ಡಾ ಮೊಗಸಾಲೆಗೆ ಮೂಡಬಿದರೆ ಶಿವರಾಮ ಕಾರಂತ ಪ್ರತಿಷ್ಠಾನ ಪುರಸ್ಕಾರ

Spread the love

ಡಾ ಮೊಗಸಾಲೆಗೆ ಮೂಡಬಿದರೆ ಶಿವರಾಮ ಕಾರಂತ ಪ್ರತಿಷ್ಠಾನ ಪುರಸ್ಕಾರ

ಮೂಡಬಿದರೆ: ಕನ್ನಡದ ಹೆಸರಾಂತ ಲೇಖಕರೂ, ಖ್ಯಾತ ಚಿಂತಕರೂ ಆಗಿದ್ದ ಡಾ ಶಿವರಾಮ ಕಾರಂತರ ಹೆಸರಿನಲ್ಲಿ ಸ್ಥಾಪಿಸಿರುವ ಪ್ರತಿಷ್ಠಾನ ಕಳೆದ ಇಪ್ಪತ್ತು ವರುಷಗಳಿಂದ ಪ್ರತಿ ವರುಷ ಕನ್ನಡದಲ್ಲಿ ಪ್ರಕಟಗೊಂಡ ಶ್ರೇಷ್ಟ ಕೃತಿಯನ್ನು ಆಧರಿಸಿ ಕ್ರತಿಕಾರರಿಗೆ ಶಿವರಾಮ ಕಾರಂತ ಪುರಸ್ಕಾರ ವನ್ನು ನೀಡುತ್ತಾ ಬಂದಿದ್ದು ಈ ವರುಷದ ಪುರಸ್ಕಾರಕ್ಕೆ ಮುಖಾಂತರ ಕಾದಂಬರಿಯ ಕೃತಿಕಾರ ಡಾ ನಾ ಮೊಗಸಾಲೆ ಅವರನ್ನು ಆಯಕ್ಕೆ ಮಾಡಲಾಗಿದೆ.

dr-na-mogasale

ಡಾ ಮೊಗಸಾಲೆಯವರು ಖ್ಯಾತ ಬರಹಗಾರರಾಗಿ ಹದಿನೇಳು ಕಾದಂಬರಿಗಳು, ಹತ್ತು ಕವನ ಸಂಕಲನಗಳು, ಐದು ಕಥಾ ಸಂಕಲನಗಳು, ಎರಡು ಆಯ್ದ ಲೇಖನಗಳ ಸಂಗ್ರಹಗಳು, ಹನ್ನೆರಡು ಸಂಪಾದಿತ ಕೃತಿಗಳು, ಆರು ವೈದ್ಯಕೀಯ ಕೃತಿಗಳನ್ನು ಪ್ರಕಟಿಸಿದ್ದಾರೆ. ಅವರ ಅನೇಕ ಕೃತಿಗಳು ಆಂಗ್ಲ, ಹಿಂದಿ ಮತ್ತು ತೆಲುಗು ಭಾಷೆಗಳಿಗೆ ಅನುವಾದಗೊಂಡಿದೆ.


Spread the love