ಕಿವಿಯಲ್ಲಿ ಹೂ ಇಟ್ಟುಕೊಂಡು ಬಂದಿಲ್ಲ, ರಾಜಕಾರಣ ಮಾಡಲು ಬಂದಿದ್ದೇನೆ; ಡಿ.ಕೆ. ಶಿವಕುಮಾರ್‌

Spread the love

ಕಿವಿಯಲ್ಲಿ ಹೂ ಇಟ್ಟುಕೊಂಡು  ಬಂದಿಲ್ಲ. ರಾಜಕಾರಣ ಮಾಡಲು ಬಂದಿದ್ದೇನೆ; ಡಿ.ಕೆ. ಶಿವಕುಮಾರ್‌

ಬೆಂಗಳೂರು: ನಾನು ಹಳ್ಳಿಯಿಂದ ಬಂದವನು. ಕಿವಿಯಲ್ಲಿ ಹೂ ಇಟ್ಟುಕೊಂಡು  ಬೆಂಗಳೂರಿಗೆ ಬಂದಿಲ್ಲ. ರಾಜಕಾರಣ ಮಾಡಲು ಬಂದಿದ್ದೇನೆ. ರಾಜಕಾರಣ ಮಾಡಿಯೇ ತೀರುತ್ತೇನೆ  ಎಲ್ಲ ವಿಚಾರಗಳ ಬಗ್ಗೆಯೂ ನಾನು ಮುಂದೆ ಉತ್ತರ ಕೊಡುತ್ತೇನೆ. ಈಗ ಏನೂ ಮಾತನಾಡುವ ಸಂದರ್ಭದಲ್ಲಿ ನಾನು ಇಲ್ಲ’ ಎಂದು  ಐಟಿ ದಾಳಿ ನಡೆದ ಬಳಿಕ ಮೊದಲ ಬಾರಿಗೆ ಶನಿವಾರ ಸದಾಶಿವನಗರ ನಿವಾಸದಿಂದ ಹೊರಬಂದ ಸಚಿವ ಡಿ.ಕೆ. ಶಿವಕುಮಾರ್‌ ಡಿಕೆಶಿ ಮಾರ್ಮಿಕವಾಗಿ ನುಡಿದಿದ್ದಾರೆ.

 ನಿವಾಸದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಐಟಿ ಅಧಿಕಾರಿಗಳೆಲ್ಲರೂ ಮನೆಯಿಂದ ಹೋಗಿದ್ದಾರೆ. ನನ್ನ ಮನೆಯಲ್ಲಿ ಏನೇನು ಸಿಕ್ಕಿದೆಯೋ ಅದರ ಬಗ್ಗೆ ಪಂಚನಾಮೆ ಮುಗಿದ ಬಳಿಕ ಮಾಹಿತಿ ಪಡೆದುಕೊಂಡು ಮಾತನಾಡುತ್ತೇನೆ’ ಮುಂದೆ ಏನು ಮಾಡುತ್ತೇನೆ ಎಂಬುದನ್ನು ಈಗಲೇ ಬಹಿರಂಗ ಪಡಿಸುವುದಿಲ್ಲ’ ಎಂದು ಹೇಳಿದ್ದಾರೆ.

 ‘ನಾನು ಕಾನೂನು ಚೌಕಟ್ಟು, ಸಂವಿಧಾನ ಬಿಟ್ಟು ನಡೆದವನಲ್ಲ. ನನ್ನ ಮನೆಯಲ್ಲಿ ವಶಪಡಿಸಿಕೊಂಡಿರುವುದೆಲ್ಲವೂ ಕಾನೂನು ಪ್ರಕಾರ ಸರಿಯಾಗಿದೆ. ಅದಕ್ಕೆ ಮುಂದೆ ದಾಖಲೆಯನ್ನೂ ಕೊಡುತ್ತೇನೆ. ಸತ್ಯಾಂಶವನ್ನು ಯಾರೂ ಮುಚ್ಚಿಡಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.

ಮಾಧ್ಯಮದವರು ತಮ್ಮದೇ ಆದ ವಿಚಾರ ಚಿತ್ರಿಸಿದ್ದೀರಿ. ಈಗ ಏನೂ ಹೇಳುವುದಿಲ್ಲ, ದಾಖಲೆಗಳನ್ನು ನೋಡಿ ಮಾತ್ರ ಹೇಳಬೇಕು. ಪ್ರತಿಯೊಬ್ಬರಿಗೂ ಉತ್ತರ ಕೊಡಲು ಸಿದ್ಧನಿದ್ದೇನೆ. ರಾತ್ರಿಯೆಲ್ಲಾ ಕಾದಿದ್ದೀರಿ ನಿಮ್ಮ ಮನಸ್ಸಿಗೆ ತೋಚಿದ್ದನ್ನು ಬರೆದಿದ್ದೀರಿ, ಕೆಟ್ಟದ್ದಾಗಿ ಚಿತ್ರಿಸಬಹುದು. ಆದರೆ ಸತ್ಯಾಂಶ ಮುಚ್ಚಿಡಲು ಸಾಧ್ಯವಿಲ್ಲ ಎಂದರು. ವಿಶೇಷವಾಗಿ ನಮ್ಮ ಪಕ್ಷದ ರಾಷ್ಟ್ರಿಯ, ರಾಜ್ಯ ನಾಯಕರು, ಕಾರ್ಯಕರ್ತರು, ವಿವಿಧ ಪಕ್ಷದ ನಾಯಕರು, ಅಧಿಕಾರಿಗಳು ನನ್ನ ಕಷ್ಟ ಕಾಲದಲ್ಲಿ ನಿಂತಿದ್ದಾರೆ ಅವರಿಗೆ ಧನ್ಯವಾದಗಳು ಎಂದರು.


Spread the love