ಕಾರ್ಯಕರ್ತರ ಹತ್ಯೆಗೆ ಬೆಂಬಲ ನೀಡುತ್ತಿರುವ ಪಿಣರಾಯಿ ಮಂಗಳೂರಿಗೆ ಬರುವುದು ಬೇಡಾ- ವೇದವ್ಯಾಸ ಕಾಮತ್

Spread the love

ಕಾರ್ಯಕರ್ತರ ಹತ್ಯೆಗೆ ಬೆಂಬಲ ನೀಡುತ್ತಿರುವ ಪಿಣರಾಯಿ ಮಂಗಳೂರಿಗೆ ಬರುವುದು ಬೇಡಾ- ವೇದವ್ಯಾಸ ಕಾಮತ್

ಮಂಗಳೂರು: ಎಡಪಕ್ಷಗಳು ಕೇರಳದಲ್ಲಿ ದಿನನಿತ್ಯ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರ ಮೇಲೆ ನಡೆಸುತ್ತಿರುವ ಹಲ್ಲೆ, ದೌರ್ಜನ್ಯ ಮತ್ತು ಸರಣಿಕೊಲೆಗಳನ್ನು ಖಂಡಿಸಿ ಮತ್ತು ಅದಕ್ಕೆ ಮೌನ ಸಮ್ಮತಿ ನೀಡುತ್ತಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಮಂಗಳೂರು ಭೇಟಿಯನ್ನು ವಿರೋಧಿಸಿ ಬಜರಂಗದಳ-ವಿಶ್ವ ಹಿಂದೂ ಪರಿಷತ್ ಕರೆ ಕೊಟ್ಟಿರುವ ಫೆಬ್ರವರಿ 25 ರ ಜಿಲ್ಲಾ ಹರತಾಳಕ್ಕೆ ಮಂಗಳೂರು ನಗರ ದಕ್ಷಿಣ ಬಿಜೆಪಿ ಸಂಪೂರ್ಣ ಬೆಂಬಲ ಘೋಷಿಸಿದೆ ಎಂದು ನಗರ ದಕ್ಷಿಣ ಬಿಜೆಪಿ ಅಧ್ಯಕ್ಷ ಡಿ ವೇದವ್ಯಾಸ ಕಾಮತ್ ತಿಳಿಸಿದ್ದಾರೆ.

ಯಾವುದೇ ದೌರ್ಜನ್ಯಕ್ಕೂ ಮಿತಿ ಇದೆ. ಬಿಜೆಪಿಯ ಸಾಮಾನ್ಯ ಕಾರ್ಯಕರ್ತರನ್ನು ಎಡಪಕ್ಷಗಳ ಮುಖಂಡರು ದಿನನಿತ್ಯ ಎನ್ನುವಂತೆ ಹಿಂಸಿಸಿ ಕೊಲ್ಲುತ್ತಿದ್ದಾರೆ. ಅದರ ವಿರುದ್ಧ ಕ್ರಮ ಕೈಗೊಳ್ಳಬೇಕಿದ್ದ ಅಲ್ಲಿನ ಮುಖ್ಯಮಂತ್ರಿ ಸುಮ್ಮನೆ ಕುಳಿತು ಕಮ್ಯೂನಿಸ್ಟ್ ಗೂಂಡಾಗಳಿಗೆ ಪರೋಕ್ಷವಾಗಿ ಸಹಕರಿಸುತ್ತಿದ್ದಾರೆ. ಅಂತಹ ಮುಖ್ಯಮಂತ್ರಿಯೊಬ್ಬರು ಮಂಗಳೂರಿಗೆ ಭೇಟಿ ನೀಡಿ ಕೋಮು ಸೌಹಾರ್ದತೆ ಬಗ್ಗೆ ಮಾತನಾಡುತ್ತಾರೆ ಎಂದರೆ ಇದನ್ನು ಕರ್ನಾಟಕ, ಕೇರಳದ ಯಾವನೇ ದೇಶಭಕ್ತ ನಂಬುವ ಸ್ಥಿತಿಯಲ್ಲಿಲ್ಲ. ಕೇರಳದಲ್ಲಿ ಬಿಜೆಪಿ ಕಾರ್ಯಕರ್ತರ ಸರಣಿ ಕೊಲೆಗಳಿಂದ ಅಲ್ಲಿ ನೂರಾರು ಕುಟುಂಬಗಳು ಬೀದಿಗೆ ಬಿದ್ದಿವೆ. ಅಮಾಯಕ ಯುವಕರನ್ನು ಕೊಲ್ಲುವಂತಹ ರಾಜ್ಯದ ಮುಖ್ಯಮಂತ್ರಿ ಶಾಂತಿಪ್ರಿಯ ಮಂಗಳೂರಿಗೆ ಬಂದು ಇಲ್ಲಿ ಭಾಷಣ ಮಾಡುವುದನ್ನು ಯಾವ ವ್ಯಕ್ತಿ ಕೂಡ ಒಪ್ಪಲು ಸಾಧ್ಯವಿಲ್ಲ. ಆದ್ದರಿಂದ ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಯೊಬ್ಬ ನಾಗರಿಕ ಕೂಡ ಸ್ವಯಂಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಹರತಾಳದಲ್ಲಿ ಭಾಗವಹಿಸಬೇಕಾಗಿ ವೇದವ್ಯಾಸ ಕಾಮತ್ ವಿನಂತಿಸಿದ್ದಾರೆ.


Spread the love