ದಕ್ಷಿಣ ಭಾರತದಲ್ಲೇಮೊದಲು! ಆಫ್ರಿಕಾ ಮೂಲದ ಹಿಪಪಾಟಮಸ್ ದಂತಗಳ ವಶ, ಮೂವರ ಬಂಧನ

Spread the love

ದಕ್ಷಿಣ ಭಾರತದಲ್ಲೇಮೊದಲು! ಆಫ್ರಿಕಾ ಮೂಲದ ಹಿಪಪಾಟಮಸ್ ದಂತಗಳ ವಶ, ಮೂವರ ಬಂಧನ

ಶಿವಮೊಗ್ಗ: ಕಳೆದ ವಾರ ಕರ್ನಾಟಕದ ಶಿವಮೊಗ್ಗದಲ್ಲಿ ವಶಕ್ಕೆ ಪಡೆಯಲಾದ ಹಿಪಪಾಟಮಸ್ ದಂತಗಳ ಮೂಲವನ್ನು ಬಿಚ್ಚಿಡಲು ಎರಡು ರಾಜ್ಯ ಅರಣ್ಯ ಇಲಾಖೆಗಳು ಮತ್ತು ಪೊಲೀಸರ ಜಂಟಿ ಪ್ರಯತ್ನ ಮುಂದುವರಿದಿದೆ. ಈ ಸರಕುಗಳ ಕಳ್ಳಸಾಗಣೆ ವ್ಯಾಪ್ತಿ ಏಷ್ಯಾಖಂಡಕ್ಕೂ ಆಚಿನದ್ದಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಪ್ರಕರಣ ಸಂಬಂಧ ಕರ್ನಾಟಕ ಹಾಗೂ ಗೋವಾದಲ್ಲಿ ಐವರನ್ನು ಬಂಧಿಸಲಾಗಿದೆ.

“ಕಳೆದ ಸೋಮವಾರ, ನಾವು ಹಿಪಪಾಟಮಸ್ ದಂತವನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಮೂವರನ್ನು ಬಂಧಿಸಿದ್ದೇವೆ. ಅವರು ಒದಗಿಸಿದ ಸಾಕ್ಷಿಗಳೊಂದಿಗೆ ನಾವು ಕೆಲವು ಸುಳಿವುಗಳನ್ನು ಪಡೆದುಕೊಂಡಿದ್ದೇವೆ ಮತ್ತು ಸರಬರಾಜುದಾರರು ಗೋವಾದಿಂದ ಬಂದವರು ಎಂದು ತಿಳಿದುಬಂದಿದೆ” ಎಂದು ಶಿವಮೊಗ್ಗ ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಆರ್. ರವಿಶಂಕರ್ ಐಎಎನ್‌ಎಸ್‌ಗೆ ತಿಳಿಸಿದರು.

ಮೊಹಮ್ಮದ್ ಡ್ಯಾನಿಶ್, ಮುಜಾಫರ್ ಹಸನ್ ಮತ್ತು ಝಾಕಿರ್ ಖಾನ್ ಅವರನ್ನು ಶಿವಮೊಗ್ಗದ ಚಂದ್ರಗುತ್ತಿಯಿಂದ 12 ಕೆಜಿ ವರೆಗಿನ ಹಿಪಪಾಟಮಸ್ ದಂತದ ಮಾರಾಟ ಯತ್ನ ಪ್ರಕರಣದಲ್ಲಿ ಬಂಧಿಸಿಅಲಾಗಿದೆ.

