್ಳಿ ಘಟಕದಿಂದ ಗಿಡ ನೆಡುವ ಕಾರ್ಯಕ್ರಮ

Spread the love

ಐ.ಸಿವೈ.ಎಮ್. ಪೆರಂಪಳ್ಳಿ ಘಟಕದಿಂದ ಗಿಡ ನೆಡುವ ಕಾರ್ಯಕ್ರಮ

ಉಡುಪಿ: ಐ.ಸಿ.ವೈ.ಎಮ್ ಪೆರಂಪಳ್ಳಿ ಘಟಕ ಹಾಗೂ ಕ್ರಷಿ ವಿಜ್ಞಾನ ಕೇಂದ್ರ, ಬ್ರಹ್ಮಾವರ ಇವರ ಜಂಟಿ ಆಶ್ರಯದಲ್ಲಿ ಲಾವ್ದಾತೊ-ಸಿ ಧ್ಯೇಯದಡಿ ಕಾಳು ಮೆಣಸಿನ ಗಿಡ ನೆಡುವ ತರಬೇತಿ ಕಾರ್ಯಗಾರವು ಪೆರಂಪಳ್ಳಿ ಫಾತಿಮಾ ಮಾತೆಯ ದೇವಾಲಯದ ಆವರಣದಲ್ಲಿ ಜರಗಿತು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಕ್ರಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ.ಧನಂಜಯ ಇವರು ಪ್ರಯೊಗಿಕವಾಗಿ ಕಾಳು ಮೆಣಸಿನ ಗಿಡವನ್ನು ನೆಟ್ಟು ಅದನ್ನು ಯಾವ ರೀತಿ ಪಾಲನೆ-ಪೋಷಣೆ ಮಾಡಬೇಕಾಗಿ ಸವಿಸ್ತಾರವಾಗಿ ಯುವಜನರಿಗೆ ಅರಿವು ಮೂಡಿಸಿದರು.

ಕಾರ್ಯಕ್ರಮದ ಅಧ್ಯಕ್ಷರಾಗಿ ಚರ್ಚಿನ ಧರ್ಮಗುರುಗಳಾದ ವ| ಅನಿಲ್ ಡಿಸೋಜ,ಮುಖ್ಯ ಅಥಿತಿಯಾಗಿ ಪೆರಂಪಳ್ಳಿ ಕ್ರಷಿ ಸಂಘದ ಅಧ್ಯಕ್ಷರು ಸುಬ್ರಹ್ಮಣ್ಯ ಶಿರಿಯಾನ್, ಚರ್ಚ್ ಪಾಲನಾ ಮಂಡಳಿಯ ಸದಸ್ಯರಾದ ರೋಜಿ ವಿಲಿಯಂ ಪಿಂಟೊ, ಜೊಸ್ಸಿ ಪಿಂಟೊ, ಧರ್ಮಭಗಿನಿ ಸಿ| ಲೇನಿಟಾ ಡಿಸೋಜ ಹಾಗೆಯೇ ಐ.ಸಿ.ವೈ. ಎಮ್ ನ ಅಧ್ಯಕ್ಷರಾದ ಬೆನ್ಸನ್ ಡಿಸೋಜ ಮತ್ತು ಸಂಘದ ಸದಸ್ಯರು ಉಪಸ್ಥಿತರಿದ್ದರು.

ಲಾವ್ದಾತೊ-ಸಿ ಪರಿಸರ ಸಂರಕ್ಷಣಾ ಧ್ಯೇಯದಡಿ ಐ.ಸಿ.ವೈ.ಎಮ್ ನ ಸದಸ್ಯರು ಸಂಪನ್ಮೂಲ ವ್ಯಕ್ತಿಯ ಸಂಪೂರ್ಣ ಮಾಹಿತಿಯಡಿ ಚರ್ಚ್ನ ತೋಟದಲ್ಲಿ ಕಾಳುಮೆಣಸು ಗಿಡ, ಹಾಗೆಯೇ ಇತರ ತರಕಾರಿಗಳ ಬೀಜ ಬಿತ್ತನೆ ಮಾಡುವ ಮೂಲಕ ಪರಿಸರದ ಕಾಳಜಿ ಹೆಚ್ಚಿಸುವಲ್ಲಿ ಸಫಲರಾದರು.


Spread the love