ಡಾ| ಭರತ್ ಶೆಟ್ಟಿ ವೈ ರವರ ವಿರುದ್ಧ ಅವಮಾನಕರ ಸಂದೇಶ ಪಸರಿಸಿರುವ ವಿರುದ್ಧ ದೂರು ದಾಖಲು

Spread the love

ಡಾ| ಭರತ್ ಶೆಟ್ಟಿ ವೈ ರವರ ವಿರುದ್ಧ ಅವಮಾನಕರ ಸಂದೇಶ ಪಸರಿಸಿರುವ ವಿರುದ್ಧ ದೂರು ದಾಖಲು

ಮಂಗಳೂರು : ಮಂಗಳೂರು ನಗರ ಉತ್ತರ ವಿಧಾನ ಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯು ಅಭ್ಯರ್ಥಿ ಡಾ| ಭರತ್ ಶೆಟ್ಟಿ ವೈ ರವರ ವಿರುದ್ಧ ಸಾಮಾಜಿಕ ಜಾಲತಾಣ ಫೇಸ್‍ಬುಕ್ ಮತ್ತು ವಾಟ್ಸಾಪ್‍ಗಳಲ್ಲಿ ಅವಮಾನಕರ ಮತ್ತು ವಯಕ್ತಿಕ ನಿಂಧನಾತ್ಮಕ ಸಂದೇಶಗಳನ್ನು ತಯಾರಿಸುವವರ, ಬಿತ್ತರಿಸುವವರ, ಪ್ರತಿಕ್ರಿಯಿಸುವವರ ಮತ್ತು ಮೆಚ್ಚುಗೆ ವ್ಯಕ್ತಪಡಿಸುವವರ ವಿರುದ್ಧ ಕಾವೂರು ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿರುತ್ತದೆ.

ಮುಂದೆ ಡಾ| ಭರತ್ ಶೆಟ್ಟಿ ವೈ ರವರ ವಿರುದ್ಧ ಅಪಪ್ರಚಾರ ಮಾಡುವ ಮತ್ತು ಸುಳ್ಳು ಸುದ್ಧಿ ಪಸರಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುದೆಂದು ಬಿಜೆಪಿ ಮಂಗಳೂರು ನಗರ ಉತ್ತರ ಕಾನೂನು ಮತ್ತು ಸಂಸದೀಯ ಪ್ರಕೋಷ್ಠ ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದೆ.

ಈಗಾಗಲೇ ಡಾ| ಭರತ್ ಶೆಟ್ಟಿ ವೈ ರವರ ವಿರುದ್ಧ ಅವಮಾನಕರ ಮತ್ತು ಸುಳ್ಳು ಸುದ್ದಿಯನ್ನು ಪ್ರಕಟಿಸದಂತೆ ಪತ್ರಿಕಾ ಮಾಧ್ಯಮಗಳಿಗೆ ಮತ್ತು 30 ದೃಷ್ಯ ಮಾದ್ಯಮಗಳಿಗೆ ಮಾನ್ಯ ರಜಾಕಾಲೀನ ಜಿಲ್ಲಾ ನ್ಯಾಯಾಲಯವು ತಾತ್ಕಾಲಿಕ ನಿರ್ಬಂಧಕಾಜ್ಞೆಯನ್ನು ಹೊರಡಿಸಿರುತ್ತದೆ. ಆದ್ದುದರಿಂದ ಇನ್ನು ಮುಂದಕ್ಕೆ ಯಾರಾದರೂ ಅಥವಾ ಯಾವುದೇ ಸಂಘಟನೆಗಳು ಇಂತ ಸುಳ್ಳು ಸುದ್ದಿಯನ್ನು ಪಸರಿಸಬಾರದಾಗಿ ಮುಂದೆ ಒಂದು ವೇಳೆ ಪಸರಿಸುವುದು, ಪ್ರತಿಕ್ರಿಯಿಸುವುದು, ಮೆಚ್ಚುಗೆ ವ್ಯಕ್ತಪಡಿಸುವುದು, ಬಿತ್ತರಿಸುವುದು ಮಾಡಿದ್ದಲ್ಲಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಬಿಜೆಪಿ ಮಂಗಳೂರು ನಗರ ಉತ್ತರ ಕಾನೂನು ಮತ್ತು ಸಂಸದೀಯ ಪ್ರಕೋಷ್ಠ ಎಚ್ಚರಿಸಿದೆ.


Spread the love