ಕಳೆದುಕೊಂಡ ಹತ್ತು ಲಕ್ಷ ಮೌಲ್ಯದ ಚಿನ್ನವನ್ನು ಪತ್ತೆ ಹಚ್ಚಿ ವಾರೀಸುದಾರರಿಗೆ ನೀಡಿದ ಮೂಡಬಿದ್ರೆ ಪೊಲೀಸರು
ಮೂಡಬಿದ್ರೆ: ಪಡು ಮಾರ್ನಾಡು ಗ್ರಾಮದ ಧರ್ಮಪಾಲ ಬಲ್ಲಾಳರವರ ಪತ್ನಿ ವಿಜಯ ರವರು ಕುಪ್ಪೆ ಪದವಿನಲ್ಲಿ ಅವರ ತಾಯಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಹಿಂತಿರುಗುವ ಸಂದರ್ಭ ಮಧ್ಯಾಹ್ನ 2:00 ಗಂಟೆಗೆ ಮೂಡಬಿದ್ರೆ ಪೇಟೆಯಲ್ಲಿ ಎರಡು ಬಳೆ ಮತ್ತು ಚಿನ್ನದ ಸರ ಒಟ್ಟು ಒಂಬತ್ತು ಪವನ್ ಚಿನ್ನ ಮತ್ತು ಪರ್ಸ್ ಸಮೇತ ಕಳೆದುಕೊಂಡಿರುತ್ತಾರೆ. ಈ ಬಗ್ಗೆ ಅದೇ ದಿನ ಮೂಡಬಿದರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುತ್ತದೆ.
ದೂರಿನ ಅನ್ವಯ ಪತ್ತೆ ಕಾರ್ಯದಲ್ಲಿ ಮೂಡಬಿದ್ರೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀ ಸಂದೇಶ್ ಪಿ ಜಿ ರವರ ನೇತೃತ್ವದಲ್ಲಿ ಅಪರಾಧ ಪತ್ತೆ ವಿಭಾಗದ ಸಿಬ್ಬಂದಿಗಳಾದ ಮಹಮದ್ ಹುಸೇನ್,ಮಹಮದ್ ಇಕ್ಬಾಲ್, ಅಖಿಲ್ ಅಹಮದ್ ನಾಗರಾಜ ಲಮಾಣಿ ಮತ್ತು ವೆಂಕಟೇಶ್ ರವರು ಎರಡು ದಿನಗಳಲ್ಲಿ ಪತ್ತೆಗೆ ಶ್ರಮಿಸಿ ಸದರಿ ಕಳೆದುಕೊಂಡ ಬಂಗಾರ ಮತ್ತು ಪರ್ಸ್ ನ್ನು ಪತ್ತೆ ಮಾಡಿ ವಾರಸುದಾರರಿಗೆ ಹಸ್ತಾಂತರಿಸುತ್ತಾರೆ. ಬಂಗಾರದ ಮೌಲ್ಯ ಸುಮಾರು 10 ಲಕ್ಷ ಆಗಬಹುದು. ಈ ಬಗ್ಗೆ ಸಾರ್ವಜನಿಕರು ಪ್ರಶಂಸೆಯನ್ನು ವ್ಯಕ್ತಪಡಿಸುತ್ತಾರೆ.