ಕುಂದಾಪುರ: ಮೀನು ಹಿಡಿಯಲು ತೆರಳಿದ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವು

Spread the love

ಕುಂದಾಪುರ: ದೇವಸ್ಥಾನದ ಕೆರೆಯಲ್ಲಿ ಮೀನು ಹಿಡಿಯಲು ಹೋದ ವ್ಯಕ್ತಿ ನೀರು ಪಾಲಾದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ

ಮೃತಪಟ್ಟವರನ್ನು ಬಿದ್ಕಲ್ ಕಟ್ಟೆ ನಿವಾಸಿ ಗೋಪಾಲ್ ಕುಲಾಲ (45) ಎಂದು ಗುರುತಿಸಲಾಗಿದೆ.

ಗುರುವಾರ ಮಧ್ಯಾಹ್ನ ಮೊಳಹಳ್ಳಿ ಮಹಾಗಣಪತಿ ದೇವಸ್ಥಾನ ಸಮೀಪದ ಹುಲಿಕಲ್ ಕೆರೆಗೆ ಮೀನು ಹಿಡಿಯಲು ಗೋಪಾಲ್ ಅವರು ಆಟೋದಲ್ಲಿ ಪ್ರಯಾಣಿಸಿದ್ದು, ಬಟ್ಟೆಯನ್ನು ಕೆರೆಯ ದಂಡೆಯಲ್ಲಿರಿಸಿ ಕೆರೆಗೆ ಇಳಿದಿದ್ದರು. ನಾಲ್ಕೈದು ಹೆಜ್ಜೆ ಇರಿಸುತ್ತಿರುವಂತೆಯೇ ನೀರಿನಲ್ಲಿ ಮುಳುಗಿದ್ದರು. ಬೊಬ್ಬೆ ಕೇಳಿ ರಿಕ್ಷಾ ಚಾಲಕ ಸ್ಥಳೀಯರನ್ನು ಕರೆದಿದ್ದು ಅವರು ಬರುವಷ್ಟರಲ್ಲಿ ಕುಲಾಲ್ ಕಣ್ಮರೆಯಾಗಿದ್ದರು. ಅಪರಾಹ್ನ 3.30ರ ಸುಮಾರಿಗೆ ಅಗ್ನಿಶಾಮಕ ದಳ ಸಿಬ್ಬಂದಿಗಳು, ಮುಳುಗುಗಾರ ಮಂಜುನಾಥ ನಾಯ್ಕ್ ಕೆರೆಗೆ ಧುಮುಕಿ ಜಾಲಾಡಿದ್ದರೂ ವ್ಯಕ್ತಿಯ ಸುಳಿವು ಪತ್ತೆಯಾಗಿಲ್ಲ. ತೆಪ್ಪ, ದೋಣಿ ನೆರವು ಪಡೆದು ಕೆರೆ ಹಾಗೂ ಅದಕ್ಕೆ ಹೊಂದಿಕೊಂಡಿರುವ ವಾರಾಹಿ ಎಡದಂಡೆ ಕಾಲುವೆ ಪ್ರದೇಶದಲ್ಲಿ ತೀವ್ರ ಹುಡುಕಾಟ ಮುಂದುವರಿಸಲಾಗಿದೆ.
 ಕೋಟ ಪಿಎಸ್‌ಐ ಬಸಪ್ಪ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು ಕಾರ್ಯಾಚರಣೆಗೆ ಸಹಕಾರ ನೀಡಿದ್ದಾರೆ.


Spread the love