ಜಿಲ್ಲೆಯಲ್ಲಿ ಮಕ್ಕಳ ಚಲನ ಚಿತ್ರೋತ್ಸವ- ಅಪರ ಜಿಲ್ಲಾಧಿಕಾರಿ

Spread the love

ಜಿಲ್ಲೆಯಲ್ಲಿ ಮಕ್ಕಳ ಚಲನ ಚಿತ್ರೋತ್ಸವ- ಅಪರ ಜಿಲ್ಲಾಧಿಕಾರಿ

ಉಡುಪಿ: ಜಿಲ್ಲೆಯಲ್ಲಿ ಡಿಸೆಂಬರ್ 16 ರಿಂದ 22 ರ ವರೆಗೆ ಜಿಲ್ಲೆಯ ಎಲ್ಲಾ ಚಿತ್ರಮಂದಿರಗಳಲ್ಲಿ, ಕರ್ನಾಟಕ ಶೈಕ್ಷಣಿಕ ಮತ್ತು ಸಾಂಸ್ಕøತಿಕ ಮಕ್ಕಳ ಚಿತ್ರ ಸಂಸ್ಥೆ, ಚಿಕ್ಕಬಳ್ಳಾಪುರ ಇವರ ಮೂಲಕ ಮಕ್ಕಳ ಚಲನಚಿತ್ರೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ಅಪರ ಜಿಲ್ಲಾಧಿಕಾರಿ ಅನುರಾಧ ತಿಳಿಸಿದ್ದಾರೆ.

film-fest

ಅವರು, ಮಕ್ಕಳ ಚಲನಚಿತ್ರೋತ್ಸವ ಏರ್ಪಡಿಸುವ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯ ಕಿರಿಯ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮಕ್ಕಳಿಗೆ, ಶಾಲೆಗೆ ಸಮೀಪವಿರುವ ಚಿತ್ರಮಂದಿರಗಳಲ್ಲಿ ಡಿಸೆಂಬರ್ 16 ರಿಂದ 22 ರ ವರೆಗೆ ಪ್ರತಿದಿನ ಬೆಳಗ್ಗೆ 8 ರಿಂದ 10 ರ ವರೆಗೆ ಚಲನಚಿತ್ರೋತ್ಸವ ಕಾರ್ಯಕ್ರಮ ನಡೆಯಲಿದ್ದು, ಮಕ್ಕಳಿಗೆ ಶೈಕ್ಷಣಿಕವಾಗಿ ಪ್ರೇರೇಪಣೆ ನೀಡುವಂತಹ ಚಲನಚಿತ್ರವನ್ನು ಪ್ರದರ್ಶಿಸಲಾಗುವುದು, ಮಕ್ಕಳನ್ನು ಚಿತ್ರಮಂದಿರಗಳಿಗೆ ಕರೆತರುವ ಮತ್ತು ಮರಳಿ ಶಾಲೆಗೆ ಕರೆದುಕೊಂಡು ಹೋಗುವ ಜವಾಬ್ದಾರಿ ಸಂಪೂರ್ಣವಾಗಿ ಶಿಕ್ಷಕರದ್ದು, ಮಕ್ಕಳ ಸುರಕ್ಷತೆಗೆ ಶಿಕ್ಷಕರು ಹೆಚ್ಚಿನ ಗಮನ ನೀಡುವಂತೆ ಅನುರಾಧ ತಿಳಿಸಿದರು.

ಯುಎಫ್‍ಓ ತಂತ್ರಜ್ಞಾನದೊಂದಿಗೆ, “ಮಾನಿತ” ಎಂಬ ಚಲನಚಿತ್ರವನ್ನು ಉಡುಪಿಯ ಅಲಂಕಾರ್, ಕಲ್ಪನಾ, ಆರ್ಶಿವಾದ್, ಡಯಾನ ಚಿತ್ರಮಂದಿರಗಳು, ಕಾರ್ಕಳದ ರಾಧಿಕಾ ಮತ್ತು ಪ್ಲಾನೆಟ್ ಚಿತ್ರಮಂದಿರ, ಕುಂದಾಪುರದ ವಿನಾಯಕ ಮತ್ತು ಬೈಂದೂರಿನ ಶಂಕರ್ ಚಿತ್ರಮಂದಿರದಲ್ಲಿ ಮಕ್ಕಳಿಗೆ ಚಿತ್ರ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ,

ಚಲನಚಿತ್ರ ವೀಕ್ಷಣೆಗೆ ಪ್ರತಿ ಟಿಕೆಟ್ ಗೆ ರೂ.15 ದರ ನಿಗಧಿಪಡಿಸಿದ್ದು, ಈ ಟಿಕೇಟ್‍ಗಳನ್ನು ಸಂಬಂದಪಟ್ಟ ಶಾಲೆಗಳಲ್ಲಿ ಶಿಕ್ಷಕರು ವಿತರಿಸುವರು, ಟೆಕೆಟ್ ಮಾರಾಟದ ಮೊತ್ತದಲ್ಲಿ ಚಲನಚಿತ್ರದ ವಿತರಣೆ, ಚಿತ್ರಮಂದಿರದ ಬಾಡಿಗೆ, ಉದ್ಘಾಟನೆ ಮುಂತಾದ ಕಾರ್ಯಕ್ರಮಗಳಿಗೆ ಬಳಸಲಾಗುವುದು ಎಂದು ಚಿತ್ರೋತ್ಸವದ ವ್ಯವಸ್ಥಾಪಕ ರಮೇಶ್ ತಿಳಿಸಿದರು.

ರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಎಲ್ಲಾ ಚಿತ್ರಮಂದಿರಗಳ ಮಾಲೀಕರು ಉಪಸ್ಥಿತರಿದ್ದರು.


Spread the love