ಮಾದಕ ವಸ್ತು ಮಾರಾಟ ಮಾಡುತ್ತಿದ್ದ  ಹಾಗೂ ದರೋಡೆ ಪ್ರಕರಣದ ಆರೋಪಿಗಳ ಬಂಧನ

Spread the love

  ಮಾದಕ ವಸ್ತು ಮಾರಾಟ ಮಾಡುತ್ತಿದ್ದ  ಹಾಗೂ ದರೋಡೆ ಪ್ರಕರಣದ ಆರೋಪಿಗಳ ಬಂಧನ

 ಮಂಗಳೂರು:  ನಗರದಲ್ಲಿ LSD ಎಂಬ ಮಾದಕ ವಸ್ತು ಮಾರಾಟ ಮಾಡುತ್ತಿದ್ದ  ಹಾಗೂ ಮಂಗಳೂರು ದಕ್ಷಿಣ  ಪೊಲೀಸ್  ಠಾಣೆಯಲ್ಲಿ ವರದಿಯಾದ ದರೋಡೆ ಪ್ರಕರಣದಲ್ಲಿ  ಭಾಗಿಯಾದ ಆರೋಪಿಗಳನ್ನು  ಬಂಧಿಸಿ ಅವರ ವಶದಿಂದ ಸುಮಾರು 13,000/- ಮೌಲ್ಯದ 13, LSD ಎಂಬ ಮಾದಕ ವಸ್ತುವನ್ನು,  ಹಾಗೂ ದರೋಡೆ ಮಾಡಿದ ಮೊಬೈಲ್ ಹ್ಯಾಂಡ್ ಸೆಟ್, ಸ್ಕೂಟರ್, ನಗದು ಹಣ ಮತ್ತು ದರೋಡೆ ಕೃತ್ಯಕ್ಕೆ ಬಳಸಿದ SWIFT ಕಾರು, ಚೂರಿ,ಕಬ್ಬಿಣದ ರಾಡ್  ಒಟ್ಟು 2,89,000/- ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಳ್ಳುವಲ್ಲಿ ಮಂಗಳೂರು ದಕ್ಷಿಣ ಠಾಣಾ ಪೊಲೀಸರು  ಯಶಸ್ವಿಯಾಗಿರುತ್ತಾರೆ.

ಬಂಧಿತರನ್ನು ಮಂಗಳೂರು ಕಾವೂರು ಆಕಾಶ ಭವನ ನಿವಾಸಿ ಗೌತಮ್ @ ಗೌತು (28) ಮತ್ತು ದೆರೆಬೈಲು ಕೊಂಚಾಡಿ ನಿವಾಸಿ ಲಾಯ್ ವೇಗಸ್ (26) ಎಂದು ಗುರುತಿಸಲಾಗಿದೆ.

 ದಿನಾಂಕ 11-12-2018 ರಂದು  ಮಂಗಳೂರು ನಗರದ  ಹೆರಿಟೇಜ್ ಕಟ್ಟಡದ ಎದುರಿನ ರಸ್ತೆ ಬದಿಯಲ್ಲಿ ಆರೋಪಿಗಳು   LSD ಎಂಬ ಮಾದಕ ವಸ್ತುವನ್ನು  ಗ್ರಾಹಕರಿಗೆ  ಮಾರಾಟ ಮಾಡಲು ವಶದಲ್ಲಿ ಇಟ್ಟುಕೊಂಡಿರುವ ಬಗ್ಗೆ ಮಾಹಿತಿ ಪಡೆದ  ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಕೆ.ಎಂ.ಶರೀಫ್ ರವರು  ಸಿಬ್ಬಂದಿಗಳೊಂದಿಗೆ  ಸ್ಥಳಕ್ಕೆ ತೆರಳಿ  ಆರೋಪಿಗಳನ್ನು ಬಂಧಿಸಿ  ಅವರ ವಶದಲ್ಲಿದ್ದ ಸುಮಾರು 13,000/- ಮೌಲ್ಯದ 13, LSD ಎಂಬ ಮಾದಕ ವಸ್ತುವನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ.   ಹಾಗೂ ವಿಚಾರಣಾ ಸಮಯ ಆರೋಪಿಗಳಾದ ಗೌತಮ್ ,ಲಾಯಿ ವೇಗಸ್ ರವರು  ಇತರರೊಂದಿಗೆ ಸೇರಿಕೊಂಡು ದಿನಾಂಕ 05-12-2018 ರಂದು ಮಂಗಳೂರು ನಗರದ ಫಳ್ನೀರ್ ಬ್ರಿಟ್ಟೊ ಲೇನ್ ನಿವಾಸಿ ಹಸನ್ ಶಿಮಾಕ್ ಎಂಬವರನ್ನು ಫಳ್ನೀರ್  ಎಂಬಲ್ಲಿದ ಅಪಹರಿಸಿ ಅವರಿಗೆ ಹಲ್ಲೆ ಮಾಡಿ ಅವರ ಸ್ಕೂಟರ್, ನಗದುಹಣ,ಹಾಗೂ ಮೊಬೈಲ್ ನ್ನು ದರೋಡೆ ಮಾಡಿದ ಪ್ರಕರಣದಲ್ಲಿ ಭಾಗಿಯಾಗಿರುವುದು ಕಂಡು ಬಂದ ಮೇರೆಗೆ ಆರೋಪಿಗಳ ವಶದಿಂದ  ದರೋಡೆ ಮಾಡಿದ ಮೊಬೈಲ್ ಹ್ಯಾಂಡ್ ಸೆಟ್, ಸ್ಕೂಟರ್, ನಗದು ಹಣ ಮತ್ತು ದರೋಡೆ ಕೃತ್ಯಕ್ಕೆ ಬಳಸಿದ SWIFT ಕಾರು, ಚೂರಿ,ಕಬ್ಬಿಣದ ರಾಡ್  ನ್ನು ಸ್ವಾಧೀನಪಡಿಸಿಕೊಳ್ಳಲಾಯಿತು..

