ಜಿಲ್ಲಾಧಿಕಾರಿಯವರನ್ನು ಭೇಟಿಯಾಗಿ ಸಮಸ್ಯೆಗಳ ಬಗ್ಗೆ ಶಾಸಕ ಕಾಮತ್ ನಿಯೋಗ ಚರ್ಚೆ

Spread the love

ಜಿಲ್ಲಾಧಿಕಾರಿಯವರನ್ನು ಭೇಟಿಯಾಗಿ ಸಮಸ್ಯೆಗಳ ಬಗ್ಗೆ ಶಾಸಕ ಕಾಮತ್ ನಿಯೋಗ ಚರ್ಚೆ

ಮಂಗಳೂರು: ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಅವರ ನೇತೃತ್ವದಲ್ಲಿ ಭಾರತೀಯ ಜನತಾ ಪಾಟರ್ಿ ನಿಯೋಗ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರನ್ನು ಭೇಟಿಯಾಗಿ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಿತು.

ಜಿಲ್ಲಾಧಿಕಾರಿಯವರೊಂದಿಗೆ ಮಾತನಾಡಿದ ಶಾಸಕ ಕಾಮತ್ ಅವರು ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಉದ್ಯಮಿಗಳಿಗೆ ನೀಡಲಾಗುವ ಟ್ರೇಡ್ ಲೈಸೆನ್ಸ್ ಮತ್ತು ಅದರ ನವೀಕರಣದಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ವಿವರಿಸಿದರು. ಅದರೊಂದಿಗೆ ಮರಳು ಪೂರೈಕೆಯಲ್ಲಿ ಆಗುತ್ತಿರುವ ನಿರಂತರ ಸಮಸ್ಯೆಯಿಂದ ಮಧ್ಯಮ ವರ್ಗದ ಜನ ಮನೆಕಟ್ಟಲಾಗದೇ, ರಿಪೇರಿ ಮಾಡಲಾಗದೇ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ತಿಳಿಸಿದರು. ಅಷ್ಟೇ ಅಲ್ಲದೇ ಪ್ರಾಪರ್ಟಿ ಕಾರ್ಡ್ ಮಾಡಿಸಲು ಹೋಗುವ ಜನರಿಗೆ ಅಲ್ಲಿ ಸರಿಯಾದ ವ್ಯವಸ್ಥೆ ಇಲ್ಲದೆ ಅವರು ತೊಂದರೆ ಅನುಭವಿಸುತ್ತಿರುವುದನ್ನು ವಿವರಿಸಿದ ಶಾಸಕ ಕಾಮತ್ ಅವರು ತಾವು ಆ ಬಗ್ಗೆ ಸೂಕ್ತ ಕ್ರಮದ ಅವಶ್ಯಕತೆಯನ್ನು ವಿವರಿಸಿದರು. ಇನ್ನು ಪಾಲಿಕೆ ವ್ಯಾಪ್ತಿಯಲ್ಲಿ ಕಸ ವಿಲೇವಾರಿಯ ಸಮಸ್ಯೆ, ಅದನ್ನು ವಹಿಸಿಕೊಂಡಿರುವ ಗುತ್ತಿಗೆದಾರರ ನಿರ್ಲಕ್ಷ್ಯದ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದ ಶಾಸಕ ಕಾಮತ್ ಅವರು ಡ್ರೈನೇಜ್ ಸಮಸ್ಯೆಗಳಿಂದ ಮಳೆಗಾಲದಲ್ಲಿ ಕೃತಕ ನೆರೆಯಿಂದ ಜನ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಮನದಟ್ಟು ಮಾಡಿದರು.

ಶಾಸಕರೊಂದಿಗೆ ಬಿಜೆಪಿ ಮುಖಂಡರಾದ ರವಿಶಂಕರ್ ಮಿಜಾರ್,ನಿತಿನ್ ಕುಮಾರ್,ಸಂಜಯ್ ಪ್ರಭು,ಪ್ರೇಮಾನಂದ ಶೆಟ್ಟಿ,ಸುಧೀರ್ ಶೆಟ್ಟಿ ಕಣ್ಣೂರು,ವಿಜಯ್ ಕುಮಾರ್ ಶೆಟ್ಟಿ,ರಮೇಶ್ ಕಂಡೆಟ್ಟು,ಭಾಸ್ಕರ್ ಚಂದ್ರ ಶೆಟ್ಟಿ,ರೂಪಾ ಡಿ ಬಂಗೇರ,ವಸಂತ್ ಜೆ ಪೂಜಾರಿ,ಶ್ರೀನಿವಾಸ್ ಶೇಟ್,ಜಯಂತಿ ಆಚಾರ್,ರಾಜೇಂದ್ರ ಕುಮಾರ್,ಪೂರ್ಣಿಮಾ,ಮುತಾಲಿಬ್, ಉಪಸ್ಥಿತರಿದ್ದರು .


Spread the love