ಟ್ರಂಪ್ ಪ್ರವಾಸದಿಂದ ಭಾರತ ಮತ್ತು ಅಮೇರಿಕಾ ಸಂಬಂಧ ಮತ್ತಷ್ಟು ಗಟ್ಟಿ ಆಗಲಿದೆ – ನಳಿನ್ ಕುಮಾರ್ ಕಟೀಲ್

Spread the love

ಟ್ರಂಪ್ ಪ್ರವಾಸದಿಂದ ಭಾರತ ಮತ್ತು ಅಮೇರಿಕಾ ಸಂಬಂಧ ಮತ್ತಷ್ಟು ಗಟ್ಟಿ ಆಗಲಿದೆ – ನಳಿನ್ ಕುಮಾರ್ ಕಟೀಲ್

ಉಡುಪಿ; ಆಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಪ್ರವಾಸದಿಂದ ಭಾರತ ಮತ್ತು ಅಮೇರಿಕಾ ಸಂಬಂಧ ಮತ್ತಷ್ಟು ಗಟ್ಟಿ ಆಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.

ಅವರು ಸೋಮವಾರ ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಇಂದು ಇಡೀ ಜಗತ್ತು ಭಾರತದ ಕಡೆ ನೋಡುತ್ತಿದ್ದು, ಭಾರತೀಯ ಸಂಸ್ಕೃತಿ ಮೋದಿಯಿಂದ ಜಗತ್ತಿಗೆ ಪರಿಚಯ ಆಗುತ್ತಿದೆ . ಟ್ರಂಪ್ ಪ್ರವಾಸ ಗುಜರಾತ್ ನಿಂದ ಆರಂಭವಾಗುತ್ತಿದೆ ಭಾರತ ಮತ್ತು ಅಮೇರಿಕಾ ಸಂಬಂಧ ಮತ್ತಷ್ಟು ಗಟ್ಟಿ ಆಗಲಿದೆ. ಭಾರತಕ್ಕೆ ಎಲ್ಲಾ ನೆರವು ಅಮೇರಿಕಾದಿಂದ ಸಿಗಲಿದೆ ಎಂದರು.

ವಿಪಕ್ಷಗಳು ವಿರೋಧಕ್ಕೆ ವಿರೋಧ ಮಾಡುತ್ತಿದೆ ಬಿಜೆಪಿಯ ಎಲ್ಲವನ್ನು ಟೀಕೆ ಮಾಡೂದು ಕಾಂಗ್ರೆಸ್ ಜಾಯಮಾನ ಅವರದ್ದಾಗಿದ್ದು, ಕಾಂಗ್ರೆಸ್ ಬೌದ್ಧಿಕ ದಿವಾಳಿಯಾಗಿದೆ. ರಾಷ್ಟ್ರದ ಪರಿಕಲ್ಪನೆ ಕಾಂಗ್ರೆಸ್ ಗೆ ಇಲ್ಲ. ಕಾಂಗ್ರೆಸ್ ಆಡಳಿತ ಇರುವಾಗ ಒಬಾಮಾ ಬಂದಿಲ್ವಾ? ಒಬಾಮಾ ಲೋಕಸಭೆಯಲ್ಲಿ ಭಾಷಣ ಮಾಡಿದ್ದರು ಕಾಂಗ್ರೆಸ್ ಆವಾಗ ಕಣ್ಮುಚ್ಚಿ ಕೂತಿದ್ಯಾಕೆ? ಎಂದು ಪ್ರಶ್ನಿಸಿದರು.

ರಾಜ್ಯ ಬಿಜೆಪಿಯಲ್ಲಿ ಅಸಮಾಧಾನ ವಿಚಾರದ ಕುರಿತು ಪ್ರತಿಕ್ರಿಯಿಸಿದ ನಳಿನ್ ನಾವು ಹಾಲಿನ ಜೊತೆ ಸಕ್ಕರೆ ತರ ಇದ್ದೇವೆ ಭಿನ್ನಮತ ನಮ್ಮಲ್ಲಿ ಇಲ್ಲ ಭಿನ್ನಮತ ಮಾಧ್ಯಮದಲ್ಲಿ ಇದ್ಯಾ ಅಂತ ನನಗೆ ಸಂಶಯ ಬಿಜೆಪಿಯಲ್ಲಿ ಮೂಲ ಬಂದವರು, ಹೋದವರಿಲ್ಲ ಬಂದವರೆಲ್ಲರೂ ನಮ್ಮಜೊತೆ ಒಂದಾಗಿದ್ದಾರೆ ಎಂದರು.

ಬಿಜೆಪಿಯ ಶಾಸಕರು ಪಕ್ಷಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಕಾಂಗ್ರೆಸ್ ನಾಯಕ ಸಿ ಎಂ ಇಬ್ರಾಹಿಂ ಮಾತಿಗೆ ಪ್ರತಿಕ್ರಿಯಿಸಿದ ನಳಿನ್ ಸಿಎಂ ಇಬ್ರಾಹಿಂ ಯಾರ್ರೀ ಅವರು? ಅವರು ಅವರ ಪಕ್ಷದ ಬಗ್ಗೆ ಮಾತಾಡಲಿ. ಮೊದಲು ರಾಜ್ಯ ಕಾಂಗ್ರೆಸಿಗೆಅಧ್ಯಕ್ಷರ ಆಯ್ಕೆ ಮಾಡಲಿ ಮತ್ತು ಪಕ್ಷ ಉಳಿಸುವ ಚಿಂತನೆ ಮಾಡಲಿ . ರಾಷ್ಟ್ರಿಯ ಪಕ್ಷಕ್ಕೆ ಇನ್ನೂ ಸೋನಿಯಾ ಗಾಂಧಿಯೇ ಹಂಗಾಮಿಯಾಗಿದ್ದಾರೆ ವಿಪಕ್ಷ ನಾಯಕರ ಆಯ್ಕೆಯೇ ಅವರಿಂದ ಆಗ್ತಾಯಿಲ್ಲ ರಾಷ್ಟ್ರೀಯ ಪಕ್ಷಕ್ಕೆ ಏನು ಗತಿಗೇಡು ಬಂದಿದೆ ಎಂದರು.


Spread the love