ದಕ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟಕ್ಕೆ 6.9 ಕೋಟಿ ರೂಪಾಯಿ ಲಾಭ- ರವಿರಾಜ್ ಹೆಗ್ಡೆ

Spread the love

ದಕ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟಕ್ಕೆ 6.9 ಕೋಟಿ ರೂಪಾಯಿ ಲಾಭ- ರವಿರಾಜ್ ಹೆಗ್ಡೆ

ಮಂಗಳೂರು: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು 2018-19 ನೇ ಸಾಲಿನಲ್ಲಿ 815.66 ಕೋಟಿ ರೂಪಾಯಿ ವ್ಯವಹಾರದೊಂದಿಗೆ ಒಟ್ಟು 6.9 ಕೋಟಿ ರೂಪಾಯಿ ಲಾಭ ಗಳಿಸಿದೆ ಎಂದು ಹಾಲು ಒಕ್ಕೂಟದ ಅಧ್ಯಕ್ಷರಾದ ರವಿರಾಜ್ ಹೆಗ್ಡೆ ಹೇಳಿದರು.

ಅವರು ಗುರುವಾರ ಕುಲಶೇಕರದಲ್ಲಿರುವ ಒಕ್ಕೂಟದ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ 198 ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಗಳ ಸಹಿತ 722 ಹಾಲು ಉತ್ಪಾದಕರ ಸಹಕಾರಿ ಸಂಘಗಳ ಸದಸ್ಯತ್ವವನ್ನು ಹೊಂದಿರುವ ಒಕ್ಕೂಟವು ಕಳೆದ ಸಾಲಿನಲ್ಲಿ 117 ಸಾಂದ್ರ ಶೀತಲೀಕರಣ ಘಟಕ ಮತ್ತು 2 ಶೀಥಲೀಕರಣ ಕೇಂದ್ರಗಳ ಮೂಲಕ ಪ್ರತಿ ದಿನ 4.37 ಲಕ್ಷ ಲೀಟರ್ ಹಾಲನ್ನು ಸಂಗ್ರಹಿಸುತ್ತದೆ. ಪ್ರತಿ ದಿನ 3,39,406 ಲೀಟರ್ ಹಾಲು ಮತ್ತು 56,776 ಕೆಜಿ ಮೊಸರು ಮಾರಾಟವಾಗುತ್ತದೆ. ಸಂಗ್ರಹಿಸಿದ ಹಾಲಿನಲ್ಲಿ ಶೇ 94ರಷ್ಟು ಹಾಲನ್ನು ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ ರಾಜ್ಯದ 14 ಒಕ್ಕೂಟಗಳ ಪೈಕಿ ದಕ ಜಿಲ್ಲಾ ಹಾಲು ಒಕ್ಕೂಟವು ಅಗ್ರ ಸ್ಥಾನದಲ್ಲಿದೆ ಎಂದರು.

ಕಳೆದ ಸಾಲಿನಲ್ಲಿ ಖರೀದಿಸಿದ ಪ್ರತಿ ಲೀಟರ್ ಹಾಲಿಗೆ 31.53 ಮತ್ತು ಹೈನುಗಾರಿಕೆ ಅಭಿವೃದ್ಧಿಗಾಗಿ ಸದಸ್ಯರಿಗೆ ನೀಡುವ ವಿವಿಧ ಸವಲತ್ತುಗಳಿಗೆ ಪ್ರತಿ ಲೀಟರ್ ಗೆ 0.57 ಪೈಸೆಯನ್ನು ಅನುದಾನ ರೂಪದಲ್ಲಿ ಪಾವತಿಸಲಾಗುತ್ತಿದೆ. ಒಕ್ಕೂಟವು ಸದಸ್ಯರು ಉತ್ಪಾದಿಸಿದ ಪ್ರತಿ ಲೀಟರ್ ಹಾಲಿಗೆ 32.20 ರೂ ಪವಾತಿಸಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಕಾಯ್ದುಕೊಂಡಿದೆ ಎಂದರು.

ಕಳೆದ ಸಾಲಿನಲ್ಲಿ 31.77 ಲಕ್ಷ ಲೀಟರ್ ತೃಪ್ತಿ (ಫ್ಲೆಕ್ಸಿ ಪ್ಯಾಕ್) ಹಾಲನ್ನು ಉತ್ಪಾದಿಸಿ ಕರ್ನಾಟಕ, ಕೇರಳ, ಮಹಾರಾಷ್ಟ್ರ ಪ್ರದೇಶಗಳಲ್ಲಿ ಮಾರಾಟ ಮಾಡಲಾಗಿದೆ. ಮಂಡ್ಯ ಒಕ್ಕೂಟದ ಹಾಲನ್ನು ಕರ್ನಾಟಕ ಹಾಲು ಮಹಾ ಮಂಡಳಿಯ ನಿರ್ದೇಶನದಂತೆ 9.38 ಲಕ್ಷ ಲೀಟರ್ ಹಾಲನ್ನು ವಿಜಯ ವಜ್ರ ಬ್ರಾಂಡಿನಲ್ಲಿ ಕೋ ಪ್ಯಾಕ್ ಮಾಡಿ ಆಂದ್ರಪ್ರದೇಶಕ್ಕೆ ಸರಬರಾಜು ಮಾಡಲಾಗಿದೆ ಎಂದರು.

