ಜ.8 ಆಳ್ವಾಸ್‍ನಲ್ಲಿ ದಕ್ಷಿಣ ಭಾರತ ಮಟ್ಟದ ಹೋಮಿಯೋಥಿ ಸಮಾವೇಶ

Spread the love

ಜ.8 ಆಳ್ವಾಸ್‍ನಲ್ಲಿ ದಕ್ಷಿಣ ಭಾರತ ಮಟ್ಟದ ಹೋಮಿಯೋಥಿ ಸಮಾವೇಶ

ಮೂಡುಬಿದಿರೆ: ಆಳ್ವಾಸ್ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯ ಆಶ್ರಯದಲ್ಲಿ ಭಾರತೀಯ ಹೋಮಿಯೋಪಥಿ ಸಂಘದ ಸಹಯೋಗದೊಂದಿಗೆ ಜ.8ರಂದು ದಕ್ಷಿಣ ಭಾರತ ಮಟ್ಟದ ಹೋಮಿಯೋಥಿ ಸಮಾವೇಶ ವಿದ್ಯಾಗಿರಿಯ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆಯಲಿದೆ ಎಂದು ಆಳ್ವಾಸ್ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ.ಪ್ರವೀಣ್ ರಾಜ್ ಪಿ. ತಿಳಿಸಿದ್ದಾರೆ.

ಶೋಭಾವನದಲ್ಲಿರುವ ಕಾಲೇಜಿನ ಕ್ಯಾಂಪಸ್‍ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಮಾವೇಶದ ಕುರಿತು ಮಾಹಿತಿ ನೀಡಿದರು. ಜ.8ರಂದು ಬೆಳಗ್ಗೆ 10ಗಂಟೆಗೆ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಅಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ವಹಿಸಲಿದ್ದಾರೆ. ಕೇಂದ್ರಿಯ ಹೋಮಿಯೋಪಥಿ ಕೌನ್ಸಿಲ್ ಸದಸ್ಯ ಡಾ.ಶ್ರೀಕಾಂತ್ ಕೊಂಕಣಿ ಮುಖ್ಯ ಅತಿಥಿಯಾಗುತ್ತಾರೆ. ಭಾರತೀಯ ಹೋಮಿಯೋಪಥಿ ಸಂಘದ ರಾಷ್ಟ್ರೀಯ ಕಾರ್ಯದರ್ಶಿ ಡಾ.ಸುಧಿನ್ ಕುಮಾರ್ ಮತ್ತು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಗೌರವ ಅತಿಥಿಗಳಾಗಿರುತ್ತಾರೆ ಎಂದು ತಿಳಿಸಿದರು.

ಚರ್ಮದ ಕಾಯಿಲೆಯಲ್ಲಿ ಹೋಮಿಯೋಪಥಿಯ ಪಾತ್ರ’ ಎಂಬ ವಿಷಯದ ಮೇಲೆ ಕೇರಳ ಆರೋಗ್ಯ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯ ಡಾ.ಸಜಿ ಕೆ. ಬೆಳಗ್ಗೆ ಉಪನ್ಯಾಸ ನೀಡಲಿದ್ದಾರೆ. ಮಧ್ಯಾಹ್ನ ಕ್ಷಕಿರಣ, ಸಿಟಿಸ್ಕ್ಯಾನ್ ಮತ್ತು ಎಂಆರ್‍ಐ ಸ್ಕ್ಯಾನ್ ವಿಷಯದ ಕುರಿತು ಯೆನೆಪೋಯ ವಿಶ್ವವಿದ್ಯಾಲಯದ ರೇಡಿಯೋಲಜಿ ವಿಭಾಗದ ಮುಖ್ಯಸ್ಥ ಡಾ.ದೇವ್ ದಾಸ್ ಆಚಾರ್ಯ ಉಪನ್ಯಾಸ ನೀಡಲಿದ್ದಾರೆ. ದಕ್ಷಿಣ ಭಾರತದ ರಾಜ್ಯಗಳ ಹೋಮಿಯೋಪಥಿ ತಜ್ಞರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಡಾ.ಪ್ರವೀಣ್ ತಿಳಿಸಿದ್ದಾರೆ.

ಕಾಲೇಜಿನ ಉಪಪ್ರಾಂಶುಪಾಲ ಡಾ.ರೋಶನ್ ಪಿಂಟೋ, ಸಮಾವೇಶದ ಕಾರ್ಯದರ್ಶಿ ಡಾ.ರಾಖಾಲ್.ಪಿ, ಸಂಘದ ಸದಸ್ಯರಾದ ಡಾ.ವೈ.ಎಂ ಖಾದ್ರಿ, ಪ್ರಜ್ಞಾ ಆಳ್ವ ಪತ್ರಿಕಾಗೋಷ್ಠಿಯಲ್ಲಿದ್ದರು.


Spread the love