ಮಂಗಳೂರು/ಉಡುಪಿ: ಜೂನ್ 1ರಿಂದ 61 ದಿನ ಯಾಂತ್ರಿಕೃತ ಮೀನುಗಾರಿಕೆ ನಿಷೇಧ

Spread the love

ಮಂಗಳೂರು/ಉಡುಪಿ: ರಾಜ್ಯ ಕರಾವಳಿಯಲ್ಲಿ ಜೂನ್ 1ದಿಂದ ಜುಲೈ 31ರವರೆಗೆ 61 ದಿನಗಳ ಕಾಲ ಯಾಂತ್ರೀಕೃತ ದೋಣಿ ಮೀನುಗಾರಿಕೆಯನ್ನು ನಿಷೇಧಿಸಿ ಮೀನುಗಾರಿಕಾ ಇಲಾಖೆ ಆದೇಶ ಹೊರಡಿಸಿದೆ.

ಯಾಂತ್ರೀಕತ ದೋಣಿಗಳ ಮೂಲಕ ಹಾಗೂ 10 ಅಶ್ವಶಕ್ತಿ ಸಾಮರ್ಥ್ಯಕ್ಕಿಂತ ಮೇಲ್ಪಟ್ಟ ಇನ್‌ಬೋರ್ಡ್ ಅಥವಾ ಔಟ್‌ಬೋರ್ಡ್ ಯಂತ್ರಗಳನ್ನು ಅಳವಡಿಸಿರುವ ಸಾಂಪ್ರದಾಯಿಕ ದೋಣಿಗಳ ಮೂಲಕ ಯಾವುದೇ ಬಲೆ, ಸಾಧನಗಳನ್ನು ಬಳಸಿ ಕೈಗೊಳ್ಳುವ ಮೀನುಗಾರಿಕೆ ಚಟುವಟಿಕೆಗೆ ನಿಷೇಧವಿದೆ.

ಇದೇ ವೇಳೆ, ಕೇಂದ್ರ ಕಷಿ , ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವಾಲಯವು ಕರ್ನಾಟಕ ಸೇರಿದಂತೆ ಪಶ್ಚಿಮ ಕರಾವಳಿಯ ಎಲ್ಲಾ ರಾಜ್ಯಗಳ ವಿಶೇಷ ಆರ್ಥಿಕ ವಲಯದ ( 12 ರಿಂದ 200 ನಾಟಿಕಲ್ ಮೈಲಿ) ಜಲಪ್ರದೇಶದಲ್ಲಿ ಜೂ. 1ರಿಂದ ಜುಲೈ 31ರವರೆಗೆ ಒಟ್ಟು 61 ದಿನಗಳ ಮೀನುಗಾರಿಕೆ ನಿಷೇಧ ಹೇರಿ ಏಕರೂಪದ ಮೀನುಗಾರಿಕೆ ನಿಷೇಧ ಜಾರಿಗೊಳಿಸಿದೆ. ಆದೇಶ ಉಲ್ಲಂಘಿಸುವ ಮೀನುಗಾರಿಕಾ ದೋಣಿಗಳು ಮತ್ತು ಮೀನುಗಾರರಿಗೆ ಕರ್ನಾಟಕ ಕಡಲು ಮೀನುಗಾರಿಕೆ ಕಾಯ್ದೆಯಡಿ ದಂಡನೆ ವಿಧಿಸಲಾಗುವುದಲ್ಲದೆ, ಒಂದು ವರ್ಷದ ಅವಧಿಗೆ ಡೀಸೆಲ್ ಮೇಲಿನ ಸಹಾಯಧನ ಪಡೆಯಲು ಅನರ್ಹರಾಗುತ್ತಾರೆ ಎಂದು ಮೀನುಗಾರಿಕಾ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.


Spread the love