ಉಪ್ಪೂರಿನಲ್ಲಿ 8739.23 ಲಕ್ಷ ರೂ ವೆಚ್ಚದಲ್ಲಿ ನೂತನ ಡೇರಿಯನ್ನು ನಿಗದಿತ ಅವಧಿಯೊಳಗೆ ನಿರ್ಮಿಸಲಾಗಿದೆ. ಪಶುವೈದ್ಯಕೀಯ ಸೇವೆ ಬಲಪಡಿಸಲು ಬೈಂದೂರು, ಕಡಬ, ಮಂಗಳೂರಿನಲ್ಲಿ ಮೂರು ಕಚೇರಿಗಳನ್ನು ತೆರೆಯಲಾಗಿದೆ. 22 ಬಿಎಮ್ ಸಿ ಸಂಘಗಳನ್ನು ರಚಿಸಲಾಗಿದೆ ಎಂದರು.

1.62 ಕೋಟಿ ರೂ ವೆಚ್ಚದಲ್ಲಿ 35 ಸಾವಿರ ಬಾಟಲ್ ಸಾಮರ್ಥ್ಯದ ಸಿಪಿಪಿ ಬಾಟಲ್ ಸುವಾಸಿತ ಹಾಲಿನ ಘಟಕವನ್ನು ಮಂಗಳೂರಿನಲ್ಲಿ ಸ್ಥಾಪಿಸಿದೆ. 688 ಡೀಲರ್ ಗಳಿಗೆ 13.40 ಲಕ್ಷ ರೂ ನಗದು ಬಹುಮಾನ ನೀಡಿ ಪ್ರೋತ್ಸಾಹಿಸಲಾಗಿದೆ. ಒಕ್ಕೂಟದ ರೈತರ ಕಲ್ಯಾಣ ಟ್ರಸ್ಟ್ ಮೂಲಕ ಹಾಲು ಉತ್ಪಾದಕರಿಗೆ ಪ್ರಕೃತಿ ವಿಕೋಪ ಅಫಘಾತ, ಗಂಭೀರ ಕಾಯಿಲೆಯ ವೇಳೆ ಪರಿಹಾರ ಧನವಾಗಿ 102.44 ಲಕ್ಷ ಮತ್ತು ಉತ್ಪಾದಕರ ಪ್ರತಿಭಾವಂತ ವಿದ್ಯಾರ್ಥಿಗಳು ಮತ್ತು ಕ್ರೀಡಾ ಪಟುಗಳಿಗೆ ಪ್ರೋತ್ಸಾಹ ಧನವಾಗಿ 4.89 ಲಕ್ಷ ರೂ ನೀಡಲಾಗಿದೆ ಎಂದರು.

2019-20 ನೇ ಸಾಲಿನಲ್ಲಿ 911 ಕೋಟಿ ರೂ ವಹಿವಾಟಿನ ಗುರಿ ಹಾಕಲಾಗಿದ್ದು, ಪುತ್ತೂರಿನಲ್ಲಿ 12 ಕೋಟಿ ರೂ ವೆಚ್ಚದಲ್ಲಿ ನೂತನ ಶೀಥಲೀಕರಣ ಘಟಕ ಸ್ಥಾಪಿಸಲು ಮತ್ತು 4 ಕೋಟಿರೂ ವೆಚ್ಚದಲ್ಲಿ ಶಿಬಿರ ಕಚೇರಿಯನ್ನು ನಿರ್ಮಿಸಲು ಯೋಜಿಸಲಾಗಿದೆ. ಮಂಗಳೂರು ಡೇರಿ ಸ್ಥಾವರದಲ್ಲಿ 2.50 ಕೋಟಿ ರೂ ವೆಚ್ಚದಲ್ಲಿ ಅಟೋಮೇಶನ್ ಮಾಡಲು ಉದ್ದೇಶೀಸಲಾಗಿದ್ದು, ಸಹಕಾರಿ ಸಪ್ತಾಹ ಕಾರ್ಯಕ್ರಮದಲ್ಲಿ 10 ರೂ ಮೌಲ್ಯದ ಪೇಟ, ಕ್ಯಾಶು ಬರ್ಫಿಯನ್ನು ಬಿಡಿ ಪ್ಯಾಕೇಟ ನಲ್ಲಿ ಮತ್ತು ಪನ್ನೀರನ್ನು 100 ಮತ್ತು 500 ಗ್ರಾಂಗಳಲ್ಲಿ ಬಿಡುಗಡೆ ಮಾಡಲು ಉದ್ದೇಶಿಸಲಾಗಿದೆ ಎಂದರು.


Spread the love