ಕಾಸರಗೋಡು:: ಚಂದ್ರಗಿರಿ ಹೊಳೆಗಿಳಿದ ನಾಲ್ವರಲ್ಲಿ ಒಬ್ಬ ನೀರುಪಾಲು

Spread the love

ಕಾಸರಗೋಡು: ಹೊಳೆಯಲ್ಲಿ ಸ್ನಾನಕ್ಕೆ ತೆರಳಿದ ವಿದ್ಯಾರ್ಥಿಗಳ ಪೈಕಿ ಒರ್ವ ನೀರು ಪಾಲಾದ ಘಟನೆ ಕಾಸರಗೋಡಿನಲ್ಲಿ ಗುರುವಾರ ನಡೆದಿದೆ.

ಇಲ್ಲಿನ ಚಂದ್ರಗಿರಿ ಹೊಳೆಗೆ ಸ್ನಾನಕ್ಕಿಳಿದ ನಾಲ್ವರು ವಿದ್ಯಾರ್ಥಿಗಳ ಪೈಕಿ ನೆಲ್ಲಿಕುನ್ನು ನಿವಾಸಿ ಸನುಪು (15) ನಾಪತ್ತೆಯಾಗಿದ್ದು ನೆಲ್ಲಿಕುನ್ನು ನಿವಾಸಿಗಳಾದ ಜಹಾಂಗೀರ್, ಹನೀಫ್ ಹಾಗೂ ರಿಯಾಸ್ ಎಂಬವರು ಅಪಾಯದಿಂದ ಪಾರಾಗಿದ್ದಾರೆ.

ಸಂಜೆ 4.15ರ ವೇಳೆಗೆ ಹೊಳೆಯಲ್ಲಿ ಸ್ನಾನ ಮಾಡುತ್ತಿದ್ದ ಸಂದರ್ಭದಲ್ಲಿ ಸನುಪು ನೀರಿನ ಸೆಳೆತಕ್ಕೊಳಪಟ್ಟು ನಾಪತ್ತೆಯಾಗಿದ್ದ. ಕೂಡಲೇ ಮಾಹಿತಿ ಪಡೆದ ಪೊಲೀಸರು ಹಾಗೂ ಅಗ್ನಿಶಾಮಕದಳ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದಾರೆ. ಚೆಮ್ನಾಡು ಸೇತುವೆ ಬಳಿ ನಡೆದ ಘಟನೆಯಂತೆ ಫೈಬರ್ ಬೋಟ್ ಹಾಗೂ ದೋಣಿ ಸಹಾಯದಿಂದ ಹುಡುಕಾಟ ನಡೆಸುತ್ತಿದ್ದಾರೆ.


Spread the love