Spread the love
ತುಂಬೆ : ಡಿವೈಡರ್ಗೆ ಕಾರು ಢಿಕ್ಕಿ; ಯುವಕ ಮೃತ್ಯು
ಬಂಟ್ವಾಳ : ಕಾರೊಂದು ರಸ್ತೆ ಡಿವೈಡರ್ ಗೆ ಢಿಕ್ಕಿ ಹೊಡೆದು ಪಲ್ಟಿಯಾಗಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕೆಳಗಿನ ತುಂಬೆ ಎಂಬಲ್ಲಿ ಶನಿವಾರ ಮದ್ಯಾಹ್ನ ನಡೆದಿರುವ ಬಗ್ಗೆ ವರದಿಯಾಗಿದೆ.
ಮೃತರನ್ನು ಪಾವೂರು ನಿವಾಸಿ ನೌಫಲ್ ಎಂದು ಗುರುತಿಸಲಾಗಿದೆ. ಇವರು ಶನಿವಾರ ಬೆಳಿಗ್ಗೆ ಬಿ.ಸಿ.ರೋಡ್ ಕೈಕಂಬ ನಿವಾಸಿ ಉಸ್ಮಾನ್ ಎಂಬವರಿಗೆ ಸೇರಿದ ಸ್ವಿಫ್ಟ್ ಕಾರು ಖರೀದಿಸಿ ಅದನ್ನು ತೆಗೆದುಕೊಂಡು ಹೋಗುವ ವೇಳೆ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.
Spread the love