ಕಾಂಗ್ರೆಸ್ ಪಕ್ಷದಿಂದ ನಿಷ್ಠಾವಂತ ಕಾರ್ಯಕರ್ತರಿಗೆ ಗೌರವ – ಶಾಸಕ ಲೋಬೊ

Spread the love

ಮಂಗಳೂರು: ಕಾಂಗ್ರೆಸ್ ಪಕ್ಷವು ನಿಷ್ಠಾವಂತ ಹಾಗೂ ಹಿರಿಯ ಕಾರ್ಯಕರ್ತರನ್ನು ಗುರುತಿಸಿ, ಅವರು ಪಕ್ಷಕ್ಕೆ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಅವರನ್ನು ರಾಜ್ಯ ಸರ್ಕಾರದ ವಿವಿಧ ನಿಗಮ, ಮಂಡಳಿಗಳಿಗೆ ನಿರ್ದೇಶಕರನ್ನಾಗಿ ನೇಮಿಸಿರುವುದು ನಮಗೆಲ್ಲರಿಗೂ ಅತೀವ ಸಂತಸ ತಂದಿದೆ ಮತ್ತು ಪಕ್ಷವು ನಿಷ್ಠಾವಂತ ಕಾರ್ಯಕರ್ತರಿಗೆ ಗೌರವವನ್ನು ನೀಡಿದೆ ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಶ್ರೀ ಜೆ.ಆರ್. ಲೋಬೊರವರು ರಂದು ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿಯ ಮಾಸಿಕ ಸಭೆಯಲ್ಲಿ ಇತ್ತೀಚೆಗೆ ರಾಜ್ಯ ಸರಕರಾದ ವತಿಯಿಂದ ಕೆ.ಎಸ್.ಆರ್.ಟಿ.ಸಿ. ನಿಗಮ ಮಂಡಳಿಗೆ ನಿರ್ದೇಶಕರಾಗಿ ನೇಮಕಗೊಂಡ ಶ್ರೀ ಟಿ.ಕೆ. ಸುಧೀರ್ ಹಾಗೂ ಮೆಸ್ಕಾಂ ನಿರ್ದೇಶಕರಾಗಿ ನೇಮಕಗೊಂಡ ಶ್ರೀ ಜೆ. ಸದಾಶಿವ ಅಮೀನ್‍ರವರಿಗೆ ಅಭಿನಂದಿಸಿ ಮಾತನಾಡಿದರು.

lobo-party-workers-congress

ಇತ್ತೀಚೆಗೆ ನಡೆದಂತಹ ವಿಧಾನ ಪರಿಷತ್ ಚುನಾವಣೆ ಹಾಗೂ ರಾಜ್ಯ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ತನ್ನ ಸ್ಥಾನಗಳನ್ನು ಗೆಲ್ಲುವುದರ ಮೂಲಕ ಕಾಂಗ್ರೆಸ್ ಪಕ್ಷ ಬಲಿಷ್ಠವಾಗಿದೆ ಎಂದು ತೋರಿಸಿಕೊಟ್ಟಿದೆ. ದೇಶದಲ್ಲಿ ಇಂದು ಮೋದಿ ಸರಕಾರ ಚುನಾವಣೆಯ ಸಂದರ್ಭದಲ್ಲಿ ತಾನು ಕೊಟ್ಟ ಯಾವುದೇ ಆಶ್ವಾಸನೆಗಳನ್ನು ಪೂರೈಸದೇ ಇದ್ದುದರಿಂದ ತನ್ನ ವೈಫಲ್ಯಗಳನ್ನು ತೋರಿಸಿದೆ. ಇದರಿಂದ ಅವರ ಜನಪ್ರಿಯತೆ ದಿನದಿಂದ ದಿನಕ್ಕೆ ಕುಗ್ಗುತ್ತ ಬಂದಿದೆ. ಮುಂದಿನ ಮಹಾಚುನಾವಣೆಯಲ್ಲಿ ಮತ್ತೆ ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಅಸ್ಥಿತ್ವಕ್ಕೆ ಬರಲಿದೆ ಎಂದರು.
ಸಭೆಯಲ್ಲಿ ಉಪಸ್ಥಿತರಿದ್ದ ಕರ್ನಾಟಕ ವಿಧಾನಪರಿಷತ್ ಸದಸ್ಯ ಶ್ರೀ ಐವನ್ ಡಿ’ಸೋಜರವರು ಮಾತನಾಡುತ್ತಾ ವಿಧಾನಪರಿಷತ್‍ನ 4 ಸ್ಥಾನ ಹಾಗೂ ರಾಜ್ಯ ಸಭೆಯ 3 ಸ್ಥಾನಗಳನ್ನು ಗೆದ್ದುಕೊಳ್ಳುವುದರ ಮೂಲಕ ಕಾಂಗ್ರೆಸ್ ತನ್ನ ಬಲವನ್ನು ತೋರಿಸಿಕೊಂಡಿದೆ. ಮುಂದಿನ 2018ರಲ್ಲಿ ನಡೆಯತಕ್ಕಂತಹ ರಾಜ್ಯ ವಿಧಾನಸಭೆ ಚುನಾವಣೆಗೆ ನಾವು ಈಗಿಂದೀಗಲೇ ತಯಾರಿ ನಡೆಸಬೇಕು. ಸರಕಾರದ ಜನಪ್ರಿಯ ಕಾರ್ಯಕ್ರಮಗಳನ್ನು ಜನತೆಗೆ ತಲುಪಿಸುವಲ್ಲಿ ನಾವೆಲ್ಲರೂ ಶ್ರಮಿಸಬೇಕು ಎಂದರು.
ಬ್ಲಾಕ್ ಅಧ್ಯಕ್ಷ ಶ್ರೀ ಬಾಲಕೃಷ್ಣ ಶೆಟ್ಟಿಯವರು ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಮಾಜೀ ಮೇಯರ್ ಜೆಸಿಂತಾ ಅಲ್ಫ್ರೇಡ್, ಕಾರ್ಪೋರೇಟರ್‍ಗಳಾದ ರತಿಕಲಾ, ಶೈಲಜಾ, ಕವಿತಾ ವಾಸು, ಪ್ರವೀಣ್ ಆಳ್ವ, ಆಶಾ ಡಿ’ಸಿಲ್ವ ಪಕ್ಷದ ಮುಖಂಡರುಗಳಾದ ಪ್ರಭಾಕರ ಶ್ರೀಯಾನ್, ಎಂ. ಫಾರೂಕ್, ಶೇಖರ ಸುವರ್ಣ, ನಮಿತಾ ರಾವ್. ದುರ್ಗಾಪ್ರಸಾದ್, ರಮಾನಂದ ಪೂಜಾರಿ, ಸುರೇಶ್ ಶೆಟ್ಟಿ, ಬೆನೆಟ್ ಡಿ’ಮೆಲ್ಲೊ, ಭಾಸ್ಕರ ರಾವ್, ಶಾಫಿ ಬೋಳಾರ, ಕೃತಿನ್ ಕುಮಾರ್, ಸುನಿಲ್ ದೇವಾಡಿಗ, ವಿದ್ಯಾ, ಹುಸೈನ್ ಬೋಳಾರ, ಸೀತಾರಾಮ, ಅಶ್ರಫ್ ಬಜಾಲ್. ರಫೀಕ್ ಕಣ್ಣೂರು ಮೊದಲಾದವರು ಉಪಸ್ಥಿತರಿದ್ದರು.


Spread the love