ಡಿ.ಎ.ಆರ್ ಪೊಲೀಸ್ ಸಿಬಂದಿಗೆ ಕೊರೋನಾ ವದಂತಿ – ಎಸ್ಪಿ ಕಚೇರಿ ಸೀಲ್ ಡೌನ್ ಮಾಡಿಲ್ಲ- ವಿಷ್ಣುವರ್ಧನ್

Spread the love

ಡಿ.ಎ.ಆರ್ ಪೊಲೀಸ್ ಸಿಬಂದಿಗೆ ಕೊರೋನಾ ವದಂತಿ – ಎಸ್ಪಿ ಕಚೇರಿ ಸೀಲ್ ಡೌನ್ ಮಾಡಿಲ್ಲ- ವಿಷ್ಣುವರ್ಧನ್

ಉಡುಪಿ:  ಡಿಎ ಆರ್ ಪೊಲೀಸ್ ಸಿಬಂದಿಯೋರ್ವರಿಗೆ ಕೊರೋನಾ ಪಾಸಿಟಿವ್ ದೃಢಗೊಂಡಿರುವ ವದಂತಿ ಹಿನ್ನಲೆಯಲ್ಲಿ ಜಿಲ್ಲಾ ಎಸ್ಪಿ ಕಚೇರಿಯನ್ನು ಸೀಲ್ ಡೌನ್ ಮಾಡಲಾಗಿದೆ ಎಂಬ ವರದಿಗಳು ಸತ್ಯಕ್ಕೆ ದೂರವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ವಿಷ್ಣುವರ್ಧನ್ ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು ಡಿ ಎಆರ್ ಸಿಬಂದಿಗೆ ಕೊರೋನಾ ಪಾಸಿಟಿವ್  ವದಂತಿ ಹಿನ್ನಲೆಯ್ಲಲ್ಲಿ ಎಸ್ಪಿ ಕಚೇರಿಯನ್ನು ಮುಚ್ಚಲಾಗಿದೆ ಎಂಬ ವರದಿಗಳು ಬಂದಿದ್ದು, ಅಂತಹ ಯಾವುದೇ ರೀತಿಯ ಕಚೇರಿ ಮುಚ್ಚುವ ಕಾರ್ಯಗಳು ನಡೆದಿಲ್ಲ. ಎಸ್ಪಿ ಕಚೇರಿಗೆ ಪ್ರತಿನಿತ್ಯ ಹಲವಾರು ಮಂದಿ ಬರುವುದರಿಂದ ಮುಂಜಾಗ್ರತಾ ಕ್ರಮವಾಗಿ ಕಚೇರಿಯನ್ನು ಎರಡು ದಿನಗಳ ಹಿಂದೆ ಸ್ಯಾನಿಟೈಸ್ ಮಾಡಲಾಗಿದೆ. ಅಲ್ಲದೆ ಮತ್ತೋಮ್ಮೆ ಕೂಡ ಕಚೇರಿಯನ್ನು ಸ್ಯಾನಿಟೈಜ್ ಮಾಡಲಾಗುವುದು. ಈಗಾಗಲೇ ಹರಡಿರುವ ಸುದ್ದಿಗಳು ಸತ್ಯಕ್ಕೆ ದೂರವಾಗಿದ್ದು ಎಸ್ಪಿ ಕಚೇರಿ ಮೊದಲಿನಂತೆಯೇ ಕರ್ತವ್ಯ ನಿರ್ವಹಿಸಲಿದೆ ಎಂದು ಅವರು ತಿಳಿಸಿದ್ದಾರೆ.

ಡಿಎ ಆರ್ ಪೊಲೀಸ್ ಸಿಬಂದಿಯೋರ್ವರಿಗೆ ಕೊರೋನಾ ಪಾಸಿಟಿವ್ ದೃಢಗೊಂಡಿರುವ ವರದಿಗಾಗಿ ಇನ್ನೂ ಕೂಡ ಕಾಯಲಾಗುತ್ತಿದ್ದು ಪಾಸಿಟಿವ್ ವರದಿ ಬಂದರೂ ಕಚೇರಿ ಸೀಲ್ ಡೌನ್ ಮಾಡಲಾಗುವುದಿಲ್ಲ ಎಂದು ಅವರು ಸ್ಪಷ್ಪ ಪಡಿಸಿದ್ದಾರೆ.


Spread the love