ಗಾಂಜಾ ಮಾರಾಟ: ವಕ್ವಾಡಿಯಲ್ಲಿ ಇಬ್ಬರ ಬಂಧನ

Spread the love

ಗಾಂಜಾ ಮಾರಾಟ: ವಕ್ವಾಡಿಯಲ್ಲಿ ಇಬ್ಬರ ಬಂಧನ

ಕುಂದಾಪುರ : ಗಾಂಜಾ ಸೇವನೆ ಮತ್ತು ಮಾರಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಉಡುಪಿ ಡಿಸಿಐಬಿ ಇನ್ಸ್ಪೆಕ್ಟರ್ ಮಂಜಪ್ಪ ಡಿ.ಆರ್. ನೇತೃತ್ವದ ತಂಡ ಭಾನುವಾರ ಕುಂದಾಪುರ ತಾಲೂಕಿನ ವಕ್ವಾಡಿ ಜನತಾ ಕಾಲನಿಯಲ್ಲಿ ಬಂಧಿಸಿದೆ.

ಬಂಧಿತರನ್ನು ವಕ್ವಾಡಿ ಜನತಾ ಕಾಲನಿ ನಿವಾಸಿಗಳಾದ ಮೊಹಮ್ಮದ್ ಹನೀಪ್ (45), ಅಶ್ರಪ್ (29), ಬಂಧಿತ ಆರೋಪಿಗಳು. ಮೊಹಮ್ಮದ್ ಆಸೀಪ್ ಹಾಗು ಇಲಿಯಾಸ್ ಎಂಬಿಬ್ಬರು ಪರಾರಿಯಾಗಿದ್ದಾರೆ.

ಭಾನುವಾರ ಸಂಜೆ ಮಂಜಪ್ಪ ಡಿ.ಆರ್, ಪೊಲೀಸ್ ನಿರೀಕ್ಷಕರು ಡಿಸಿಐಬಿ, ಉಡುಪಿ ಜಿಲ್ಲೆ ಇವರಿಗೆ ಕುಂದಾಪುರ ತಾಲೂಕು ವಕ್ವಾಡಿ ಗ್ರಾಮದ ಜನತಾ ಕಾಲನಿ ಮೊಹಮ್ಮದ್ ಹನೀಪ್ ಎಂಬುವವರ ಮನೆಯ ಬಳಿ ಇರುವ ಶೆಡ್ ನಲ್ಲಿ ಮೊಹಮ್ಮದ್ ಹನೀಪ್ರು ಬೇರೆಯವರೊಂದಿಗೆ ಸೇರಿಕೊಂಡು ಗಾಂಜಾ ಸೇವನೆ ಮಾಡುತ್ತಿರುವುದಾಗಿ ಹಾಗೂ ಗಾಂಜಾ ಮಾರಾಟ ಮಾಡುತ್ತಿರುವುದಾಗಿ ಬಂದ ಮಾಹಿತಿ ಮೇರೆಗೆ ಸಿಬ್ಬಂದಿಯವರೊಂದಿಗೆ ವಕ್ವಾಡಿ ಗ್ರಾಮದ ಜನತಾ ಕಾಲನಿ ಮೊಹಮ್ಮದ್ ಹನೀಪ್ ಎಂಬುವವರ ಮನೆಯ ಬಳಿ ಹಾಳು ಬಿದ್ದಿರುವ ಮೇಲ್ಚಾವಣೆ ಇಲ್ಲದ ಖಾಲಿ ಶೆಡ್ ನ ಒಳಗಡೆ 4 ಜನರು ಸುತ್ತುವರಿದು ಕುಳಿತುಕೊಂಡಿದ್ದು ಇಬ್ಬರು ವ್ಯಕ್ತಿಗಳು ಓಡಿ ಹೋಗಿದ್ದು ಉಳಿದ ಇಬ್ಬರನ್ನು ನಾವು ಸುತ್ತವರಿದು ಅವರನ್ನು ವಿಚಾರಣೆ ಮಾಡಿದ್ದು ಆರೋಪಿಗಳಾದ ಮೊಹಮ್ಮದ್ ಹನೀಪ್ ಮತ್ತು ಅಶ್ರಪ್ ಅವರಿಂದ 610 ಗ್ರಾಂ ತೂಕದ ಗಾಂಜಾವನ್ನು ಸ್ವಾಧಿನಪಡಿಸಿಕೊಂಡಿದ್ದು ಗಾಂಜಾದ ಮೌಲ್ಯ 20 ಸಾವಿರ ರೂ. ಆಗಿದೆ. ಅಲ್ಲದೇ ಸ್ಯಾಮ್ ಸಂಗ್ ಕಂಪೆನಿಯ ಮೊಬೈಲ್-1, ಕಂದು ಬಣ್ಣದ ಬ್ಯಾಗ್, ಅದರೊಳಗಿದ್ದ 80 ಚಿಕ್ಕ ಚಿಕ್ಕ ಪ್ಲಾಸ್ಟಿಕ್ ತೊಟ್ಟೆ, ಮ್ಯಾಜಿಕ್ ಪೋರ್ಟ್ ವೈನ್ ಬಾಟಲಿ ಹಾಗೂ ಅದಕ್ಕೆ ಅಳವಡಿಸಿದ ಪೈಪ್ನ್ನು ವಶಕ್ಕೆ ಪಡೆಯಲಾಗಿದೆ.

ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್. ಕಾಯ್ದೆ-1985 ರಂತೆ ಪ್ರಕರಣ ದಾಖಲಾಗಿದೆ


Spread the love