ಕಾರ್ಕಳ: ಕಾರ್ಮಿಕನನ್ನು ಜೀತದಿಂದ ಮುಕ್ತಗೊಳಿಸಿದ ಪೋಲಿಸರು ಮತ್ತು ಪತ್ರಕರ್ತರು

Spread the love

ಕಾರ್ಕಳ: ಮೂರು ತಿಂಗಳಿನಿಂದ ವಸ್ತುಶಃ ಜೀತದಾಳಿನಂತೆ ದುಡಿಯುತ್ತಿದ್ದ ರಾಜಸ್ತಾನ ಮೂಲದ ಯುವಕನನ್ನು ಜೀತದಿಂದ ಮುಕ್ತಿಗೊಳಿಸಿ ನ್ಯಾಯ ಕೊಡಿಸಲಾದ ಘಟನೆ ಕಾರ್ಕಳದಲ್ಲಿ ನಡೆದಿದೆ.

ಗ್ರನೈಟ್ ಸಂಸ್ಥೆಯೊಂದರಲ್ಲಿ ಸಂಬಳವಿಲ್ಲದೆ ದುಡಿಯುತ್ತಿದ್ದ ರಾಜಸ್ತಾನ ಮೂಲದ ಯುವಕ ಸಿಕ್ಕು ಎಂಬ 22ರ ಹರೆಯದ ಯುವಕ ಕಾರ್ಕಳ ಪೊಲೀಸರ ಮಧ್ಯಸ್ಥಿಕೆ ಮೂಲಕ ನ್ಯಾಯ ಪಡೆದಿದ್ದಾನೆ.
ರಾಜಸ್ಥಾನದಿಂದ 22 ವರ್ಷ ಹರೆಯದ ಸಿಕ್ಕು ಮೂರು ತಿಂಗಳ ಹಿಂದೆ ಕೂಲಿ ಕೆಲಸಕ್ಕಾಗಿ ಕಾರ್ಕಳಕ್ಕಾಗಮಿಸಿದ್ದ. ನೆಲಕ್ಕೆ ಗ್ರಾನೈಟ್ ಹಾಕುವ ಕಾಮಗಾರಿ ನಡೆಸುವ ದೇಸ್ರಾತ್ ಎಂಬ ಮಾಲೀಕನ ಜತೆ ಕೆಲಸಕ್ಕೆ ಸೇರಿಕೊಂಡಿದ್ದ. ಆದರೆ ದುಡಿಸಿಕೊಂಡ ಮಾಲಿಕ ಕೂಲಿ ಹಣ ನೀಡದೇ ಇದ್ದಾಗ ತಬ್ಬಿಬ್ಬಾದ. ಹೊಟ್ಟೆಗೂ ಇಲ್ಲದೆ ಕಳೆದ ಒಂದು ವಾರದಿಂದ ಕಾರ್ಕಳದಲ್ಲಿ ಅಲೆದಾಡುತ್ತಿದ್ದ.

47206415

ದೇಸ್ರಾತ್ ಆತನಿಗೆ ದಿನವೊಂದಕ್ಕೆ 325 ರೂ. ಕೂಲಿ ನೀಡುತ್ತೇನೆ ಎಂದು ನಂಬಿಸಿದ್ದ ಎನ್ನಲಾಗಿದೆ. ಅದರಂತೆ ಸಿಕ್ಕುಗೆ 26,030ರೂ. ಸಿಗಬೇಕಾಗಿತ್ತು. ಮಾಲಿಕ ನೀಡಿರುವುದು ಕೇವಲ 2 ಸಾವಿರ ರೂ. ಮಾತ್ರ. ಸಂಬಳ ಕೇಳಿದಾಗ ‘ಕೆಲಸ ಬಿಟ್ಟು ಹೋಗು,ಇಲ್ಲವಾದಲ್ಲಿ ಅನ್ನ ಮಾತ್ರ ನೀಡುತ್ತೇನೆ’ ಎಂದು ದಬಾಯಿಸಿದ್ದಲ್ಲದೆ, ಜೀತದಾಳಿನಂತೆ ದುಡಿಸಿದ್ದ ಎಂದು ಆರೋಪಿಸಲಾಗಿದೆ.

ರಾಜಸ್ಥಾನದಿಂದ ಬಂದಿದ್ದ ಸಿಕ್ಕುಗೆ ಈ ಊರಿನ ಪರಿಚಯವಿಲ್ಲದ ಕಾರಣ ಏನೂ ಮಾಡುವಂತಿರಲಿಲ್ಲ. ದಾರಿ ತೋಚದೆ ಕೆಲವು ಜನಪ್ರತಿನಿಧಿಗಳ ಬಳಿ ಅಲವತ್ತುಕೊಂಡ. ಕೊನೆಗೆ ಠಾಣೆಯ ಮೆಟ್ಟಲೂ ಏರಿದ. ಆತ ಏನು ಹೇಳುತ್ತಾನೆಂಬುದು ಪೊಲೀಸರಿಗೂ ಅರ್ಥವಾಗಲಿಲ್ಲ. ಬಸ್ಸು ನಿಲ್ದಾಣದಲ್ಲಿ ಅಲೆದಾಡುತ್ತಿದ್ದ ಸಿಕ್ಕು ಪತ್ರಕರ್ತರ ಬಳಿ ತನ್ನ ಕಷ್ಟ ತೋಡಿಕೊಂಡಾಗ ಪತ್ರಕರ್ತರು ಇತನಿಗೆ ನೆರವಾಗಿ ನಗರ ಪಿಎಸ್ಐ ಕಬ್ಬಲ್ ರಾಜ್ ಬಳಿ ದೂರು ನೀಡಿದರು.

ದೂರನ್ನು ಸ್ವೀಕರಿಸಿದ ಪೋಲಿಸರು ಮಾಲಿಕನನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿ ಸಿಕ್ಕುವಿಗೆ ಸಲ್ಲಬೇಕಾದ ಹಣವನ್ನು ಮಾಲಿಕನಿಂದ ತೆಗೆಸಿ ಕೊಟ್ಟಿದ್ದಾರೆ.


Spread the love