ತುಳು ನಾಟಕ ಪರ್ಬ ಉದ್ಘಾಟನೆ; ತುಳು ಭವನ ಪೂರ್ಣಗೊಳಿಸಲು ಅನುದಾನ – ಖಾದರ್

Spread the love

ತುಳು ನಾಟಕ ಪರ್ಬ ಉದ್ಘಾಟನೆ; ತುಳು ಭವನ ಪೂರ್ಣಗೊಳಿಸಲು ಅನುದಾನ – ಖಾದರ್

ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ಮಂಗಳೂರು ಮಹಾನಗರ ಪಾಲಿಕೆಯ ಸಹಭಾಗಿತ್ವದಲ್ಲಿ ಮಂಗಳೂರಿನ ಕುದ್ಮಲ್ ರಂಗರಾವ್ ಪುರಭವನದಲ್ಲಿ ಆಯೋಜಿಸಿರುವ ತುಳು ನಾಟಕ ಪರ್ಬವನ್ನು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಸಚಿವ ಯು.ಟಿ.ಖಾದರ್ ನಗರದಲ್ಲಿ ನಿರ್ಮಾಣ ವಾಗುತ್ತಿರುವ ತುಳು ಭವನದ ಕಾಮ ಗಾರಿ ಪೂರ್ಣಗೊಳಿಸಲು ಅಗತ್ಯವಿರುವ ಹೆಚ್ಚುವರಿ ಅನುದಾನವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಒದಗಿಸಲು ಕ್ರಮ ಕೈಗೊಳ್ಳಲಾಗುವುದು.

ತುಳು ಭವನ ಕಾಮಗಾರಿ ಪೂರ್ಣಗೊಳಿಸಲು ₹ 3.5 ಕೋಟಿ ಹೆಚ್ಚುವರಿ ಅನುದಾನದ ಬೇಡಿಕೆ ಬಂದಿದೆ. ಈ ಮೊತ್ತವನ್ನು ಒದಗಿಸಲು ಯಾವುದೇ ತೊಂದರೆ ಇಲ್ಲ. ಹೆಚ್ಚುವರಿ ಅನುದಾನ ಮಂಜೂರು ಮಾಡುವಂತೆ ಕನ್ನಡ ಮತ್ತು ಸಂಸ್ಕೃತಿ ಸಚಿವರಿಗೆ ಶೀಘ್ರದಲ್ಲಿ ಪ್ರಸ್ತಾವ ಸಲ್ಲಿಸಲಾಗುವುದು. ತ್ವರಿತವಾಗಿ ಮಂಜೂರಾತಿ ಆದೇಶ ಹೊರಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ ಮಾತನಾಡಿ, ‘ಕಳೆದ ವರ್ಷ ತುಳು ನಾಟಕೋತ್ಸವ ಆಯೋಜಿಸಲು ಮಂಗಳೂರು ಮಹಾ ನಗರ ಪಾಲಿಕೆ ₹ 5 ಲಕ್ಷ ನೆರವು ನೀಡಿತ್ತು ಈ ಬಾರಿಯೂ ಅಷ್ಟೇ ನೆರವು ನೀಡಿದೆ’ಎಂದರು.

ಚಿತ್ರಕಲಾ ಆರ್ಟ್ಸ್ ತಂಡದ ಹಿರಿಯ ಕಲಾವಿದ ಗಂಗಾಧರ ಶೆಟ್ಟಿ ಅಳಕೆ ಅವರನ್ನು ಸಮಾರಂಭದಲ್ಲಿ ಗೌರವಿಸಲಾಯಿತು.

ಶ್ರೀ ದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ. ಎ.ಸದಾನಂದ ಶೆಟ್ಟಿ, , ಎಂ.ಶಶಿಧರ ಹೆಗ್ಡೆ, , ರಾಧಾಕೃಷ್ಣ, ದಯಾನಂದ ಶೆಟ್ಟಿ, , ವಿಜಯಕುಮಾರ್ ಕೊಡಿಯಾಳ ಬೈಲ್, ರೋಹಿದಾಸ್ ಕದ್ರಿ, ಶ್ರೀಮತಿ ಜಯಶೀಲ, ಗಂಗಾಧರ ಶೆಟ್ಟಿ ಅಳಕೆ , ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ, ರಿಜಿಸ್ಟ್ರಾರ್ ಚಂದ್ರಹಾಸ ರೈ, ಅಕಾಡೆಮಿ ಸದಸ್ಯರಾದ ಶಿವಾನಂದ ಕರ್ಕೇರಾ, ತಾರಾನಾಥ್ ಗಟ್ಟಿ ಕಾಪಿಕಾಡ್, ಸುಧಾ ನಾಗೇಶ್, ಗೋಪಾಲ್ ಅಂಚನ್, ವಿದ್ಯಾಶ್ರೀ, ನರೇಶ್ ಸಸಿಹಿತ್ಲು ಉಪಸ್ಥಿತರಿದ್ದರು


Spread the love