ಕದ್ರಿ ಉದ್ಯಾನವನದಲ್ಲಿ ಮೇ 19 ರಿಂದ 25 ರವರೆಗೆ ಮಾವು ಹಾಗೂ ಹಲಸಿನ ಮೇಳ

Spread the love

ಕದ್ರಿ ಉದ್ಯಾನವನದಲ್ಲಿ ಮೇ 19 ರಿಂದ 25 ರವರೆಗೆ ಮಾವು ಹಾಗೂ ಹಲಸಿನ ಮೇಳ

ಮ0ಗಳೂರು ತೋಟಗಾರಿಕೆ ಇಲಾಖೆ, ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕರ್ನಾಟಕ ರಾಜ್ಯ ಮಾವು ಅಭಿವೃದ್ದಿ ಮಾರುಕಟ್ಟೆ ನಿಗಮ(ನಿ) ಬೆಂಗಳೂರು, ಇವರುಗಳ ಸಂಯುಕ್ತ ಆಶ್ರಯದಲ್ಲಿ ಕದ್ರಿ ಉದ್ಯಾನವನದಲ್ಲಿ ಮೇ 19 ರಿಂದ 25 ರವರೆಗೆ ಮಾವು ಹಾಗೂ ಹಲಸಿನ ಮೇಳವನ್ನು ಆಯೋಜಿಸಲಾಗಿರುತ್ತದೆ.

ಈ ಮೇಳದಲ್ಲಿ ವಿವಿಧ ತಳಿಗಳ ಮಾವು ಹಾಗೂ ಹಲಸಿನ ಹಣ್ಣುಗಳನ್ನು ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ಹಾಗೂ ರೈತರಿಗೆ ಪರಿಚಯಿಸುವ ನಿಟ್ಟಿನಲ್ಲಿ ಹಾಗೂ ಒಳ್ಳೆಯ ಗುಣಮಟ್ಟದ ಮಾವು ಹಾಗೂ ಹಲಸಿನ ಹಣ್ಣಗಳನ್ನು ಬೆಳೆಯುತ್ತಿರುವ ರೈತರಿಂದ ಗ್ರಾಹಕರಿಗೆ ನೇರವಾಗಿ ಖರೀದಿಸಲು ಅವಕಾಶ ಕಲ್ಪಿಸಲಾಗಿರುತ್ತದೆ. ಈ ಮೇಳದಲ್ಲಿ ವಿವಿಧ ತಳಿಗಳ ಮಾವು ಹಾಗೂ ಹಲಸು ಹಣ್ಣುಗಳನ್ನು ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಉತ್ತಮ ಮಾವು ಹಾಗೂ ಹಲಸಿನ ಬೆಳೆಗಾರರನ್ನು ನೇರ ಮಾರುಕಟ್ಟೆಗೆ ಪ್ರೇರೆಪಿಸಿ, ಗ್ರಾಹಕರಿಗೆ ಕಾರ್ಬೈಡ್ ಮುಕ್ತ, ನೈಸರ್ಗಿಕವಾಗಿ ಮಾಗಿಸಿದ ಮಾವಿನ ಹಣ್ಣುಗಳನ್ನು ಒದಗಿಸುವುದು ಈ ಮೇಳದ ಉದ್ದೇಶವಾಗಿದೆ.

ಸ್ಥಳೀಯ ರೈತರುಗಳು ತಾವು ಬೆಳೆದಿರುವ ಸ್ಥಳೀಯ ಹಾಗೂ ಸುಧಾರಿತ ಮಾವು ಹಾಗೂ ಹಲಸು ತಳಿಗಳ ಹಣ್ಣುಗಳನ್ನು ಪ್ರದರ್ಶನ ಮಾಡಲು ಹಾಗೂ ಮಾರಾಟ ಮಾಡಲು ಪ್ರಥಮ ಆದ್ಯತೆಯಲ್ಲಿ ಅವಕಾಶ ಕಲ್ಪಿಸಲಾಗುವುದು. ಆಸಕ್ತ ರೈತರು ಇಲಾಖೆಯನ್ನು ಸಂಪರ್ಕಿಸಿ ನೋಂದಾಯಿಸಿಕೊಳ್ಳಲು ಕೋರಿದೆ. ಬೇರೆ ಬೇರೆ ಮಾವು ಬೆಳೆಯುವ ಜಿಲ್ಲೆಗಳಿಂದ ರೈತರಿಗೆ ವಿವಿಧ ಸುಧಾರಿತ ತಳಿಗಳ ಮಾವು ಹಾಗೂ ಹಲಸು ಹಣ್ಣುಗಳನ್ನು ನೇರವಾಗಿ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗುವುದು. ಮಾವು ಮತ್ತು ಹಲಸು ಸಂಸ್ಕರಣಾ ಉತ್ಪನ್ನಗಳನ್ನು ರೈತರು ಹಾಗೂ ಉತ್ಪಾದನಕಾರರು ಪ್ರದರ್ಶನ ಮಾಡಲು ಹಾಗೂ ನೇರವಾಗಿ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗುವುದು. ವಿವಿಧ ತಳಿಯ ಮಾವು, ಹಲಸು ಹಾಗೂ ಹಣ್ಣಿನ ಬೆಳೆಗಳ ಗಿಡಗಳನ್ನು ಮಾರಾಟ ಮಾಡಲು ನರ್ಸರಿದಾರರಿಗೆ ಅವಕಾಶ ಕಲ್ಪಿಸಲಾಗುವುದು. ಇದಲ್ಲದೆ ಇತರೇ ತೋಟಗಾರಿಕೆ ಬೆಳೆಗಳ ಸಂಸ್ಕರಣಾ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗುವುದು.

ಈ ರೀತಿಯಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದ್ದು, ಮೇಲಿನಂತೆ ಆಸಕ್ತ ರೈತರು, ಮಾರಾಟಗಾರರು, ಸಂಸ್ಕರಣಾಗಾರರು, ನರ್ಸರಿದಾರರು ಇದರ ಸದುಪಯೋಗ ಪಡೆದುಕೊಳ್ಳಲು ಕೋರಲಾಗಿದೆ. ಕಾರ್ಯಕ್ರಮದಲ್ಲಿ ನೋಂದಾಯಿಸಿಕೊಳ್ಳಲು ದೂರವಾಣಿ ಸಂಖ್ಯೆ- 0824-2412628, 0824-2423615, 9480354968 ಸಂಪರ್ಕಿಸಲು ಉಪನಿರ್ದೇಶಕರು, ತೋಟಗಾರಿಕೆ ಇಲಾಖೆ, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.


Spread the love