ಇಷ್ಟಕ್ಕೂ ಹಿಪಪಾಟಮಸ್ ಗಳು ಬಾರತದ ಕಾಡಿನಲ್ಲಿ ಕಾಣಸಿಕ್ಕುವುದಿಲ್ಲ. ಕೆಲ ಪ್ರಾಣಿಸಂಗ್ರಹಾಲಯಗಳಲ್ಲಿ ಮಾತ್ರ ಇದೆ. ಹಾಗಾಗಿ ಕರ್ನಾಟಕ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಈ ಪ್ರಕರಣ ಅಚ್ಚರಿ ತಂದಿದೆ. ಆದರೆ ತನಿಖೆಯ ಬೆಳವಣಿಗೆಯ ನಂತರ ಮೂವರು ಆರೋಪಿಗಳು ಫ್ರಿಕನ್ ಪ್ರಾಣಿಗಳ ದಂತವನ್ನು ಸಂಗ್ರಹಿಸಿದ ಮೂಲವನ್ನು ಪತ್ತೆ ಮಾಡಿದ್ದಾರೆ. ತನಿಖೆಗೆ ಅಂತರರಾಜ್ಯ ಸಹಕಾರ ಅಗತ್ಯವಿರುವುದರಿಂದ, ಕರ್ನಾಟಕ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ತಮ್ಮ ಗೋವಾದ ಸಹವರ್ತಿಗಳೊಂದಿಗೆ ಸಂಪರ್ಕ ಸಾಧಿಸಿದ್ದಾರೆ. “ನಾವು ನಮ್ಮ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿದ್ದೇವೆ. ಉನ್ನತ ಮಟ್ಟದಲ್ಲಿ, ಅವರು ಸಂಪೂರ್ಣ ಸಹಕಾರಕ್ಕಾಗಿ ಚರ್ಚಿಸಿದ್ದಾರೆ. ಒಂದು ತಂಡವು ಗೋವಾಕ್ಕೆ ತೆರಳಿದೆ”ವಿಶಂಕರ್ ಹೇಳಿದರು.

ಮೂವರನ್ನು ಬಂಧಿಸಿ, ಮುಟ್ಟುಗೋಲು ಹಾಕಿಕೊಂಡ ನಂತರ ಮತ್ತು ಅರಣ್ಯ ಅಧಿಕಾರಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ನಂತರವೇ ದಂತ ಹಿಪಪಾಟಮಸ್ ಪ್ರಾಣಿಯದೆನ್ನುವುದು ಪತ್ತೆಯಾಗಿದೆ.

ಈ ನಡುವೆ ಗೋವಾಗೆ ತೆರಳಿದ್ದ ತಂಡ ಅಲ್ಲಿನ 80 ವರ್ಷದ ಮಹಿಳೆಯೊಬ್ಬರಿಂದ ದಂತವನ್ನು ಕಳವು ಮಾಡಿರುವುದನ್ನು ಕಂಡುಕೊಂಡಿದೆ. ವಿಶಾಲ್ ಎಂಬ ಆಕೆಯ ಸಹಾಯಕ ಈ ಕೃತ್ಯ ಎಸಗಿದ್ದ. ತನ್ನ ಸೋದರಿಯರಿಬ್ಬರೀ ತೀರಿಕೊಂಡ ನಂತರ ವಿಶಾಲ್ ಸಹಾಯ ಪಡೆಯುತ್ತಿದ್ದ ವೃದ್ದೆ ಹಾಗೆ ಸಹಾಯ ಪಡೆದಾಗಲೆಲ್ಲಾ ಸುಮಾರು 500-1,000 ರೂ.ಗಳನ್ನು ನೀಡುತ್ತಿದ್ದರು. ಡಿಸೋಜಾ ಎಂಬ ವೃದ್ದೆ ಅವರಾಗಿದ್ದು ಅವರ ಮೊದಲ ಹೆಸರು ರವಿಶಂಕರ್ ಅವರಿಗೆ ನೆನಪಿಲ್ಲ. ಇತ್ತೀಚೆಗೆ ಆಕೆ ವಿಶಾಲ್ ಗೆ ಅವರ ಸ್ಟೋರ್ ರೂಂ ಸ್ವಚ್ಚಗೊಳಿಸಲು ಕೇಳಿದ್ದರು. “ವಿಶಾಲ್ ಅದನ್ನು ಸ್ವಚ್ಚ ಮಾಡುವಾಗ ಅವನು ಹಿಪೋ ದಂತದ ಮೇಲೆ ಎಡವಿ ಬಿದ್ದಿದ್ದಾನೆ, ಬಳಿಕ ಅದನ್ನು ನಿಗೂಢವಾಗಿ ಕದ್ದಿದ್ದಾನೆ. ವಿಶಾಲ್ ನಂತರ ಮೂವರು ಕರ್ನಾಟಕ ಯುವಕರೊಂದಿಗೆ ದಂತವನ್ನು ಮಾರಾಟ ಮಾಡಿ ಅವರಿಗೆ ಶೇಕಡಾ 15 ರಷ್ಟು ಕಮಿಷನ್ ಪಾವತಿಸಲು ಒಪ್ಪಂದ ಮಾಡಿಕೊಂಡರು, ಅವರೆಲ್ಲರೂ ಅದನ್ನು ಆನೆಯ ದಂತವೆಂದೇ ಭಾವಿಸಿದ್ದರು.

