ಡಿಸೆಂಬರ್ 14-15 : ರೈತ-ವಿಜ್ಞಾನಿ ಸಂವಾದ ಸಮಾಲೋಚನೆ ಕಾರ್ಯಾಗಾರ

Spread the love

ಡಿಸೆಂಬರ್ 14-15 : ರೈತ-ವಿಜ್ಞಾನಿ ಸಂವಾದ ಸಮಾಲೋಚನೆ ಕಾರ್ಯಾಗಾರ

ಮಂಗಳೂರು : ಮಂಗಳೂರಿನ ಮೀನುಗಾರಿಕಾ ಕಾಲೇಜಿನ ಸುವರ್ಣೋತ್ಸವದ ಅಂಗವಾಗಿ ದ.ಕ. ಜಿಲ್ಲೆಯ ಭಾರತೀಯ ಕೃಷಿ ಸಂಶೋದನಾ ಸಂಸ್ಥೆಯ ಅಂಗ ಸಂಸ್ಥೆಯಾದ ಕೃಷಿ ವಿಜ್ಞಾನ ಕೇಂದ್ರ, ಹೈದರಾಬಾದ್‍ನ ಕೇಂದ್ರೀಯ ಮೀನುಗಾರಿಕೆ ಅಭಿವೃದ್ದಿ ಮಂಡಳಿ ಮತ್ತು ಮೀನುಗಾರಿಕಾ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘದ ಸಹಯೋಗದಿಂದ ಹಮ್ಮಿಕೊಡಿರುವ ಮತ್ಸ್ಯ ವಸ್ತುಪ್ರದರ್ಶನವನ್ನು ಡಿಸೆಂಬರ್ 14 ರಿಂದ 15 ರವರೆಗೆ ಕಾಲೇಜಿನ ಆವರಣದಲ್ಲಿ ನಡೆಸಲಾಗುವುದು.

ಕೃಷಿ ವಿಜ್ಞಾನ ಕೇಂದ್ರದಿಂದ ಡಿಸೆಂಬರ್ 15 ರಂದು ಬೆಳಿಗ್ಗೆ 10.30 ಗಂಟೆಗೆ ಕಾಲೇಜಿನ ಮತ್ತು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಿಂದ ರೈತರ ಜೊತೆ ರೈತ-ವಿಜ್ಞಾನಿ ಸಂವಾದ ಸಮಾಲೋಚನೆ ಕಾರ್ಯಾಗಾರವನ್ನು ಕಾಲೇಜಿನ ಪೆÇ್ರ. ಎಚ್.ಪಿ.ಸಿ. ಶೆಟ್ಟಿ ಸಭಾಂಗಣದಲ್ಲಿ ನಡೆಸುತ್ತಿದೆ.

ಎರಡು ದಿನಗಳ ಪ್ರದರ್ಶನದಲ್ಲಿ, ವಿವಿಧ ಸಂಸ್ಥೆಗಳಾದ ಮೀನುಗಾರಿಕಾ ಕಾಲೇಜಿನ ಮುಖ್ಯ ಆವರಣಾ ವಿಭಾಗಗಳು ಮತ್ತು ತಾಂತ್ರಿಕಾ ವಿಭಾಗಗಳು, ಕೃಷಿ ವಿಜ್ಞಾನ ಕೇಂದ್ರ, ಕರ್ನಾಟಕ ಮೀನುಗಾರಿಕೆ ಅಭಿವೃದ್ದಿ ನಿಗಮ, ಕೇಂದ್ರೀಯ ಮತ್ಸ್ಯ ತಾಂತ್ರಿಕ ಸಂಸ್ಥೆ, ಸಾಗರೋತ್ಪನ್ನ ರಫ್ತು ಪ್ರಾಧಿಕಾರ, ಕೇದ್ರೀಯ ಕಡಲ ಮತ್ಸ್ಯ ಸಂಶೋದನಾ ಸಂಸ್ಥೆ, ಮೀನುಗಾರಿಕೆ ಇಲಾಖೆ, ಸಿ.ಆರ್.ಝಡ್. ಮುಂತಾದವುಗಳ ಮಳಿಗೆಗಳ ಜೊತೆ ಅಕ್ವೇರಿಯಂ ಗ್ಯಾಲರಿ ಪ್ರದರ್ಶಿಸಲಾಗುವುದು.

ವಿದ್ಯಾರ್ಥಿ ವೃಂದದವರು, ಉಪನ್ಯಾಸಕ ವರ್ಗ, ಪೆÇೀಷಕರು ಮತ್ತು ಸಾರ್ವಜನಿಕರು ಈ ವಸ್ತು ಪ್ರದರ್ಶನದಿಂದ ಮನರಂಜನೆಯ ಜೊತೆಗೆ ಮೀನುಗಾರಿಕೆಯಲ್ಲಿ ಸಾಧನೆಗೈದ ವೈಜ್ಞಾನಿಕ ಮಾಹಿತಿ ಪಡೆಯಬಹುದಾಗಿದೆ. ಪ್ರದರ್ಶನಕ್ಕೆ ಉಚಿತ ಪ್ರವೇಶ ಕಲ್ಪಿಸಲಾಗಿದೆ.

ಮೀನು ಕೃಷಿಕರು ಈ ಕಾರ್ಯಾಗಾರದಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆಯಬಹುದು. ಹೆಚ್ಚಿನ ಮಾಹಿತಿಗೆ ಮತ್ತು ನೊಂದಣಿಗೆ ರೈತರು ಸಂಪರ್ಕಿಸಬೇಕಾದ ವಿಳಾಸ ಕೃಷಿ ವಿಜ್ಞಾನ ಕೇಂದ್ರ, ಮಂಗಳೂರು, ಸ್ಥಿರ ದೂರವಾಣಿ ಸಂಖ್ಯೆ: 0824 2431 872, ಮೊಬೈಲ್ ಸಂಖ್ಯೆ: 99169 24084 ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.


Spread the love