ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾ ಚಿಕಿತ್ಸೆಗೆ ದರ ನಿಗದಿ  ಮುಖ್ಯಮಂತ್ರಿ ಅಂಕಿತ ಸಾಧ್ಯತೆ – ದರ ಪಟ್ಟಿ ಹೀಗಿದೆ

Spread the love

ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾ ಚಿಕಿತ್ಸೆಗೆ ದರ ನಿಗದಿ  ಮುಖ್ಯಮಂತ್ರಿ ಅಂಕಿತ ಸಾಧ್ಯತೆ – ದರ ಪಟ್ಟಿ ಹೀಗಿದೆ

ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕಿನ ಚಿಕಿತ್ಸೆಗಾಗಿ ಸರ್ಕಾರ ರಾಜ್ಯದಲ್ಲಿ 518 ಖಾಸಗಿ ಆಸ್ಪತ್ರೆಗಳನ್ನು ಗರುತಿಸಿದ್ದು, ಈ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸೆಗೆ​ ದರ ನಿಗದಿಯಾಗಲಿದ್ದು ಈ ದರಕ್ಕೆ ಇಂದೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಂಕಿತ ಹಾಕುವ ಸಾಧ್ಯತೆಯಿದೆ.

ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ವೆಚ್ಚದ ವಿಚಾರವಾಗಿ ಸೋಮವಾರ ಸಂಜೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ ವಿಜಯ್​ ಭಾಸ್ಕರ್​ ಜೊತೆ PHANA(Private Hospitals and Nursing Homes Association) ಹಾಗೂ IMA (Indian Medical Association) ಸದಸ್ಯರ ಜೊತೆ ಸಭೆ ನಡೆಸಿದ್ದರು. ಕೋವಿಡ್ ಹೋರಾಟಕ್ಕೆ‌ ಖಾಸಗಿ ಆಸ್ಪತ್ರೆಗಳು ಕೈಜೋಡಿಸಲು ಸೂಚನೆ ನೀಡಿರುವ ಮುಖ್ಯಮಂತ್ರಿಗಳು ಚಿಕಿತ್ಸೆಗೆ ದರ ನಿಗದಿಗೆ PHANA ಹಾಗೂ IMA ಒಪ್ಪಿಗೆ ಸೂಚಿಸಿದ್ದು, ಚಿಕಿತ್ಸಾ ದರ ನಿಗದಿಪಡಿಸಿರುವ ಕಡತ ಮುಖ್ಯಮಂತ್ರಿಗಳ ಕಚೇರಿಗೆ ರವಾನೆಯಾಗಿದೆ ಎನ್ನಲಾಗಿದೆ.

ಸಾರ್ವಜನಿಕ ಆರೋಗ್ಯ ಇಲಾಖೆಯ ಶಿಫಾರಸ್ಸು ಪಡೆದ ರೋಗಿಗಳಿಗೆ:
ಕೊರೊನಾ ಖಾಸಗಿ ಚಿಕಿತ್ಸೆ ದರ ಸಾಧ್ಯತೆ:
ಸರ್ಕಾರಿ ಆಸ್ಪತ್ರೆಗಳಿಂದ ಬರುವ ಸ್ವಾಬ್ ಟೆಸ್ಟ್ ಗೆ: 2,600 ರೂಪಾಯಿ
‎ಜನರಲ್ ವಾರ್ಡ್​ನಲ್ಲಿ ಕೊರೊನಾ ರೋಗಿಯ ಒಂದು ದಿನದ ಚಿಕಿತ್ಸೆ ಜನರಲ್ ವಾರ್ಡ್‌: 5,200 ರೂಪಾಯಿ
ಎಚ್‌ಡಿಯು: 7000
ಐಸೋಲೇಷನ್ ಐಸಿಯು ವಿತ್ ಔಟ್‌ ವೆಂಟಿಲೇಟರ್: 8500
ಐಸೋಲೇಷನ್ ಐಸಿಯು ವಿತ್‌ ವೆಂಟಿಲೇಟರ್ 10000 ರೂ. ನಿಗದಿಪಡಿಸಲಾಗಿದೆ.

ಆರೋಗ್ಯ ಇಲಾಖೆಯ ಶಿಫಾರಸ್ಸು ಇಲ್ಲದೆ ನೇರವಾಗಿ ಖಾಸಗಿ ಆಸ್ಪತ್ರೆಗೆ ಹೋದವರಿಗೆ ದರ ಪಟ್ಟಿ:
ಜನರಲ್ ವಾರ್ಡ್‌: 10000
ಎಚ್‌ಡಿಯು: 12000
ಐಸೋಲೇಷನ್ ಐಸಿಯು ವಿತೌಟ್‌ ವೆಂಟಿಲೇಟರ್: 15000
ಐಸೋಲೇಷನ್ ಐಸಿಯು ವಿತ್ ವೆಂಟಿಲೇಟರ್: 25000

ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ಚಿಕಿತ್ಸೆ ಪಡೆಯಲು ಕಟ್ಟುನಿಟ್ಟಾದ ನಿಯಮಗಳು ಜಾರಿಯಾಗಿವೆ. ಸರ್ಕಾರಿ ನೋಡಲ್ ಅಧಿಕಾರಿ ಅಥವಾ ಜಿಲ್ಲಾ ಆರೋಗ್ಯಾಧಿಕಾರಿ ಶಿಫಾರಸು ಮಾಡಿದರೆ ಮಾತ್ರ ಖಾಸಗಿ ಆಸ್ಪತ್ರೆಗೆ ತೆರಳಬಹುದು. ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳು ತುಂಬಿದ ಬಳಿಕವಷ್ಟೇ ಖಾಸಗಿ ಆಸ್ಪತ್ರೆಗೆ ಸ್ಥಳಾಂತರ ಮಾಡಲು ಅನುಮತಿ ನೀಡಲಾಗುವುದು. ಯಾವ ಆಸ್ಪತ್ರೆಗೆ ಹೋಗಬೇಕು ಎನ್ನುವುದನ್ನೂ ನೋಡಲ್ ಅಧಿಕಾರಿಯೇ ನಿರ್ಧರಿಸಲಿದ್ದಾರೆ. ಆದರೆ ಕೆಲವೆಡೆ ನಿಯಮವನ್ನು ತಿಳಿಯದೆ ನೇರವಾಗಿ ಖಾಸಗಿ ಆಸ್ಪತ್ರೆಗೆ ತೆರಳಿ ಕೊರೊನಾಗೆ ಚಿಕಿತ್ಸೆ ಕೊಡಿ ಎಂದು ರೋಗಿಗಳು ಕೇಳುತ್ತಿರುವುದು ಆಸ್ಪತ್ರೆ ಮತ್ತು ರೋಗಿಗಳ ಕುಟುಂಬಗಳ ನಡುವೆ ಮಾತಿನ ಚಕಮಕಿಯೂ ನಡೆದ ಬಗ್ಗೆ ವರದಿಯಾಗಿದೆ.


Spread the love