ಗುಂಪು ಹತ್ಯೆ ಪ್ರಕರಣದ ಶಿಕ್ಷೆ ತಡೆಹಿಡಿದ ಜಾರ್ಖಂಡ್ ಹೈಕೋರ್ಟ್ ತೀರ್ಪು ದುರದಷ್ಟಕರ

Spread the love

ಗುಂಪು ಹತ್ಯೆ ಪ್ರಕರಣದ ಶಿಕ್ಷೆ ತಡೆಹಿಡಿದ ಜಾರ್ಖಂಡ್ ಹೈಕೋರ್ಟ್ ತೀರ್ಪು ದುರದಷ್ಟಕರ
ಅಲೀಮುದ್ದೀನ್ ಅನ್ಸಾರಿ ಗುಂಪುಹತ್ಯೆ ಪ್ರಕರಣದ ಆರೋಪಿಗಳ ಜೀವಾವಧಿ ಶಿಕ್ಷೆಯನ್ನು ತಡೆಹಿಡಿದ ಮತ್ತು 12 ಮಂದಿ ಆರೋಪಿಗಳ ಪೈಕಿ 11 ಮಂದಿಗೆ ಜಾಮೀನು ನೀಡಿದ ಜಾರ್ಖಂಡ್ ಹೈಕೋರ್ಟ್ ತೀರ್ಪಿಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಅಸಮಾಧಾನ ವ್ಯಕ್ತಪಡಿಸಿದೆ. ಈ ಬಗ್ಗೆ ಬೆಂಗಳೂರಿನಲ್ಲಿ ನಡೆದ ಸಂಘಟನೆಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯು ಪತ್ರಿಕಾ ಹೇಳಿಕೆಯನ್ನು ಹೊರಡಿಸಿದ್ದು, ಪ್ರಸಕ್ತ ತೀರ್ಪು ದುರದಷ್ಟಕರ ಎಂದು ಅಭಿಪ್ರಾಯಿಸಿದೆ.
ಗೋಹತ್ಯೆಯ ಆರೋಪದಲ್ಲಿ ದೇಶಾದ್ಯಂತ ಹಾಡುಹಗಲೇ 30ರಷ್ಟು ಮಂದಿಯ ಬರ್ಬರ ಗುಂಪು ಹತ್ಯೆ ನಡೆದಿದ್ದು, ಈ ಪೈಕಿ ಆರೋಪಿಗಳಿಗೆ ಶಿಕ್ಷೆ ಪ್ರಕಟಗೊಂಡ ಮೊದಲ ಪ್ರಕರಣ ಅಲೀಮುದ್ದೀನ್ ಅನ್ಸಾರಿ ಹತ್ಯೆ ಪ್ರಕರಣವಾಗಿರುತ್ತದೆ. ಈ ಪ್ರಕರಣ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟಗೊಳ್ಳುವ ಮೂಲಕ ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ಮತ್ತು ಪರಿಹಾರದ ಭರವಸೆ ಮೂಡಿತ್ತು. ಅಲ್ಲದೆ, ಜಾನುವಾರು ವ್ಯಾಪಾರಿಗಳು ಮತ್ತು ಅಲ್ಪಸಂಖ್ಯಾತರ ಜೀವಕ್ಕೆ ಬೆದರಿಕೆಯೊಡ್ಡುತ್ತಿರುವ ಮತಾಂಧ ಗುಂಪುಗಳಿಗೆ ಸ್ಪಷ್ಟ ಎಚ್ಚರಿಕೆಯನ್ನೂ ರವಾನಿಸಿತ್ತು. ಇದೀಗ ಆರೋಪಿಗಳ ಶಿಕ್ಷೆಯನ್ನು ತಡೆಹಿಡಿದು ಜಾಮೀನು ನೀಡಿ ತೀರ್ಪು ಹೊರಡಿಸಿರುವುದರಿಂದ ಇನ್ನಷ್ಟು ಗೋಭಯೋತ್ಪಾದನೆ ಮತ್ತು ವ್ಯಾಪಕ ಗುಂಪು ಹತ್ಯೆಗಳಿಗೆ ಪೆÇ್ರೀತ್ಸಾಹ ನೀಡಿದಂತಾಗಿದೆ. ಇದೇ ವೇಳೆ ಬಿಡುಗಡೆಗೊಂಡ ಅಪರಾಧಿಗಳನ್ನು ತಮ್ಮ ಸ್ವಗಹದಲ್ಲಿ ಸನ್ಮಾನಿಸಿರುವ ಕೇಂದ್ರ ಸಚಿವ ಜಯಂತ್‍ಸಿನ್ಹಾರ ಕತ್ಯವನ್ನು ಕಾರ್ಯಕಾರಿ ಸಮಿತಿ ಸಭೆಯು ತೀವ್ರವಾಗಿ ಖಂಡಿಸುತ್ತದೆ. ಸಂಘಪರಿವಾರ ಪ್ರಾಯೋಜಿತ ಗೋರಕ್ಷಾ ಗುಂಪು ಮತ್ತು ಬಿಜೆಪಿ ಕಾರ್ಯಾಲಯಗಳು ಇಂತಹ ಪ್ರಕರಣಗಳಲ್ಲಿ ಭಾಗಿಯಾಗಿವೆ ಎಂಬುದನ್ನು ಪ್ರಸಕ್ತ ಘಟನೆಯು ಸಾಬೀತುಪಡಿಸಿದೆ. ಗುಂಪುಹತ್ಯೆ ಪ್ರಕರಣವನ್ನು ಒಂದು ಪ್ರತ್ಯೇಕ ಸನ್ನಿವೇಶದಲ್ಲಿ ನಡೆಯುವ ಘಟನೆ ಎಂದು ಹೇಳಿಕೆ ನೀಡುವ ಮೂಲಕ ಕೈತೊಳೆದುಕೊಳ್ಳುವ ಸರಕಾರವು ಪ್ರಕರಣವು ಹೆಚ್ಚು ಪುನರಾವರ್ತನೆಯಾಗಲು ಕಾರಣವಾಗಿದೆ. ಆದರೆ ಅಮಾಯಕ ಮುಸ್ಲಿಮï ಯುವಕನನ್ನು ಹತ್ಯೆಗೈದ ಆರೋಪಿಗಳನ್ನು ಇದೀಗ ಕೇಂದ್ರ ಸಚಿವರೇ ಸನ್ಮಾನಿಸಿರುವುದು ಅಮಾನವೀಯ ಕತ್ಯ ಮತ್ತು ಅಪರಾಧಿಗಳಿಗೆ ಹಾಗೂ ಅಪರಾಧ ಕತ್ಯಗಳಿಗೆ ಸರಕಾರದ ಬೆಂಗಾವಲು ಇದೆ ಎಂಬ ಪ್ರಚೋದನೆಯನ್ನೂ ನೀಡಿದೆ.

