ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ

Spread the love

ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ

ಮಂಗಳೂರು : ಮಂಗಳೂರು ನಗರದಲ್ಲಿ ಮಾದಕ ದ್ರವ್ಯ ಸಾಗಾಟ/ಮಾರಾಟ ಮಾಡುವವರ ಪತ್ತೆಯ ಬಗ್ಗೆ ಇಕೊನಾಮಿಕ್ & ನಾರ್ಕೋಟಿಕ್ಸ್ ಕ್ರೈಂ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರು ಮತ್ತು ಸಿಬಂದಿಗಳು ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಕಾಸರಗೋಡು ನಿವಾಸಿ ಕಿರಣ್ (24) ಮತ್ತು ನಿತಿನ್ ಕುಮಾರ್ @ ಉದಯ್ ಕುಮಾರ್ ರಾವ್ (43) ಎಂದು ಗುರುತಿಸಲಾಗಿದೆ.

ಬಂಧಿತರು ಸೋಮೇಶ್ವರ ಗ್ರಾಮದ ತೊಕ್ಕೊಟ್ಟು ಶಿವಾಜಿ ಸಮಿತಿ ಸ್ವಾಮಿ ಕೊರಗಜ್ಜ ಕಟ್ಟೆಯ ಬಳಿ ಮೋಟಾರ್ ಬೈಕ್ ಗಳಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ವೇಳೆ ಬಂಧಿಸಿದ್ದು, ಬಂದಿತ ಆರೋಪಿಗಳಿಂದ ಸುಮಾರು ರೂ 37,700 ಮೌಲ್ಯದ 2 ಕೆಜಿ 275 ಗ್ರಾಮ ತೂಕದ ಗಾಂಜಾ, 2 ಮೋಟಾರ್ ಸೈಕಲ್, ಮೊಬೈಲ್ ಫೋನ್ ಮತ್ತು ನಗದು ಹಣ ರೂ 3500 ನ್ನು ವಶಪಡಿಸಿಕೊಂಡಿದ್ದು, ವಶಪಡಿಸಿದ ಗಾಂಜಾ ಮತ್ತು ಸೊತ್ತುಗಳ ಒಟ್ಟು ಮೌಲ್ಯ ರೂ 1,01,700 ಆಗಿರುತ್ತದೆ.

ಪೋಲಿಸ್ ಆಯುಕ್ತರಾದ ಟಿ ಸುರೇಶ್ ಅವರ ಆದೇಶದಂತೆ ಕಾನೂನು ಸುವ್ಯವಸ್ಥೆಯ ಡಿಸಿಪಿ ಹುನುಮಂತರಾಯ, ಅಪರಾಧ ಹಾಗೂ ಸಂಚಾರ ವಿಭಾಗದ ಡಿಸಿಪಿ ಉಮಾಪ್ರಶಾಂತ್ ರವರ ನಿರ್ದೇಶನ ಹಾಗೂ ವೆಲಂಟೈನ್ ಡಿಸೋಜ ಎಸಿಪಿ ಸಿಸಿಆರ್ ಬಿ ಮಾರ್ಗದರ್ಶನದಲ್ಲಿ ಪೋಲಿಸ್ ನಿರೀಕ್ಷಕರಾದ ಮಹಮ್ಮದ್ ಷರೀಫ್, ಪೋಲಿಸ್ ಉಪನಿರೀಕ್ಷಕರಾದ ಲತಾ ಕೆ ಮತ್ತು ಸಿಬಂದಿಗಳಾದ ಜಗದೀಶ್, ಶಾಜು ನಾಯರ್, ಶ್ರೀಲತ, ಜಾಯ್ಸ್, ಕಿಶೋರ್ ಪೂಜಾರಿಮತ್ತು ಭಾಸ್ಕರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿರುತ್ತಾರೆ. ಪತ್ರಾಂಕಿತ ಅಧಿಕಾರಿಯಾಗಿ ಡಾ|ಇಸ್ಮಾಯಿಲ್ ಸಹಕರಿಸಿರುತ್ತಾರೆ.


Spread the love