ಜಾನುವಾರು ಕಳ್ಳತನ ಮಾಡಿ ಸಾಗಿಸುತ್ತಿದ್ದವರ ಬಂಧನ

Spread the love

ಜಾನುವಾರು ಕಳ್ಳತನ ಮಾಡಿ ಸಾಗಿಸುತ್ತಿದ್ದವರ ಬಂಧನ

ಮಂಗಳೂರು: ಜಾನುವಾರುಗಳನ್ನು ಕಳ್ಳತನ ಮಾಡಿ ಅಕ್ರಮವಾಗಿ ಹಿಂಸಾತ್ಮಕ ರೀತಿಯ ಕಸಾಯಿಖಾನೆಗೆ ಸಾಗಾಟ ಮಾಡುತ್ತಿದ್ದ ಮೂವರನ್ನು ಡಿಸಿಐಬಿ ಪೋಲಿಸರು ಬಂಧಿಸಿದ್ದಾರೆ.

ಅಗಸ್ಟ್ 9 ರಂದು ಬೆಳಗ್ಗಿನ ಜಾವ ಮಂಗಳೂರು ಜಿಲ್ಲಾ ಡಿಸಿಐಬಿ ಪೊಲೀಸ್ ನಿರೀಕ್ಚಕರಾದ ಶ್ರೀ ಸುನಿಲ್ ವೈ ನಾಯ್ಕ್ ರವರ ನೇತ್ರತ್ವದ ಡಿಸಿಐಬಿ ತಂಡ ಪುಂಜಾಲಕಟ್ಟೆಯ ಸೊಣಂದೂರು ಅಡ್ತಿಳ ಎಂಬಲ್ಲಿ ಜಾನುವಾರುಗಳನ್ನು ಕಳ್ಳತನ ಮಾಡಿ ಅಕ್ರಮವಾಗಿ ಹಿಂಸಾತ್ಮಕ ರೀತಿಯಲ್ಲಿ ಕಸಾಯಿಖಾನೆಗೆ ಸಾಗಾಟ ಮಾಡುತ್ತಿರುವವರನ್ನು ಬೆನ್ನಟ್ಟಿ ದ್ದಾಗ ವಾಹನವನ್ನು ಆರೋಪಿಗಳು ಸ್ಥಳದಲ್ಲಿಯೇ ಬಿಟ್ಟು ಸಾಗಾಟ ಸಮಯ ಬೆಂಗಾವಲಿನಲ್ಲಿದ್ದ ಪಿಯೆಟ್ ಪುಂಟೋ ಕಾರಿನಲ್ಲಿ ಪರಾರಿಯಾಗಿರುತ್ತಾರೆ, ಪರಾರಿಯಾದ ವ್ಯಕ್ತಿಗಳು ಫಾರೂಕ್ ಸಜಿಪ, ಅಮ್ಮೆಮ್ಮಾರ್ ನಿವಾಸಿಗಳಾದ, ಜೈನು @ ಜೈನುದ್ದೀನ್, ಅರಫಾ ಎಂದು ತಿಳಿದು ಬಂದಿದ್ದು, ಉಳಿದ ಇಬ್ಬರು ಆರೋಪಿಗಳು ಫರಂಗಿಪೇಟೆ ನಿವಾಸಿಗಳೆಂದು ತಿಳಿದು ಬಂದಿರುತ್ತದೆ.

ವಶಪಡಿಸಿಕೊಂಡ ಕೆ 19 ಎಎ 6939 ಟೆಂಪೋ 407 ವಾಹನದಲ್ಲಿ ಕಳವು ಮಾಡಿದ ಆರು ಜಾನುವಾರುಗಳನ್ನು ವಶಪಡಿಕೊಂಡಿದ್ದು ಮುಂದಿನ ಕ್ರಮದ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ. ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಈ ಪ್ರಕರಣವನ್ನು ದಕ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ; ರವಿಕಾಂತೇಗೌಡ ರವರ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಚಕರಾದ ಸಜಿತ್ ವಿಜೆ ರವರ ಸೂಚನೆಯಂತೆ ಡಿಸಿಐಬಿ ಪೊಲೀಸ್ ನಿರೀಕ್ಚಕರಾದ ಸುನಿಲ್ ವೈ ನಾಯ್ಕ್ ರವರ ನೇತೃತ್ವದ ಡಿಸಿಐಬಿ ತಂಡದ ಸಿಬ್ಬಂದಿಗಳಾದ ಲಕ್ಷ್ಮಣ ಕೆಜಿ, ಉದಯ ರೈ , ಪ್ರವೀಣ ಮುರುಗೋಳಿ, ಇಕ್ನಾಲ್ ಎ ಇ, ತಾರನಾಥ,ಎಸ್ ವಿಜಯ ಗೌಡ ರವರು ಭಾಗವಹಿಸಿರುತ್ತಾರೆ.


Spread the love