ದಮನಕಾರಿ ಕ್ರಮಗಳನ್ನು ನಿಲ್ಲಿಸುವಂತೆ ಕೇರಳ ಸರಕಾರಕ್ಕೆ ಆಗ್ರಹ
ಕ್ಯಾಂಪಸ್ ಘರ್ಷಣೆಯಲ್ಲಿ ಎಸ್‍ಎಫ್‍ಐ ನಾಯಕ ದುರಂತ ಸಾವನ್ನಪ್ಪಿದ ಬಳಿಕ ಕೇರಳದ ಎಲ್‍ಡಿಎಫ್ ಸರಕಾರವು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಮತ್ತು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಕಾರ್ಯಕರ್ತರ ಮೇಲೆ ಅಸಾಂವಿಧಾನಿಕ ಮತ್ತು ದಮನಕಾರಿ ಕ್ರಮ ತೆಗೆದುಕೊಳ್ಳುತ್ತಿರುವ ಬಗ್ಗೆ ಪಾಪ್ಯುಲರ್‍ಫ್ರಂಟ್ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯು ತೀವ್ರ ಕಳವಳ ವ್ಯಕ್ತಪಡಿಸಿದೆ. ಪ್ರಾಣಹಾನಿಗೆ ಸಂಬಂಧಿಸಿದಂತೆ ನಿಷ್ಪP್ಷÀಪಾತ ಸಮಗ್ರ ತನಿಖೆ ನಡೆಸಿ ಆರೋಪಿಗಳನ್ನು ಕಾನೂನಿನ ಮುಂದೆ ಹಾಜರುಪಡಿಸುವ ಬದಲು ರಾಜ್ಯ ಪೆÇಲೀಸ್ ಇಲಾಖೆಯು, ತನ್ನ ರಾಜಕೀಯ ಎದುರಾಳಿಯನ್ನು ಮಣಿಸಲು ಸಿಪಿಎಂ ಪ್ರಯೋಗಿಸುತ್ತಿರುವ ಆಯುಧವಾಗಿ ಕಾರ್ಯನಿರ್ವಹಿಸುತ್ತಿದೆ. ದಮನಿತ ವರ್ಗಗಳ ಪರವಾದ ಆಶಾಕಿರಣದ ಧ್ವನಿಯಾಗಿ ಬೆಳೆದುಬರುತ್ತಿರುವ ಎಸ್‍ಡಿಪಿಐ ಪP್ಷÀವನ್ನು ಹತ್ತಿಕ್ಕುವುದು ಸರಕಾರದ ಮುಖ್ಯ ಉz್ದÉೀಶವಾದಂತಿದೆ. ಇದೇ ವೇಳೆ ಪ್ರಸಕ್ತ ಪ್ರಕರಣದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಹೆಸರನ್ನೂ ಎಳೆದು ತರಲಾಗುತ್ತಿದ್ದು, ಇದು ಕೋಮುಧ್ರುವೀಕರಣದ ಮೂಲಕ ರಾಜಕೀಯ ಲಾಭ ಪಡೆಯುವ ತಂತ್ರವಾಗಿದೆ. ದುರದಷ್ಟವಶಾತ್ ಮಾಧ್ಯಮಗಳು ಕೂಡ ಕೇರಳದಲ್ಲಿ ಇದೇ ಮೊದಲ ಬಾರಿಗೆ ಕ್ಯಾಂಪಸ್‍ನೊಳಗೆ ಇಂತಹz್ದÉೂಂದು ಹಿಂಸಾ ಕತ್ಯ ನಡೆದಿದೆ ಎಂಬ ರೀತಿಯಲ್ಲಿ ಪ್ರಕರಣವನ್ನು ಅಗತ್ಯಕ್ಕಿಂತಲೂ ಹೆಚ್ಚು ಉಬ್ಬಿಸುತ್ತಿದೆ. ಪ್ರಕರಣವನ್ನು ಕೋಮುವಾದೀಕರಣಗೊಳಿಸುವ ಕೆಟ್ಟ ರಾಜಕಾರಣವನ್ನು ಕೊನೆಗೊಳಿಸುವಂತೆ ಮತ್ತು ನವಸಾಮಾಜಿಕ ಆಂದೋಲನವನ್ನು ಪೆÇಲೀಸರ ಮೂಲಕ ಹತ್ತಿಕ್ಕುವ ಕಾರ್ಯವನ್ನು ನಿಲ್ಲಿಸುವಂತೆ ನಾವು ರಾಜ್ಯ ಎಲ್‍ಡಿಎಫ್ ಸರಕಾರ ಮತ್ತು ಸಿಪಿಎಂ ನಾಯಕತ್ವವನ್ನು ಆಗ್ರಹಿಸುತ್ತಿz್ದÉೀವೆ.


Spread the love