ಜೇಸಿಐ ವಲಯ ಹದಿನೈದಕ್ಕೆ ಅತ್ಯುತ್ತಮ ವಲಯಾಧ್ಯಕ್ಷ ಸೇರಿದಂತೆ 16 ರಾಷ್ಟ್ರೀಯ ಪ್ರಶಸ್ತಿ

Spread the love

ಜೇಸಿಐ ವಲಯ ಹದಿನೈದಕ್ಕೆ ಅತ್ಯುತ್ತಮ ವಲಯಾಧ್ಯಕ್ಷ ಸೇರಿದಂತೆ 16 ರಾಷ್ಟ್ರೀಯ ಪ್ರಶಸ್ತಿ

ಕಾಪು: ರಾಜಸ್ಥಾನದ ಜೈಪುರದಲ್ಲಿ ಜರಗಿದ 63ನೇ ರಾಷ್ಟ್ರೀಯ ಅ„ವೇಶನದಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನೊಳಗೊಂಡಿರುವ ಜೇಸಿಐ ವಲಯ ಹದಿನೈದಕ್ಕೆ ಜೇಸಿಐ ಭಾರತದ ಅತ್ಯುತ್ತಮ ವಲಯಾಧ್ಯಕ್ಷ ಪ್ರಶಸ್ತಿಯೂ ಸೇರಿದಂತೆ 16 ರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿವೆ ಎಂದು 2018ರ ವಲಯಾಧ್ಯಕ್ಷ ರಾಕೇಶ್ ಕುಂಜೂರು ಮತ್ತು ಜೇಸಿಐ ಇಂಡಿಯಾ ಫೌಂಡೇಷನ್ ನಿರ್ದೇಶಕ ವೈ. ಸುಕುಮಾರ್ ಜಂಟಿ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.

ಕಾಪು ಪ್ರೆಸ್ ಕ್ಲಬ್ನಲ್ಲಿ ಗುರವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಜೇಸಿಐ ಭಾರತದ ವಿವಿಧ ರಾಜ್ಯಗಳ 25 ವಲಯಗಳ ಮೂರು ಸಾವಿರಕ್ಕೂ ಅ„ಕ ಮಂದಿ ಜೇಸಿ ಪ್ರತಿನಿ„ಗಳು ಭಾಗವಹಿಸಿದ್ದ ರಾಷ್ಟ್ರೀಯ ಸಮ್ಮೇಳನದಲ್ಲಿ ಜೇಸಿಐ ಭಾರತದ ರಾಷ್ಟ್ರೀಯ ಅಧ್ಯಕ್ಷ ಅರ್ಪಿತ್ ಹಾತಿ ಅವರು ಪ್ರಶಸ್ತಿಯನ್ನು ಹಸ್ತಾಂತರಿಸಿದರು ಎಂದರು.

ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನೊಳಗೊಂಡಿರುವ ವಲಯ ಹದಿನೈದರಲ್ಲಿ 2018ನೇ ಸಾಲಿನಲ್ಲಿ ಜೇಸಿಐ ಇಂಡಿಯಾ ಫೌಂಡೇಷನ್ಗೆ 14 ಲಕ್ಷ ರೂ. ದೇಣಿಗೆ, 18 ನೂತನ ಘಟಕಗಳ ಸ್ಥಾಪನೆ, 400ಕ್ಕೂ ಅ„ಕ ಸದಸ್ಯರ ಸೇರ್ಪಡೆ, 375 ವಿದ್ಯಾರ್ಥಿಗಳಿಗೆ 2 ಸಾವಿರ ರೂ. ಗಳಂತೆ ವಿದ್ಯಾರ್ಥಿ ವೇತನ ವಿತರಣೆ, 300ಕ್ಕೂ ಅ„ಕ ಇಂಪ್ಯಾಕ್ಟ್ 2030 ಕಾರ್ಯಕ್ರಮಗಳು, 100ಕ್ಕೂ ಅ„ಕ ಶಾಶ್ವತ ಯೋಜನೆಗಳ ಕೊಡಗೆ, ಕೇರಳ – ಕೊಡಗು ಸಂತ್ರಸ್ತರ ನಿದಿಗೆ 3 ಲಕ್ಷ ರೂ. ಗೂ ಮಿಕ್ಕ ಹಣಕಾಸಿನ ಕೊಡುಗೆ, ಲಕ್ಷಾಂತರ ರೂ. ಮೌಲ್ಯದ ವಸ್ತುಗಳ ಹಸ್ತಾಂತರ, 2 ಸಾವಿರಕ್ಕೂ ಅ„ಕ ತರಬೇತಿ ಕಾರ್ಯಕ್ರಮಗಳ ಆಯೋಜನೆ, 1000ಕ್ಕೂ ಅ„ಕ ಯುನಿಟ್ ರಕ್ತ ಸಂಗ್ರಹಣೆ, 2000ಕ್ಕೂ ಅ„ಕ ಮಂದಿಯಿಂದ ನೇತ್ರದಾನ ವಾಗ್ದಾನ ಮೊದಲಾದ ಮಹತ್ವಪೂರ್ಣವಾದ ಕಾರ್ಯಕ್ರಮಗಳು ನಡೆದಿದ್ದು ಇದನ್ನು ಆಧರಿಸಿ, ಪ್ರಶಸ್ತಿಗಳು ಲಭಿಸಿವೆ ಎಂದರು.

