ಡ್ರಗ್ಸ್ ಮುಕ್ತ ಮಂಗಳೂರು : ಪೊಲೀಸರಿಗೆ ಪೂರ್ಣಾಧಿಕಾರ ನೀಡಿ – ಡಾ.ವೈ.ಭರತ್ ಶೆಟ್ಟಿ

Spread the love

ಡ್ರಗ್ಸ್ ಮುಕ್ತ ಮಂಗಳೂರು : ಪೊಲೀಸರಿಗೆ ಪೂರ್ಣಾಧಿಕಾರ ನೀಡಿ – ಡಾ.ವೈ.ಭರತ್ ಶೆಟ್ಟಿ

ಸುರತ್ಕಲ್: ಡ್ರಗ್ ಮಾಫಿಯಾ ದ.ಕ ಜಿಲ್ಲೆಯ ಮಂಗಳೂರು ನಗರದ ಹೊರವಲಯ ಸೇರಿದಂತೆ ವಿವಿಧೆಡೆ ವಿದ್ಯಾರ್ಥಿಗಳನ್ನು ತಪ್ಪಿದಾರಿಗೆ ಎಳೆಯುವ ಕೆಲಸ ಮಾಡುತ್ತಿದೆ.ತತ್ ಕ್ಷಣ ಅಂಕುಶ ಹಾಕಲು ಪೊಲೀಸ್ ಇಲಾಖೆಗೆ ಪೂರ್ಣಾಧಿಕಾರ ನೀಡ ಬೇಕು ಎಂದು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ.ವೈ.ಭರತ್ ಶೆಟ್ಟಿ ಸದನದಲ್ಲಿ ಒತ್ತಾಯಿಸಿದರು.

ಸಭಾಪತಿಗಳ ಅನುಮತಿ ಮೇರೆಗೆ ಶುಕ್ರವಾರ ಡ್ರಗ್ಸ್ ಹಾವಳಿ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದರು.ಶಾಲಾ ಕಾಲೇಜು ಬಳಿ ಡ್ರಗ್ಸ್ ಮಾಫಿಯಾ ಹೆಚ್ಚುತ್ತಿದ್ದು ಅಂಕುಶ ಹಾಕಲು ಸಾಧ್ಯವಾಗಿಲ್ಲ. ವಿದ್ಯಾರ್ಥಿಗಳ ಬಳಿಗೆ ಡ್ರಗ್ಸ್ ತಂದು ಕೊಡುವ ವ್ಯವಸ್ಥಿತ ಜಾಲವೇ ಇದೆ. ಡ್ರಗ್ಸ್ ಸೇದುವ ವಿದ್ಯಾರ್ಥಿಗಳನ್ನು ಹಿಡಿದು ಕೇಸು ಹಾಕಲಾಗುತ್ತಿದೆ. ಡ್ರಗ್ಸ್ ಮಾರಾಟಗಾರರು ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ. ಖದೀಮರನ್ನು ಹಿಡಿದರೆ ಪೊಲೀಸರಿಗೆ ಬಿಡಲು ಒತ್ತಡ ಬರುತ್ತದೆ. ಪೊಲೀಸರಿಗೆ ಪೂರ್ಣಾಧಿಕಾರ ಕೊಟ್ಟು ಈ ಮಾಫಿಯಾವನ್ನು ಸಂಪೂರ್ಣ ತೊಡೆದು ಹಾಕದಿದ್ದರೆ ವಿದ್ಯಾರ್ಥಿ ಸಮುದಾಯದ ಭವಿಷ್ಯ ಹಾಳಾಗುತ್ತದೆ. ಈ ಬಗ್ಗೆ ಗಂಭೀರವಾಗಿ ಡ್ರಗ್ಸ್ ಮುಕ್ತ ಝೋನ್ ಗಳನ್ನಾಗಿ ಮಾಡಲು ಆದೇಶ ನೀಡಿ ಅಂತಹ ವಲಯ ನಿರ್ಮಿಸಿದರೆ ಪೊಲೀಸ್ ಅಧಿಕಾರಿಗಳನ್ನು ಗುರುತಿಸಿ ಗೌರವಿಸುವ ಕೆಲಸ ಆಗಬೇಕು ಎಂದರು.ಇದಕ್ಕೆ ಇತರ ಶಾಸಕರೂ ಧ್ವನಿಗೂಡಿಸಿದರು.


Spread the love