ಕೊಡವೂರು- ಜಿಲ್ಲಾಮಟ್ಟದ ಗೂಡು ದೀಪ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭ

Spread the love

ಕೊಡವೂರು- ಜಿಲ್ಲಾಮಟ್ಟದ ಗೂಡು ದೀಪ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭ

ಮಲ್ಪೆ : ಕೊಡವೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಹಳೆವಿದ್ಯಾರ್ಥಿ ಸಂಘ ಹಾಗೂ ಯುವಕ ಸಂಘ ಮತ್ತು ಪಂಚ ಧೂಮಾವತಿ ದೈವಸ್ಥಾನ ಜುಮಾದಿನಗರದ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾಮಟ್ಟದ ಗೂಡು ದೀಪ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭ ಕೊಡವೂರು ವಿಪ್ರಶ್ರೀ ಸಭಾಭವನದಲ್ಲಿ ರವಿವಾರ ಜರಗಿತು.

ಮುಖ್ಯ ಅತಿಥಿಯಾಗಿ ಆಗಮಿಸಿದ ತುಳು ಚಲಚಿತ್ರ ನಟ ರೂಪೇಶ್ ಶೆಟ್ಟಿ ಮಾತನಾಡಿ, ಈ ಕಾಲ ಘಟ್ಟದಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಡಿಸುವ ಜತೆಗೆ ಸಂಸ್ಕಾರಯುತ ಮನುಷ್ಯರನ್ನಾಗಿ ರೂಪಿಸಬೇಕಾಗಿದೆ. ವಿದ್ಯಾವಂತರಲ್ಲಿ ಸಂಸ್ಕಾರದ ಕೊರತೆಯಿಂದ ಮಾನವೀಯ ಸಂಬಂಧಗಳು ಹದಗೆಟ್ಟು ಹಲವಾರು ಸಾಮಾಜಿಕ ಸಮಸ್ಯೆಗಳು ಉದ್ಬವವಾಗುತ್ತಿದೆ ಎಂದು ಹೇಳಿದರು.

ಮಣಿಪಾಲ ಯುಜಿಐನ ಉಪನ್ಯಾಸಕಿ ಅರ್ಪಿತ ಪ್ರಶಾಂತ್ ಶೆಟ್ಟಿ, ಮಲ್ಪೆ ಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಸಾಧು ಸಾಲ್ಯಾನ್, ಮಲಬಾರ್ ಗೋಲ್ಡ್ ಮತ್ತು ಡೈಮಾಂಡ್ ಉಡುಪಿ ಶಾಖಾ ಮುಖ್ಯಸ್ಥ ಹಫೀಜ್ ರೆಹಮಾನ್, ಕೊಡವೂರು ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷ ನಾರಾಯಣ ಬಲ್ಲಾಳ್, ಉಡುಪಿ ಪ್ರೆಸ್ ಫೋಟೋಗ್ರಾಫರ್ ಅಸೋಸಿಯೇಶನ್ ಅಧ್ಯಕ್ಷ ಜನಾರ್ದನ ಕೊಡವೂರು, ಶಂಕರನಾರಾಯಣ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯೆ ಸುಧಾ ಎನ್.ಶೆಟ್ಟಿ, ಯುವಕ ಸಂಘದ ಅಧ್ಯಕ್ಷ ಪ್ರಭಾತ್ ಕೋಟ್ಯಾನ್, ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಹರೀಶ್ ಕೊಡವೂರು, ಜುಮಾದಿ ನಗರ ಪಂಚಧೂಮಾವತಿ ದೈವಸ್ಥಾನದ ಅಧ್ಯಕ್ಷ ಸುಭಾಷ್ ಮೆಂಡನ್ ಉಪಸ್ಥಿತರಿದ್ದರು.
ಅಧ್ಯಕ್ಷತೆಯನ್ನು ನಗರಸಭಾ ಸದಸ್ಯ ವಿಜಯ ಕೊಡವೂರು ವಹಿಸಿದ್ದರು. ಈ ಸಂದರ್ಭದಲ್ಲಿ ತೌಳವ ವರ್ಗದ ಪೌರೋಹಿತ್ಯ ವೃತ್ತಿಯ ಕೃಷ್ಣ ಮಡಿವಾಳ, ದೈವನರ್ತಕ ಕುಮಾರ ಪಂಬದ ಅವರನ್ನು ಸಮ್ಮಾನಿಸಲಾಯಿತು. ತೀರ್ಪುಗಾರ ರಾಗಿ ತಾರಾನಾಥ ತೊಟ್ಟಂ,ಗಿರೀಶ್ ಮೈಂದನ್ ಸಹಕರಿಸಿದರು.

ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ ಕೊಡವೂರು ಸ್ವಾಗತಿಸಿದರು. ಪೂರ್ಣಿಮಾ ಜಾರ್ದನ ಕಾರ್ಯಕ್ರಮ ನಿರೂಪಿಸಿದರು.


Spread the love