ಜೇಸಿಐ ಇಂಡಿಯಾ ಫೌಂಡೇಷನ್ನ ನಿರ್ದೇಶಕ ವೈ. ಸುಕುಮಾರ್ ಮಾತನಾಡಿ, ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿ ಯುವ ಜನರನ್ನು ತರಬೇತಿಯ ಮೂಲಕ ಸಿದ್ಧ ಪಡಿಸುವ ಅಂತರಾಷ್ಟ್ರೀಯ ಸಂಸ್ಥೆಯಾಗಿರುವ ಜೇಸಿಐ ಸಂಸ್ಥೆಯು ಭಾರತದಾದ್ಯಂತ ಸುಮಾರು 1500ಕ್ಕೂ ಅ„ಕ ಜೇಸಿಐ ಘಟಕಗಳ ಮೂಲಕವಾಗಿ 50 ಸಾವಿರದಷ್ಟು ಸದಸ್ಯರನ್ನು ಹೊಂದಿದೆ. ವಲಯ ಹದಿನೈದರಲ್ಲಿ 80 ಘಟಕಗಳಿದ್ದು, 2600ಕ್ಕೂ ಅ„ಕ ಮಂದಿ ಕ್ರಿಯಾಶೀಲ ಸದಸ್ಯರು ಆಂದೋಲನದಲ್ಲಿ ತೊಡಗಿಸಿಕೊಂಡಿದ್ದಾರೆ. 2018ನೇ ಸಾಲಿನಲ್ಲಿ ನಡೆದಿರುವ ಕಾರ್ಯಕ್ರಮಗಳು ವಲಯ ಹದಿನೈದನ್ನು ರಾಷ್ಟ್ರ ಮಟ್ಟದಲ್ಲಿ ನಂಬರ್ 1 ಸ್ಥಾನದಲ್ಲಿ ನಿಲ್ಲುವಂತೆ ಮಾಡಿದೆ ಎಂದರು.