ಡಿ ಸೋಜಾ ಅವರ ತಂದೆ 50 ವರ್ಷಗಳ ಹಿಂದೆ ಟಾಂಜಾನಿಯಾದಿಂದ ಹಿಂದಿರುಗಿದ ವೇಳೆ ಆಫ್ರಿಕನ್ ದೇಶದಿಂದ ಆ ದಂತಗಳನ್ನು ತಂದಿದ್ದರು. ಇಷ್ಟೂ ವರ್ಷಗಳಲ್ಲಿ ದಂತವು ಡಿಸೋಜಾ ಮನೆಯಲ್ಲಿಯೇ ಇತ್ತು.

ದಂತವು 60 ವರ್ಷಗಳ ಹಿಂದೆ ಟಾಂಜಾನಿಯಾದಿಂದ ಬಂದಿದ್ದು, ಅದರ ಬಗ್ಗೆ ಇತರ ವಿವರಗಳು ತಿಳಿದಿಲ್ಲ ಎಂದು ರವಿಶಂಕರ್ ಹೇಳಿದ್ದಾರೆ. “ಹೆಚ್ಚಿನ ತನಿಖೆ ನಡೆಯುತ್ತಿದೆ … ಅದರ ವಯಸ್ಸು ಮತ್ತು ಇತರ ವಿವರಗಳನ್ನು ನಿರ್ಧರಿಸಲು ವಸ್ತುಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ” ಎಂದು ಅವರು ಹೇಳಿದರು.

ಡಿ ಸೋಜಾ ಅವರ ತಂದೆ ಅಪರಾಧಿಯೆ ಎಂಬ ಪ್ರಶ್ನೆಗೆ ಗೋವಾ ಇನ್ನೂ ಪೋರ್ಚುಗೀಸ್ ವಸಾಹತು ಪ್ರದೇಶವಾಗಿದ್ದಾಗ ಮತ್ತು ಭಾರತದ ಭಾಗವಾಗಿರದಿದ್ದಾಗ ಡಿಸೋಜಾ ಅವರ ತಂದೆ ದಂತವನ್ನು ತರಬಹುದಿತ್ತು ಎಂದು ಅರಣ್ಯ ಅಧಿಕಾರಿ ಹೇಳಿದರು. ರವಿಶಂಕರ್ ಅವರ ಪ್ರಕಾರ ಹಿಪೋದಂತಗಳನ್ನು ಆನೆ ದಂತವೆಂದು ಭಾವಿಸಲಾಗಿದೆ. ಇದು ದಕ್ಷಿಣ ಭಾರತದಲ್ಲೇ ಇಂತಹಾ ಮೊದಲ ಪ್ರಕರಣವಾಗಿರುವ ಸಾಧ್ಯತೆ ಇದೆ.


Spread the love