ಕವಿಯೂ ಆಲಯವನ್ನು ಕಟ್ಟುವುದು ಮೀರುವುದು ಅನಿವಾರ್ಯ: ಆನಂದ ಝಂಜರವಾಡ

Spread the love

ಕವಿಯೂ ಆಲಯವನ್ನು ಕಟ್ಟುವುದು ಮೀರುವುದು ಅನಿವಾರ್ಯ: ಆನಂದ ಝಂಜರವಾಡ

ಮೂಡಬಿದ್ರೆ: ಕವಿಯ ಅಸ್ತ್ರ ಕವಿರೂಪಕ. ನಮ್ಮ ಇಂದಿನ ಅಂದಿನ ಕವಿಗಳೆಲ್ಲರೂ ಬಯಲಿನಲ್ಲಿ ಆಲಯವನ್ನು ಕಟ್ಟಿದವರು, ಇಂತಹವರಲ್ಲಿ ನಾನು ಒಬ್ಬ ಎಂದರೇ ತಪ್ಪಾಗಲಾರದು ಎಂದು ಆನಂದ ಝಂಜರವಾಡ ಹೇಳಿದರು.

`ಆಳ್ವಾಸ್ ನುಡಿಸಿರಿ 2018’ರ ಅಂಗವಾಗಿ ರತ್ನಕರವರ್ಣಿ ವೇದಿಕೆಯಲ್ಲಿ ನಡೆದ `ಕವಿಸಮಯ-ಕವಿನಮನ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

`ನಾ ಕವಿತೆಯೊಡನೆ ಸಂಸಾರಮಾಡಿದವ, ಕವಿತೆಗಳ ಬಗ್ಗೆ ಅಪಾರ ಪ್ರೀತಿ, ಗೌರವ ಮತ್ತು ವಿಶ್ವಾಸವನ್ನು ಹೊಂದಿದವ. ಕನ್ನಡ ಕಾವ್ಯಗಳ ಸಾವಿರ ವರ್ಷದ ಪರಂಪರೆಯನ್ನು ಒಂದು ರೀತಿಯಲ್ಲಿ ಗ್ರಹಿಸುವುದಾದರೆ ನಮ್ಮ ಎಲ್ಲಾಕವಿಗಳು ಬಯಲಿನಲ್ಲಿ ಆಲಯವನ್ನು ಕಟ್ಟಿದವರು. ಆಲಯವನ್ನು ಯಾಕೆ ಕಟ್ಟಿದರೆಂದರೆ ಆಲಯವನ್ನು ಮೀರಿ ಹೋರಹೋಗಬೇಕಿತ್ತು ಎಂದು ತಿಳಿದು ಆಲಯವನ್ನು ಕಟ್ಟಿದರು. ಆದರೆ ಆಧುನಿಕರಿಗೆ ಒಂದು ಪ್ರಶ್ನೆ ಬರಬಹುದು ಬಯಲಿನಲ್ಲಿ ಆಲಯವನ್ನು ಕಟ್ಟಿ ಆಲಯವನ್ನು ಮೀರಿ ಹೊರಹೋಗಿ ಬಯಲನ್ನು ಸೇರೋದಾದ್ರೆ ಆಲಯವನ್ನು ಕಟ್ಟೊದಾದರೂ ಯಾಕೆ ಎಂದು. ಆಲಯ ಪ್ರತಿಯೊಬ್ಬ ಕವಿಯ ಅಡಿಪಾಯ ಆದ್ದರಿಂದ ಕವಿಯು ಆಲಯವನ್ನು ಕಟ್ಟಿಕೊಳ್ಳುತ್ತಾನೆ. ಕಾವ್ಯ ಅನ್ನುವುದು ನಿಮ್ಮ ನರ ನಾಡಿಗಳಲ್ಲಿ ರಚಿತವಾದದ್ದು, ನಿಮ್ಮಗೆ ಯಾವ ಕಲ್ಪನೆ ಒಂದು ಕವಿತೆಯ ಅಡಿಪಾಯವನ್ನ ಹಾಕುತ್ತದಯೋ ಅದು ಮುಂದಿನ ದಿನಗಳಲ್ಲಿ ನಿಮ್ಮನ್ನು ಇನ್ನಷ್ಟು ಕವಿತೆಗಳ ರಚನಕಾರರನ್ನಾಗಿ ಮಾಡುತ್ತದೆ ಎಂದರು.

