ಕೇಂದ್ರ ಸರ್ಕಾರ ರೈತರ ಪರವಾದ ಬಜೆಟ್ ಮಂಡಿಸಿದೆ : ನಳಿನ್ ಕುಮಾರ್ ಕಟೀಲ್

Spread the love

ಕೇಂದ್ರ ಸರ್ಕಾರ ರೈತರ ಪರವಾದ ಬಜೆಟ್ ಮಂಡಿಸಿದೆ : ನಳಿನ್ ಕುಮಾರ್ ಕಟೀಲ್

ಮಂಗಳೂರು: ಕೇಂದ್ರ ಸರ್ಕಾರ ರೈತರ ಪರವಾದ ಬಜೆಟ್ ಮಂಡಿಸಿದೆ. ಕೃಷಿ ಕ್ಷೇತ್ರಕ್ಕೆ ವಿಶೇಷ ಆದ್ಯತೆ ನೀಡಿರುವ ಬಜೆಟ್ ಎಲ್ಲ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಮೂಲಕ  ರೈತರ ಆದಾಯ ಹೆಚ್ಚಳಕ್ಕೆ ಅನುಕೂಲಗಳನ್ನು ಕಲ್ಪಿಸಿದೆ ಎಂದು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯಿಸಿದ್ದಾರೆ.

ರೈತರ ಕಿಸಾನ್ ಕಾರ್ಡ್ ಮೀನುಗಾರರಿಗೂ ವಿಸ್ತರಣೆ. ರೈತ ಮಾರುಕಟ್ಟೆ ಸರಳ ಸಂಪರ್ಕ ಯೋಜನೆ., ಕೃಷಿ ವಸ್ತು ರಫ್ತು ಮೇಲಿನ ನಿರ್ಬಂಧ ತೆರವು, ಕೃಷಿಗಾಗಿಯೇ ಒಂದು ಲ್ಷ ಕೋಟಿ ಸಾಲ ನೀಡುವ ಗುರಿ ರೈತರ ಅಭಿವೃದ್ಧಿಗೆ ಪೂರಕವಾಗಿದೆ.  10 ಕೋಟಿ ಬಡ ಕುಟುಂಬಗಳಿಗೆ 5  ರೂ.ವರೆಗೆ ಉಚಿತ ಚಿಕಿತ್ಸೆಗೆ ಆರೋಗ್ಯ ವಿಮೆ ನೀಡುವುದು ಐತಿಹಾಸಿಕ ಕ್ರಮವಾಗಿದೆ. ಆಮದು ಗೇರು ಬೀಜ ಮೇಲಿನ ಕಸ್ಟಮ್ ಸುಂಕ ಶೇ.5 ರಿಂದ ಶೇ.2.5ಕ್ಕೆ ಇಳಿಕೆ ಮಾಡಿರುವುದು, ಪ್ರತಿ ಮೂರು ಲೋಕಸಭಾ ಕ್ಷೇತ್ರಗಳಿಗೆ ಒಂದು ವೈದ್ಯಕೀಯ ಕಾಲೇಜು , ಮೀನುಗಾರಿಕೆಗೆ 10 ಸಾವಿರ ಕೋಟಿ ಅನುದಾನ. 24 ಹೊಸ ಮೆಡಿಕಲ್ ಕಾಲೇಜುಗಳ ಘೋಷಣೆ. 8 ಕೋಟಿ ಬಡ ಮಹಿಳೆಯರಿಗೆ ಉಚಿತ ಗ್ಯಾಸ್ ಸೌಲಭ್ಯ , ಬೆಂಗಳೂರಿಗೆ 160 ಕಿ.ಮೀ.ಉಪನಗರ  ರೈಲ್ವೆ ಸಂಪರ್ಕ ಯೋಜನೆ ಸ್ವಾಗತಾರ್ಹ ಎಂದು ಸಂಸದ ನಳಿನ್ ಹೇಳಿದ್ದಾರೆ.


Spread the love