ಪ್ರಶಸ್ತಿಗಳ ವಿವರ : ವಲಯಾಧ್ಯಕ್ಷ ರಾಕೇಶ್ ಕುಂಜೂರು ಅವರಿಗೆ ಅತ್ಯುತ್ತಮ ವಲಯಾಧ್ಯಕ್ಷ ಪ್ರಶಸ್ತಿ, ಚಂದ್ರಶೇಖರ್ ನಾಯರ್ ಅವರಿಗೆ ರಾಷ್ಟ್ರೀಯ ನಿರ್ದೇಶಕ ಪ್ರಶಸ್ತಿ, ಪಶುಪತಿ ಶರ್ಮಾ ಅವರಿಗೆ ವಲಯ ಉಪಾಧ್ಯಕ್ಷ ಪ್ರಶಸ್ತಿ, ಕಾರ್ತಿಕೇಯ ಮಧ್ಯಸ್ಥ ಅವರಿಗೆ ವಲಯ ನಿರ್ದೇಶಕ ಪ್ರಶಸ್ತಿ, ಜೇಸಿಐ ಮಂಗಳೂರು ಲಾಲ್ಭಾಗ್ನ ಅಧ್ಯಕ್ಷ ಸೌಜನ್ಯ ಹೆಗ್ಡೆ ಅತ್ಯುತ್ತಮ ಘಟಕಾಧ್ಯಕ್ಷೆ ಪ್ರಶಸ್ತಿ, ಜೇಸಿಐ ಗಣೇಶ್ ಪುರದ ಅಧ್ಯಕ್ಷೆ ಸ್ಮಿತಾ ಹೊಳ್ಳ ಅತ್ಯುತ್ತಮ ಮಹಿಳಾ ಜೇಸಿಐ ಸದಸ್ಯೆ ಪ್ರಶಸ್ತಿ, ಜೇಸಿಐ ಭಟ್ಕಳ ಸಿಟಿಯ ಅಧ್ಯಕ್ಷ ಅಬ್ದುಲ್ ಜಬ್ಬಾರ್ ಸಾಹೇಬ್ ಅವರಿಗೆ ಅತ್ಯುತ್ತಮ ಸೆನೆಟರ್ ಪ್ರಶಸ್ತಿ, ಮಂಗಳೂರು ಲಾಲ್ಭಾಗ್ಗೆ ಅತ್ಯುತ್ತಮ ಜೇಸಿ ಸಪ್ತಾಹ ಪ್ರಶಸ್ತಿ ಮತ್ತು ಅತ್ಯುತ್ತಮ ಅಭಿವೃದ್ಧಿ -ಬೆಳವಣಿಗೆ ವಿಭಾಗದ ಪ್ರಶಸ್ತಿ, ಜೇಸಿಐ ಕಾಪು ಘಟಕಕ್ಕೆ ಅತ್ಯುತ್ತಮ ಸಾರ್ವಜನಿಕ ಸಂಪರ್ಕ ವಿಭಾಗದ ಪ್ರಶಸ್ತಿ, ಜೇಸಿಐ ಗಣೇಶ್ಪುರ ಘಟಕಕ್ಕೆ ಅತ್ಯುತ್ತಮ ಇಂಪ್ಯಾಕ್ಟ್ 2030 ಪ್ರಶಸ್ತಿ, ಜೇಸಿಐ ಮೂಡಬಿದ್ರಿ ಘಟಕಕ್ಕೆ ಅತ್ಯುತ್ತಮ ತರಬೇತಿ ವಿಭಾಗದ ಪ್ರಶಸ್ತಿ, ಜೇಸಿಐ ಮುಂಡ್ಕೂರು ಭಾರ್ಗವ ಘಟಕಕ್ಕೆ ದೀರ್ಘ ಕಾಲೀನ ಸಮುದಾಯ ಅಭಿವೃದ್ಧಿ ವಿಭಾಗದ ಪ್ರಶಸ್ತಿ, ಜೇಸಿಐ ಮಂಗಳೂರು ಸಾಮ್ರಾಟ್ನ ಅಧ್ಯಕ್ಷ ರಾಘವೇಂದ್ರ ಹೊಳ್ಳ ಅವರಿಗೆ ರಾಷ್ಟಾಧ್ಯಕ್ಷರ ಮನ್ನಣೆ ಪ್ರಶಸ್ತಿ, ಜೇಸಿಐ ಪುತ್ತೂರು ಘಟಕಕ್ಕೆ ರಾಷ್ಟ್ರಾಧ್ಯಕ್ಷರ ಮನ್ನಣೆ ಪ್ರಶಸ್ತಿ ಮತ್ತು ಜೇಸಿಐ ಶೀರೂರು ರೂರಲ್ನ ವಿಕ್ರಂ ಪ್ರಭು ಅವರಿಗೆ ರಾಷ್ಟ್ರೀಯ ಪ್ರತಿಭಾನ್ವೇಷಣೆಯ ವಿನ್ನರ್ ಪ್ರಶಸ್ತಿ ಲಭಿಸಿದೆ.

ಪತ್ರಿಕಾಗೋಷ್ಟಿಯಲ್ಲಿ ಕಾರ್ಯಕ್ರಮ ವಿಭಾಗದ ರಾಷ್ಟ್ರೀಯ ನಿರ್ದೇಶಕ ಸಂದೀಪ್ ಕುಮಾರ್, 2018ರ ನಿಕಟಪೂರ್ವ ವಲಯಾಧ್ಯಕ್ಷ ಸಂತೋಷ್ ಜಿ., ವಲಯ ನಿರ್ದೇಶಕಿ ಸೌಮ್ಯ ರಾಕೇಶ್, ಜೇಸಿಐ ಕಾಪುವಿನ ಅಧ್ಯಕ್ಷೆ ಶಾರದೇಶ್ವರಿ ಗುರ್ಮೆ ಉಪಸ್ಥಿತರಿದ್ದರು.


Spread the love