ಡಿಸೇಲ್ ವಿತರಣೆಯಲ್ಲಿ ರೂ 58 ಲಕ್ಷ ವಂಚನೆ; ಪ್ರಕರಣ ದಾಖಲು

Spread the love

ಡಿಸೇಲ್ ವಿತರಣೆಯಲ್ಲಿ ರೂ 58 ಲಕ್ಷ ವಂಚನೆ; ಪ್ರಕರಣ ದಾಖಲು

ಉಡುಪಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಸಹಕಾರಿ ಮೀನು ಮಾರಾಟ ಮಹಾ ಮಂಡಳಿ ನಿಯಮಿತ ಮಂಗಳೂರು ಇದರ ಮಲ್ಪೆ ಡಿಸೇಲ್ ಬಂಕ್ ನಲ್ಲಿ ಡಿಸೇಲ್ ವಿತರಣೆಯಲ್ಲಿ ರೂ 58,67,498 ಹಣ ವಂಚಿಸಿರುವ ಕುರಿತು ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಅಂಜನಾದೇವಿ 2014 ರ ಅಗಸ್ಟ್ ನಿಂದ 2015 ರ ಮೇವರೆಗೆ ಪರಿಶೀಲನೆ ನಡೆಸಿದಾಗ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಸಹಕಾರಿ ಮೀನು ಮಾರಾಟ ಮಹಾ ಮಂಡಳಿಯ ಮಲ್ಪೆ ಡಿಸೇಲ್ ಬಂಕ್ ನಲ್ಲಿ ಕರ್ತವ್ಯನಿರತ ಮೇಲ್ವಿಚಾರಕರು ಹಾಗೂ ವ್ಯವಸ್ಥಾಪಕರು ಬಂಕ್ ನಿಂದ ಅಗತ್ಯ ವಸ್ತುಗಳ ಕಾಯ್ದೆಗನುಗುಣವಾಗಿ ಮೀನುಗಾರರಿಗೆ ವಿತರಿಸಬೇಕಾದಂತಹ ಡಿಸೇಲ್ ತಮ್ಮ ವೈಯುಕ್ತಿಕ ಬಳಕೆಗೆ ವಿತರಣೆ ಮಾಡಿರುವುದು ಕಂಡು ಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮಲ್ಪೆ ಪೋಲಿಸರು ತನಿಖೆ ನಡೆಸುತ್ತಿದ್ದಾರೆ.


Spread the love