ಕನ್ನಗುಡ್ಡೆ ಅಳಪೆ ಅಂಗನವಾಡಿ ಕಟ್ಟಡ ಉದ್ಘಾಟಿಸಿದ ಶಾಸಕ ಜೆ.ಆರ್.ಲೋಬೊ

Spread the love

ಕನ್ನಗುಡ್ಡೆ ಅಳಪೆ ಅಂಗನವಾಡಿ ಕಟ್ಟಡ ಉದ್ಘಾಟಿಸಿದ ಶಾಸಕ ಜೆ.ಆರ್.ಲೋಬೊ

ಮಂಗಳೂರು: ಕನ್ನಗುಡ್ಡೆಯಲ್ಲಿ ಸುಮಾರು 7 ಲಕ್ಷ ರೂಪಾಯಿ ವೆಚ್ಚದಲ್ಲಿ ಎಂ ಆರ್ ಪಿಎಲ್ ಸಹಭಾಗಿತ್ವದಲ್ಲಿ ನೂತನವಾಗಿ ನಿರ್ಮಿಸಲಾದ ಅಂಗನವಾಡಿ ಕಟ್ಟಡದ ಉದ್ಘಾಟನೆಯನ್ನು ಶಾಸಕ ಜೆ.ಆರ್.ಲೋಬೊ ಅವರು ನೆರವೇರಿಸಿದರು.

ಈ ಅಂಗನವಾಡಿ ಕಟ್ಟಡ ಶಿಥಿಲಾವಸ್ಥೆಯಿಂದ ಕೂಡಿತ್ತು. ಈ ಬಗ್ಗೆ ಶಾಸಕ ಜೆ.ಆರ್.ಲೋಬೊ ಅವರ ಗಮನ ಸೆಳೆದು ಶ್ರೀ ವೈದ್ಯನಾಥ ಫ್ರೆಂಡ್ಸ್ ಸರ್ಕಲ್ ನವರು  ಈ ಕಟ್ಟಡವನ್ನು ಪುನರುಜ್ಜಿವನಗೊಳಿಸುವಂತೆ ಮನವಿ ಮಾಡಿದ್ದರು.

ಶಾಸಕ ಜೆ.ಆರ್.ಲೋಬೊ ಅವರು ಸ್ಥಳೀಯರ ಒತ್ತಾಸೆಯಂತೆ ಎಂ.ಆರ್.ಪಿ.ಎಲ್ ಸಂಸ್ಥೆಯವರನ್ನು ಸಂಪರ್ಕಿಸಿ ಅವರ ಶಿಫಾರಸಿನಂತೆ  7 ಲಕ್ಷ ರೂಪಾಯಿಯನ್ನು ಮಂಜೂರು ಮಾಡಿಸಿದ್ದರು.

ಈ ಅಂಗನಾಡಿ ಕಟ್ಟಡದ ಹಿಂದೆ ಇತಿಹಾಸವಿದೆ. ಸುಮಾರು 20 ವರ್ಷಗಳಿಂದ ಇದ್ದ ಅಂಗನವಾಡಿ ಇದು. ತೀರಾ ಹಿಂದುಳಿದವರು ನೆಲೆಯಾಗಿರುವ ಈ ಪ್ರದೇಶದಲ್ಲಿ ಅಂಗನವಾಡಿ ಕಟ್ಟಡ ಇಲ್ಲದ್ದನ್ನು ಶಾಸಕ ಜೆ.ಆರ್.ಲೋಬೊ ಅವರು ಅಲ್ಲಿಗೆ ಹೋದಾಗ ಮನಗಂಡು ಮತ್ತೆ ಕಟ್ಟಡವನ್ನು ಸ್ಥಾಪಿಸಿದರು. ಶಾಸಕರ ಕಾಳಜಿಯೆಂದರೆ ಶಿಕ್ಷಣವನ್ನು ತೀರಾ ಬಡವರೂ ಪಡೆಯಬೇಕೆಂಬುದಾಗಿತ್ತು.

ಅನುದಾನದ ಫಲವಾಗಿ ನೂತನ ಕಟ್ಟಡವನ್ನು ನಿರ್ಮಿಸಿ ಉದ್ಘಾಟನೆಯನ್ನು ಶಾಸಕರಿಂದ ಮಾಡಿಸಿದರು. ನೂತನ ಕಟ್ಟಡದ ಉದ್ಘಾಟನೆಯಲ್ಲಿ  ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ,  ಕಾರ್ಪೊರೇಟರ್  ಬಿ.ಪ್ರಕಾಶ್, ಮಾಜಿ ಮೇಯರ್ ಕೃಷ್ಣಪ್ಪ ಮೆಂಡನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಸಲೀಮ್, ಭೂನ್ಯಾಯ ಮಂಡಳಿ ಸದಸ್ಯರಾದ ಡಿನ್ನೀಸ್ ಡಿಸಿಲ್ವ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ  ಸುಂದರ್ ಪೂಜಾರಿ, ವೈದ್ಯನಾಥ್ ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷ ಶಂಕರ್ ನಾಯ್ಕ್, ಅಶೋಕ್  ಕಿರೋಡಿಯನ್, ಸಂಘದ ಪದಾಧಿಕಾರಿ ಉಮೇಶ್ ನೂಜಿ, ಕಾಂಗ್ರೆಸ್ ಮುಖಂಡರಾ ಪ್ರಭಾಕರ್ ಶ್ರಿಯಾನ್, ಸದಾಶಿವ ಅಮೀನ್, ದುರ್ಗಾ ಪ್ರಸಾದ್, ಗುತ್ತಿಗೆದಾರ ನೆಲ್ಸನ್ ಮೊತೇರೊ ಮುಂತಾದವರಿದ್ದರು.


Spread the love