ಗಂಗೊಳ್ಳಿ| ದನ ಕಳವು ಯತ್ನ: ಇಬ್ಬರ ಬಂಧನ

Spread the love

ಗಂಗೊಳ್ಳಿ| ದನ ಕಳವು ಯತ್ನ: ಇಬ್ಬರ ಬಂಧನ

ಕುಂದಾಪುರ: ದನ ಕಳವು ಯತ್ನಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಗಂಗೊಳ್ಳಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಬ್ರಹ್ಮಾವರ ಹೊನ್ನಾಳ, ಬೈಕಾಡಿ ನಿವಾಸಿ ನೌಫಲ (23) ಮತ್ತು ಗುಲ್ವಾಡಿ ಮಾವಿನಕಟ್ಟೆ ನಿವಾಸಿ ನಿಶಾದ್ (23) ಎಂದು ಗುರುತಿಸಲಾಗಿದೆ.

ಜುಲೈ 6 ರಂದು ಬೆಳಿಗ್ಗಿನ ಜಾವ 04:00 ಗಂಟೆಯ ಸುಮಾರಿಗೆ ನಾಡಾ ಗ್ರಾಮ ಪಂಚಾಯತ್ ಸಮೀಪ ಒಂದು ಬಿಳಿ ಬಣ್ಣದ ಕಾರಿನಲ್ಲಿ ಮೂರು ಜನರು ಬಂದು ನಾಡಾ ಶಾನ್ ಮೆಡಿಕಲ್ ಪಕ್ಕದಲ್ಲಿ ಮಲಗಿರುವ ದನಗಳನ್ನು ಕಾರಿಗೆ ತುಂಬಲು ಪ್ರಯತ್ನಿಸುವ ದಾರಿಯಲ್ಲಿನ ವಾಹನವನ್ನು ನೋಡಿ ದನವನ್ನು ತುಂಬಿಸಲು ಪ್ರಯತ್ನಿಸಿದವರು ಓಡಿ ಹೋಗಿದ್ದು, ಅರೋಪಿತರು ಶಾನ್ ಮೆಡಿಕಲ್ ಸಮೀಪ ಮಲಗಿರುವ ದನಗಳನ್ನು ಕಳವು ಮಾಡುವ ಉದ್ದೇಶದಿಂದ ಬಂದಿದ್ದು ದನವನ್ನು ಕಳವು ಮಾಡಲು ಪ್ರಯತ್ನಿಸಿರುತ್ತಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ಪತ್ತೆಗೆ ಗಂಗೊಳ್ಳಿ ಪೊಲೀಸ್ ಠಾಣೆಯಿಂದ ವಿಶೇಷ ತಂಡ ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಸ್ವಿಫ್ಟ್ ಕಾರು, ( ಅಂದಾಜು ಮೌಲ್ಯ 5 ಲಕ್ಷ ರೂಪಾಯಿ) ಹಾಗೂ 2 ಮೊಬೈಲ್ ಪೋನ್ ಗಳನ್ನು (ಅಂದಾಜು ಮೌಲ್ಯ 9 ಸಾವಿರ) ಸ್ವಾದೀನಪಡಿಸಿಕೊಳ್ಳಲಾಗಿದೆ.


Spread the love
Subscribe
Notify of

0 Comments
Inline Feedbacks
View all comments