ಗಣೇಶ ಚತುರ್ಥಿಗೆ ಮಂಗಳೂರು ಬೆಂಗಳೂರು ನಡುವೆ ವಿಶೇಷ ರೈಲು

Spread the love

ಗಣೇಶ ಚತುರ್ಥಿಗೆ ಮಂಗಳೂರು ಬೆಂಗಳೂರು ನಡುವೆ ವಿಶೇಷ ರೈಲು

ಮಂಗಳೂರು: ಗಣೇಶ ಚತುರ್ಥಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆಯು ಬೆಂಗಳೂರು-ಮಂಗಳೂರು ನಡುವೆ ಎರಡು ವಿಶೇಷ ರೈಲು ಸಂಚಾರ ಸೌಲಭ್ಯವನ್ನು ಕಲ್ಪಿಸಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ ತಿಳಿಸಿದ್ದಾರೆ.

ತಮ್ಮ ಮನವಿ ಮೇರೆಗೆ ಬೆಂಗಳೂರು ಮತ್ತು ಮಂಗಳೂರು ನಡುವೆ ವಿಶೇಷ ರೈಲುಗಳನ್ನು ಘೋಷಿಸಿದ್ದು, ಚೌತಿಯ ಮುನ್ನಾದಿನದಂದು ಊರಿಗೆ ವಾಪಸಾಗಲು ಅನುಕೂಲವಾಗುವಂತೆ ಪ್ರಯಾಣಿಕರಿಗಾಗಿ ಎರಡು ವಿಶೇಷ ರೈಲುಗಳ ವ್ಯವಸ್ಥೆ ಮಾಡಲಾಗಿದೆ.

ಹಬ್ಬದ ಸಂದರ್ಭದಲ್ಲಿ ಜನರು ತಮ್ಮ ಕುಟುಂಬದೊಂದಿಗೆ ಸೇರಿಕೊಳ್ಳಲು ಅನುಕೂಲವಾಗುವಂತೆ ವಿಶೇಷ ರೈಲುಗಳ ವ್ಯವಸ್ಥೆ ಮಾಡಿಕೊಟ್ಟ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವಿ ಮತ್ತು ವಿ. ಸೋಮಣ್ಣ ಅವರಿಗೆ ಕೃತಜ್ಞತೆ ಸಲ್ಲಿಸಿರುವುದಾಗಿ ಸಂಸದ ಕ್ಯಾ.ಚೌಟ ತಿಳಿಸಿದ್ದಾರೆ.


Spread the love