ಕ್ವಾರಂಟೈನ್ ನಿಯಮ ಉಲ್ಲಂಘಿಸಿದ ಐವರ ವಿರುದ್ದ ಪ್ರಕರಣ ದಾಖಲು

Spread the love

ಕ್ವಾರಂಟೈನ್ ನಿಯಮ ಉಲ್ಲಂಘಿಸಿದ ಐವರ ವಿರುದ್ದ ಪ್ರಕರಣ ದಾಖಲು

ಸುಳ್ಯ: ಕ್ವಾರಂಟೈನ್ ನಿಯಮ ಉಲ್ಲಂಘಿಸಿದರ ಕಾರಣಕ್ಕಾಗಿ ಖಾಸಗಿ ಆಸ್ಪತ್ರೆಯೊಂದಕ್ಕೆ ಕೆಲಸಕ್ಕಾಗಿ ಬಂದ ಐವರ  ವಿರುದ್ಧ ಜಿಲ್ಲಾಡಳಿತದ ಆದೇಶನುಸಾರ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜುಲೈ 15ರಂದು  ಸುಳ್ಯ ಖಾಸಗೀ ಆಸ್ಪತ್ರೆಯೊಂದಕ್ಕೆ MRI Scanning Mechine ರಿಪೇರಿಗಾಗಿ ತಮಿಳುನಾಡಿನಿಂದ ಆಗಮಿಸಿದ್ದ ವಾನನ್ಸ್, ದೇವರಾಮನ ,ಪ್ರೇಮಕುಮಾರ್ ಜಿ ಹಾಗೂ ಗಾಂಧೀನಗರ ನಿವಾಸಿ ಪ್ರವೀಣ್ ಜಾರ್ಜ್, ಬೆಳ್ಳಾರೆ ನಿವಾಸಿ ಶ್ರುತಿ ಸಿಎಸ್ ಎಂಬವರುಗಳನ್ನು Covid-19 ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ನಿಮಿತ್ತ ಕ್ವಾರೆಂಟೈನ್ ಗೆ ಒಳಗಾಗಲು ಅದೇಶಿಸಲಾಗಿದ್ದು,ಆದರೆ ಇವರು ವ್ಯಕ್ತಿಗಳು ಸರಕಾರ ಅದೇಶಿರುವ ಕೋವಿಡ್-19 ನಿಯಮವನ್ನು ಉಲ್ಲಂಘಿಸಿರುತ್ತಾರೆ.

ಆದ್ದರಿಂದ ಇವರುಗಳ ವಿರುದ್ದ ಸುಳ್ಯ ತಹಶಿಲ್ದಾರರು ನೀಡಿದ ದೂರಿನಂತೆ ಸುಳ್ಯ ಪೊಲೀಸ್ ಠಾಣೆಯಲ್ಲಿ   Sec: 269,270,271,IPC and 5(1) ಕರ್ನಾಟಕ ಸಾಂಕ್ರಾಮಿಕ ರೋಗ ಕಾಯ್ದೆ 2020 ಯಂತೆ ಪ್ರಕರಣ ದಾಖಲಾಗಿರುತ್ತದೆ.


Spread the love