ಗಾಣಿಗ ಯುವಸಂಘಟನೆ ಕೋಟ ಘಟಕ ಪ್ರತಿಭಾ ಪುರಸ್ಕಾರ, ಯುವ ಸಂಗಮ ಕಾರ್ಯಕ್ರಮ

Spread the love

ಕೋಟ : ಉಡುಪಿ ಜಿಲ್ಲಾ ಗಾಣಿಗ ಯುವಸಂಘಟನೆ ಕೋಟ ಘಟಕ ಆಶ್ರಯದಲ್ಲಿ ಪ್ರತಿಭಾ ಪುರಸ್ಕಾರ, ಶಾಲಾ ಪರಿಕರ ವಿತರಣೆ ಮತ್ತು ಸಾಧಕರಿಗೆ ಸಮ್ಮಾನ, ಉಡುಪಿ ವಿವಿಧ ಘಟಕದ ಯುವಸಂಘಟನೆಗಳ ಸಮಾಗಮ `ಯುವಸಂಗಮ’ ಕಾರ್ಯಕ್ರಮ ಜೂ.5ರಂದು ಸಾಲಿಗ್ರಾಮ ಗಣೇಶ ಕೃಪಾ ಕಲ್ಯಾಣ ಮಂಟಪದಲ್ಲಿ ಜರಗಿತು.

0606kota1e

ಉಡುಪಿ ಜಿಲ್ಲಾ ಗಾಣಿಗ ಯುವ ಸಂಘಟನೆಯ ಜಿಲ್ಲಾಧ್ಯಕ್ಷ ದಿನೇಶ ಗಾಣಿಗ ಕೋಟ ಕಾರ್ಯಕ್ರಮ ಉದ್ಘಾಟಿಸಿ, ಸಮಾಜದ ಸಂಘಟನೆಯಲ್ಲಿ ಯುವ ಸಂಘಟನೆಗಳ ಪಾತ್ರ ಮಹತ್ವದಿದೆ. ಉಡುಪಿ ಜಿಲ್ಲಾ ಗಾಣಿಗ ಯುವಸಂಘಟನೆ ಅಸ್ಥಿತ್ವಕ್ಕೆ ಬಂದ ಮೇಲೆ ಯುವಕರು ಸಂಘಟಿತರಾಗಬೇಕು, ಸಮಾಜವನ್ನು ಸಂಘಟಿಸಬೇಕು ಎನ್ನುವ ಮನೋಭಾವನೆ ಬೆಳೆದಿರುವುದು ಉತ್ತಮ ಸಾಧನೆ ಹಾಗೂ ಸಂಘಟನೆ ಬಗ್ಗೆ ಕೀಳರಿಮೆಯಿಂದ ಮಾತನಾಡುವವರ ಮಾತಿಗೆ ಕಿವಿಗೊಡದೆ ವ್ಯವಸ್ಥಿತವಾಗಿ ಸಂಘಟಿತರಾಗುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕು ಎಂದರು.
ಕೋಟ ಘಟಕದ ಅಧ್ಯಕ್ಷ ರಾಜೇಶ್ ಗಾಣಿಗ ಅಚ್ಲಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘದ ಅಧ್ಯಕ್ಷ ಶ್ರೀನಿವಾಸ ಗಾಣಿಗ ಮಾತನಾಡಿ, ಜುಲೈ ತಿಂಗಳಲ್ಲಿ ನಡೆಯಲಿರುವ ಗುರುಮಠದ ಜೀರ್ಣೋದ್ಧಾರದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವಂತೆ ವಿನಂತಿಸಿದರು.
ಪ್ರತಿಭಾ ಪುರಸ್ಕಾರ : ಈ ಸಂದರ್ಭ ಎಸೆಸೆಲ್ಸಿಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದÀ ಸಮಾಜದ ಅಶ್ವಿತ್, ಸುಮಂತ್, ಗೌತಮ್ ಮತ್ತು ಸಿಂಚನ, ಪಿಯುಸಿಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ರಿಯಾ ಗಾಣಿಗ, ಅಶ್ವಿನಿ, ಶ್ರೀರಕ್ಷಾ ಮತ್ತು ರಮ್ಯಾ ಇವರನ್ನು ಸಮ್ಮಾನಿಸಲಾಯಿತು ಹಾಗೂ ಬಡ ವಿದ್ಯಾರ್ಥಿಗಳಿಗೆ ದತ್ತಿನಿ„ ವಿತರಿಸಲಾಯಿತು.
ಗಾಣಿಗ ಯುವ ಸಂಘಟನೆ ಉಡುಪಿ ಘಟಕದ ಅಧ್ಯಕ್ಷ ಜಯರಾಮ ಗಾಣಿಗ, ಉದ್ಯಾವರ ಘಟಕದ ದಯಾನಂದ ಗಾಣಿಗ, ಬಸ್ರೂರು ಘಟಕದ ರಾಘವೇಂದ್ರ ಗಾಣಿಗ, ಕುಂದಾಪುರ ಘಟಕದ ಸಚ್ಚಿದಾನಂದ ಎಂ.ಎಲ್, ನಾವುಂದ ಘಟಕದ ದಿನೇಶ ನಾವುಂದ, ತೆಕ್ಕಟ್ಟೆಯ ಗುರುರಾಜ್ ಗಾಣಿಗ ಹಾಗೂ ಚೇತನಾ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಗಣೇಶ ಜಿ., ರಾಷ್ಟ್ರಪ್ರಶಸ್ತಿ ಪುರಸ್ಕøತ ನಿವೃತ್ತ ಮುಖ್ಯ ಶಿಕ್ಷಕ ಪುಂಡಲೀಕ ಮಾಸ್ಟ್ರ್ ಮತ್ತಿತರರು ಉಪಸ್ಥಿತರಿದ್ದರು.
ಕೋಟ ಘಟಕದ ಕಾರ್ಯದರ್ಶಿ ಆನಂದ ಗಾಣಿಗ ಮಾಬುಕಳ ಸ್ವಾಗತಿಸಿ, ನಾಗರಾಜ ಗಾಣಿಗ ಸಾಲಿಗ್ರಾಮ ಪ್ರಾಸ್ತಾವಿಕ ಮಾತನಾಡಿ, ಸ್ವಾತಿ ಹಂಗಾರಕಟ್ಟೆ ಕಾರ್ಯಕ್ರಮ ನಿರೂಪಿಸಿ, ಪ್ರಶಾಂತ್ ಗಾಣಿಗ ಕಾರ್ಕಡ ವಂದಿಸಿದರು.


Spread the love