ಕೋರ್ಟ್ ರಸ್ತೆ ಕಾಮಗಾರಿ ವಿಳಂಭಕ್ಕೆ ಶಾಸಕ ಜೆ.ಆರ್.ಲೋಬೊ ಗರಂ

Spread the love

ಕೋರ್ಟ್ ರಸ್ತೆ ಕಾಮಗಾರಿ ವಿಳಂಭಕ್ಕೆ ಶಾಸಕ ಜೆ.ಆರ್.ಲೋಬೊ ಗರಂ

ಮಂಗಳೂರು: ಮಂಗಳೂರು ಕೋರ್ಟ್ ರಸ್ತೆಯ ಕಾಮಗಾರಿ ಪರಿಶೀಲನೆಗೆ ಹೋದ ಶಾಸಕ ಜೆ.ಆರ್.ಲೋಬೊ ಅವರು  ಇಂದು ಗರಂ ಆಗಿ ಗುತ್ತಿಗೆದಾರರಿಗೆ ಕ್ಲಾಸ್ ತೆಗೆದುಕೊಂಡ ಘಟನೆ ನಡೆಯಿತು.

ಕಾಮಗಾರಿ ಕೈಗೊಂಡು ಎರಡು ವರ್ಷ ಆಗಿದ್ದರೂ ಇನ್ನೂ ಅದು ಮುಗಿಯದಿರುವ ಬಗ್ಗೆ ಶಾಸಕ ಜೆ.ಆರ್.ಲೋಬೊ ಅವರು ಅಸಮಾಧಾನ ವ್ಯಕ್ತಪಡಿಸಿ ಇನ್ನು ಎರಡು ತಿಂಗಳ ಒಳಗೆ ಕೆಲಸವನ್ನು ಪೂರ್ಣಗೊಳಿಸದಿದ್ದರೆ ಗುತ್ತಿಗೆದಾರರ ಗುತ್ತಿಗೆಯನ್ನು ರದ್ದು ಮಾಡಿ ಬೇರೆ ವ್ಯವಸ್ಥೆ ಮಾಡುವ ಎಚ್ಚರಿಕೆ ಕೊಟ್ಟರು.

ಕಾಮಗಾರಿಯ ಬಗ್ಗೆ ಅವರು ತೀವೃ ಅತೃಪ್ತಿ ತೋರಿದರಲ್ಲದೇ ಗುತ್ತಿಗೆದಾರರಾಗಿ ಎಂಥ ಕೆಲಸ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರಲ್ಲದೆ ನಿಮ್ಮ ಬೇಕಾಬಿಟ್ಟಿ ಕೆಲಸವನ್ನು ನಾವು ಸುಮ್ಮನೆ ಒಪ್ಪಿಕೊಳ್ಳುತ್ತಾರೆಂದುಕೊಂಡಿರಾ ? ಎಂದೂ ಕೇಳಿದರು.

ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಗಳಿಗೂ ಈ ಕಾಮಗಾರಿಯನ್ನು ನಿರಂತರವಾಗಿ ಪರಿಶೀಲಿಸುತ್ತಿದ್ದಾರೆ ಇಷ್ಟೊಂದು ವಿಳಂಭವಾಗುತ್ತಿರಲಿಲ್ಲ ಎಂದರು.

ಕಾರ್ಪೊರೇಟರ್ ಎ.ಸಿ.ವಿನಯರಾಜ್, ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಕಾಂತ್ ರಾಜ್, ಗಣೇಶ್ ಅರಳಿಕಟ್ಟೆ ಮುಂತಾದವರು ಉಪಸ್ಥಿತರಿದ್ದರು.


Spread the love