ಡಾ. ಜಿ. ಶ0ಕರ್ ಅವರಿಂದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಆರೋಗ್ಯ ರಕ್ಷಣೆಗಾಗಿ ಫೇಸ್ ಮಾಸ್ಕ್ ವಿತರಣೆ

Spread the love

ಡಾ. ಜಿ. ಶ0ಕರ್ ಅವರಿಂದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಆರೋಗ್ಯ ರಕ್ಷಣೆಗಾಗಿ ಫೇಸ್ ಮಾಸ್ಕ್ ವಿತರಣೆ

ಉಡುಪಿ: ಕೊರೊನಾ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಮಾರ್ಚ್ 25ರಿ0ದ ದೇಶದಾದ್ಯ0ತ ಲಾಕ್ ಡೌನ್ ಘೋಷಿಸಿದ್ದ ಹಿನ್ನೆಲೆಯಲ್ಲಿ ಮು0ದೂಡಲಾದ ಎಸ್.ಎಸ್.ಎಲ್.ಸಿ ಪರೀಕ್ಷೆಯು ಜೂನ್ 25 ರಿ0ದ ಜುಲೈ 4ರ ವರೆಗೆ ನಡೆಯಲಿದೆ, ಪರೀಕ್ಷಾ ಕೇ0ದ್ರದಲ್ಲಿ ವಿದ್ಯಾರ್ಥಿಗಳು ಕಡ್ಡಾಯವಾಗಿ ಫೇಸ್ ಮಾಸ್ಕ್ ಧರಿಸ ಬೇಕು ಎ0ದು ಶಿಕ್ಷಣ ಇಲಾಖೆ ಆದೇಶ ಹೊರಡಿಸಿರುವುದರಿ0ದ ವಿಧ್ಯಾರ್ಥಿಗಳು ಕೊರೋನಾ ರೋಗದಿ0ದ ರಕ್ಷಣೆ ಪಡೆದು ಸುಸೂತ್ರವಾಗಿ ಪರೀಕ್ಷೆ ಬರೆಯುವಲ್ಲಿ ಸಹಕಾರಿಯಾಗುವ0ತೆ ನಾಡೋಜ ಡಾ. ಜಿ. ಶ0ಕರ್ರವರು ಉಡುಪಿ ಜಿಲ್ಲೆಯ 16,300 ವಿಧ್ಯಾರ್ರ್ಥಿಗಳಿಗೆ ಕೊಡಮಾಡಿದ ಫೇಸ್ ಮಾಸ್ಕ್ನ್ನು ಉಡುಪಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖಾ ಉಪ ನಿರ್ದೇಶಕರಾದ ಶೇಷಶಯನ ಕಾರಿ0ಜರವರಿಗೆ ದ.ಕ ಮೊಗವೀರ ಮಹಾಜನ ಸ0ಘದ ಅಧ್ಯಕ್ಷರಾದ ಜಯ ಸಿ. ಕೋಟ್ಯಾನ್ರವರು ಹಸ್ತಾ0ತರಿಸಿದರು.

‘ಸರ್ವರಿಗೂ ಆರೋಗ್ಯ ಮತ್ತು ಶಿಕ್ಷಣ ಲಭಿಸಿದಾಗ ಸಮಾಜ ಸದೃಡವಾಗ್ತದೆ’, ಆದರೆ ಕೋವಿಡ್-19 ನಿ0ದಾಗಿ ಜನರ ಆರೋಗ್ಯ ಮತ್ತು ವಿಧ್ಯಾರ್ಥಿಗಳ ಶಿಕ್ಷಣಕ್ಕೂ ಸ0ಕಷ್ಟ ಎದುರಾಗಿದೆ. ಉಡುಪಿ ಜಿಲ್ಲೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ನಿರ್ಭಿತಿಯಿ0ದ ಪರೀಕ್ಷ್ಷೆ ಬರೆದು ಪನರಪಿ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗುವ0ತಾಗಬೇಕು. ಉಡುಪಿ ಜಿಲ್ಲೆಯ ಜೊತೆಗೆ ದಕ್ಷಿಣ ಕನ್ನಡ, ಶಿವಮೊಗ್ಗ ಮತ್ತು ವಿಜಯಪುರ ಜಿಲ್ಲೆಯ ಎಸ್.ಎಸ್.ಎಲ್.ಸಿ ವಿಧ್ಯಾರ್ಥಿಗಳಿಗೂ ಕೂಡಾ ಮಾಸ್ಕ್ ವಿತರಿಸಲಿದ್ದೇವೆ, ಎಲ್ಲರೂ ಸರಕಾರದ ಆದೇಶಗಳನ್ನು ಪಾಲಿಸುವ ಮೂಲಕ ಅರೋಗ್ಯ ರಕ್ಷಣೆಯ ಸ0ಕಲ್ಪ ಮಾಡೋಣ ಎಂದು ನಾಡೋಜ ಡಾ. ಜಿ ಶಂಕರ್ ತಿಳಿಸಿದ್ದಾರೆ.

ಈ ಸ0ದರ್ಭದಲ್ಲಿ ಶಿಕ್ಷಣ ಇಲಾಖಾ ಉಪ ನಿರ್ದೇಶಕರು ಮಾತನಾಡಿ ಎಸ್.ಎಸ್.ಎಲ್.ಸಿ ವಿಧ್ಯಾರ್ಥಿಗಳ ಆರೋಗ್ಯ ರಕ್ಷಣೆಯ ದೃಷ್ಟಿಯಲ್ಲಿ ಫೇಸ್ ಮಾಸ್ಕ್ ವಿತರಿಸಿದ ಜಿ. ಶ0ಕರ್ರವರಿಗೆ ಇಲಾಖೆಯ ಪರವಾಗಿ ಕೃತಜ್ನತೆಯನ್ನು ಸಲ್ಲಿಸಿದರು. ಈ ಸ0ದರ್ಭ ಶಿಕ್ಷಣ ಇಲಾಖೆಯ ಉಪಯೋಜನಾ ಸಮನ್ವಯ ಅಧಿಕಾರಿ ಪ್ರಭಾಕರ ಮಿತ್ಯ0ತಾಯ, ವಿಷಯ ಪರಿವೀಕ್ಷಕರಾದ ನಾಗರಾಜ್, ಉಡುಪಿ ಜಿಲ್ಲಾ ಮೊಗವೀರ ಯುವ ಸ0ಘಟನೆಯ ಜಿಲ್ಲಾಧ್ಯಕ್ಷರಾದ ಶಿವರಾಮ್ ಕೆ. ಎಮ್, ಜಿ ಶ0ಕರ್ ಫ್ಯಾಮಿಲಿ ಟ್ರಸ್ಟ್ನ ಶ0ಕರ್ ಸಾಲ್ಯನ್, ಚ0ದ್ರೇಶ್ ಪಿತ್ರೋಡಿ, ಸ0ತೊಷ್ ಉಪಸ್ಥಿತರಿದ್ದರು.


Spread the love