 ಆರೋಪಿಗಳ ಪೈಕಿ ಗೌತಮ್ ಮೇಲೆ ಕಾವೂರು ಪೊಲೀಸ್ ಠಾಣೆಯಲ್ಲಿ 01ಹಲ್ಲೆ, 01ಕೊಲೆ  ಪ್ರಕರಣ ದಾಖಲಾಗಿದ್ದು ಈತನ ಮೇಲೆ ದಾಖಲಾದ  ಕೊಲೆ ಪ್ರಕರಣದಲ್ಲಿ  ಈತನಿಗೆ ಮಾನ್ಯ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದ್ದು  ಪ್ರಸ್ತುತ ಈತನು ಉಚ್ಚ ನ್ಯಾಯಾಲಯದಿಂದ ಜಾಮೀನು ಪಡೆದಿರುತ್ತಾರೆ.

            ಆರೋಪಿಗಳ ಪೈಕಿ ಲಾಯ್ ವೇಗಸ್ ಎಂಬಾತನ ಮೇಲೆ ಕಾವೂರು ಪೊಲೀಸ್ ಠಾಣೆಯಲ್ಲಿ2  ದರೋಡೆ ಯತ್ನ ಪ್ರಕರಣ, ಉತ್ತರ ಪೊಲೀಸ್  ಠಾಣೆಯಲ್ಲಿ 01 ದರೋಡೆ ಯತ್ನ ಪ್ರಕರಣ, ಬರ್ಕೆ ಪೊಲೀಸ್ ಠಾಣೆಯಲ್ಲಿ 01, ಕೊಲೆ ಯತ್ನ, 02 ಹಲ್ಲೆ ಪ್ರಕರಣ . ಹಾಗೂ  ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 01 ಹಲ್ಲೆ ಪ್ರಕರಣ ದಾಖಲಾಗಿರುತ್ತದೆ.

ಪೊಲೀಸ್ ಆಯುಕ್ತರಾದ ಟಿ.ಆರ್ ಸುರೇಶ್ IPS, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಹನುಮಂತರಾಯ, ಅಪರಾಧ ಮತ್ತು ಸಂಚಾರ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಉಮಾ ಪ್ರಶಾಂತ್ ಹಾಗೂ ಮಂಗಳೂರು ಕೇಂದ್ರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಭಾಸ್ಕರ್ ಒಕ್ಕಲಿಗ ಇವರ ಮಾರ್ಗದರ್ಶನದಲ್ಲಿ  ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಪ್ರಭಾರ ಪೊಲೀಸ್ ನಿರೀಕ್ಷಕರಾದ  ಕೆ.ಎಂ ಶರೀಫ್ ರವರು ಆರೋಪಿಗಳನ್ನು ಬಂಧಿಸಿರುತ್ತಾರೆ. ಆರೋಪಿಗಳ ಪತ್ತೆಗೆ ಮಂಗಳೂರು ಕೇಂದ್ರ ಉಪ ವಿಭಾಗದ ರೌಡಿ ನಿಗ್ರಹ ದಳದ ಪೊಲೀಸ್ ನಿರೀಕ್ಷಕರಾದ ರವೀಶ್ ನಾಯಕ್ ಹಾಗೂ ಸಿಬ್ಬಂದಿಗಳು, ಮಂಗಳೂರು ಪೂರ್ವ ಠಾಣೆಯ ಪೊಲೀಸ್ ನಿರೀಕ್ಷಕರಾದ ಮಾರುತಿ ನಾಯಕ್, ಮಂಗಳೂರು ದಕ್ಷಿಣ ಠಾಣೆಯ ಪಿಎಸ್ಐ ರವರುಗಳಾದ ರಾಜೇಂದ್ರ ಬಿ ಮತ್ತು ಮಂಜುಳಾ ಹಾಗೂ ಸಿಬ್ಬಂಧಿಗಳು   ಸಹಕರಿಸಿರುತ್ತಾರೆ.


Spread the love