ಕಾವ್ಯ ಸಂಸ್ಕøತಿಯನ್ನು ವಿವರಿಸಿದ ಅವರು, ಕನ್ನಡ ಕಾವ್ಯದಲ್ಲಿ ಎರಡೂ ಸಂಸ್ಕøತಿಗಳ ಕಟ್ಟಡಗಳನ್ನ ಕಾಣಬಹುದು. ಒಂದನ್ನು ನಾನು ಬಿಲ್ಲ ಸಂಸ್ಕøತಿ ಎಂದು ಇನ್ನೊಂದನ್ನು ಅಪಾರ್ಟ್‍ಮೆಂಟ್ ಸಂಸ್ಕøತಿಯೆಂದು ಕರೆಯುತ್ತೇನೆ. ದಾಸ ಸಾಹಿತ್ಯ ಎನ್ನುವುದು ಅಪಾರ್ಟ್‍ಮೆಂಟ್ ಸಂಸ್ಕøತಿ ಅಂದರೆ ಪಾಯವೊಂದೆ ಆದರೆ ಅನೇಕರು ಎತ್ತರದ ಮೇಲೆ ಬರೆಯುವುದರಿಂದ ನಾನು ಅಪಾರ್ಟ್‍ಮೆಂಟ್ ಸಂಸ್ಕøತಿಯೆಂದು ಹೇಳಬಲ್ಲೆ. ವಚನ ಸಂಸ್ಕøತಿ ಒಂದು ರೀತಿಯಲ್ಲಿ ಬಿಲ್ಲ ಸಂಸ್ಕøತಿಯಿದ್ದ ಹಾಗೇ, ಅದು ಬಸವಣ್ಣ , ಅಕ್ಕಮಹಾದೇವಿ, ಅಲ್ಲಮ ಇವರೆಲ್ಲರ ಪಾಯ ಬೇರೆಯಾದರೂ ಇರುವುದೊಂದೆ ನೆಲದಲ್ಲಿ. ಈ ರೀತಿಯಲ್ಲಿ ನಮ್ಮ ನಡುವಲ್ಲಿ ಬಿಲ್ಲ ಸಂಸ್ಕøತಿ ಮತ್ತು ಅಪಾರ್ಟ್‍ಮೆಂಟ್ ಸಂಸ್ಕøತಿಯೆಂಬ ಅಂಶಗಳು ಬೆಳೆದು ನಿಂತಿವೆ ಎಂದು ಹೇಳಿದರು.

ಕಾವ್ಯದ ರಚನೆಯಲ್ಲಿ ಅತಿಯಾದ ಮೋಹ ಮತ್ತು ಕಾವ್ಯದ ಬಗ್ಗೆ ಇರುವ ಅವೈಜ್ಞಾನಿಕ ಅಪನಂಬಿಕೆ ಇವುಗಳೆಲ್ಲಾ ಕನ್ನಡ ಕಾವ್ಯದಲ್ಲೇ ಬಹಳಷ್ಟು ಸಮಸ್ಯೆಗಳು ಎದುರಾಗುತ್ತವೆ. ಜಾತಿ ಭೇದವಿಲ್ಲದೇ ಕವಿತೆಗಳನ್ನು ಬರೆಯುವುದು ಗಮನಾರ್ಹವಾದುದು ಎಂದು ಕಾವ್ಯ ರಚನೆಯ ಸೂಕ್ಷಮತೆಗಳನ್ನು ವಿವರಿಸಿದರು.

ಈ ಸಮಯದಲ್ಲಿ ಅವರು ಬರೆದ `ಹುಲ್ಲು ಗರಿಕೆ’ ಎಂಬ ಕವಿತೆಯನ್ನು ವಾಚಿಸಿದರು. `ನಿನ್ನೆ ನಾಳೆಗಳ ನಟ್ಟ ನಡುವಿಯೇ ಪ್ರತಿಷ್ಠ ವರ್ತಮಾನ, ಹುಟ್ಟು ಸಾವು ಪಟ್ಟಣದ ಹಬ್ಬ, ಸುಳಿಮದ್ದು ಬಿಡುಸು ಬಾಣ, ಸುಖ ದುಃಖಗಳ ತೀರ ನಡೆಯುವುದು ಹರಿಯುವುದು ಕೊನೆಯ ಜೀವದಾಹ’ ಈ ಕವಿತೆಯನ್ನು ಕೃಷ್ಣ ಕಾರಂತರವರ ಧ್ವನಿಯಲ್ಲಿ, ಎಂ ಎಸ್ ಗಿರಿಧರ್ ನಿರ್ದೇಶನದಲ್ಲಿ ಹಾಡಲಾಯಿತು.

ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರು ಡಾ.ಎಂ. ಮೋಹನ್ ಆಳ್ವ ಉಪಸ್ಥಿತರಿದ್ದರು.

ವರದಿ: ಕಾವ್ಯ ಗೌಡ, ಆಳ್ವಾಸ್ ಪತ್ರಿಕೋದ್ಯಮ ವಿಭಾಗ


Spread the love