ದುಬಾಯಿಯಲ್ಲಿ  “ಗ್ಲೊಬಲ್ ಹ್ಯೂಮೆನಿಟಿ ಅವಾರ್ಡ್ – 2017” ಪ್ರಶಸ್ತಿ ಪ್ರಧಾನ

Spread the love

ದುಬಾಯಿಯಲ್ಲಿ  “ಗ್ಲೊಬಲ್ ಹ್ಯೂಮೆನಿಟಿ ಅವಾರ್ಡ್ – 2017” ಪ್ರಶಸ್ತಿ ಪ್ರಧಾನ

ವಿಶ್ವ ಸಂಸ್ಥೆ ಆಶ್ರಯದಲ್ಲಿ ಪ್ರತಿವರ್ಷ ಡಿಸೆಂಬರ್ 10 ರಂದು “ವಲ್ರ್ಡ್ ಹ್ಯೊಮನ್ ರೈಟ್ಸ್ ಡೇ” 1948 ರಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಈ ವಿಶೇಶ ದಿನದ ಪ್ರಯುಕ್ತ ಭಾರತದಲ್ಲಿ ಸ್ಥಾಪನೆಯಾಗಿರುವ ಹ್ಯೂಮನ್ ರೈಟ್ಸ್ ಅಮ್ಡ್ ಕರಪ್ಶನ್ ಇರಾಡಿಕೇಶನ್ ಫೋರಂ, ದೆಹಲಿ ಇವರ ಆಶ್ರಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕರ್ನಾಟಕ ಶಾಖೆ – ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ನಿರ್ಮೂಲನ ಸಂಸ್ಥೆ ರಾಜ್ಯ ಮಟ್ಟ ಮತ್ತು ರಾಷ್ಟ್ರ ಮಟ್ಟದಲ್ಲಿ ಅರ್ಹ ವ್ಯಕ್ತಿಗಳನ್ನು ಗುರುತ್ತಿಸಿ “ಹ್ಯೂಮೆನಿಟಿ ಅವಾರ್ಡ್” ಪ್ರಶಸ್ತಿ ನೀಡುತ್ತಾ ಬರುತ್ತಿದೆ. ಇದೀಗ ಪ್ರಥಮ ಬಾರಿಗೆ ವಿದೇಶದಲ್ಲಿ ಅರ್ಹ ವ್ಯಕ್ತಿಗಳನ್ನು ಗುರುತ್ತಿಸಿ ಗಲ್ಫ್ ನಾಡಿನಲ್ಲಿ “ಗ್ಲೊಬಲ್ ಹ್ಯೂಮೆನಿಟಿ ಅವಾರ್ಡ್ – 2017” ಪ್ರಶಸ್ತಿ ಪ್ರಧಾನ ಸಮಾರಂಭ ಆಯೋಜಿಸಿದ್ದರು.

ದುಬಾಯಿ ಒಮೆಗಾ ಹೋಟೆಲ್ ಸಭಾಂಗಣದಲ್ಲಿ 2017 ಡಿಸೆಂಬರ್ 9ನೇ ತಾರೀಕು ಶನಿವಾರ ರಾತಿ 8.00 ಗಂಟೆಗೆನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ, ಮಾನವ ಹಕ್ಕುಗಳು ಹಾಗೂ ಭ್ರಷ್ಟಚಾರ ನಿರ್ಮೂಲನ ಸಂಸ್ಥೆ ಅಧ್ಯಕ್ಷರಾದ ಡಾ. ಮೋಹನ್ ರಾವ್ ನಾಲ್ವಡೆ ಮತ್ತು ಉಪಾಧ್ಯಕ್ಷರಾದ  ಶ್ತ್ರೀ ಸಿ. ಎಸ್. ಬೋಪಯ್ಯನವರು ಮತ್ತು ಇನ್ನಿತರ ಪದಾಧಿಕಾರಿಗಳು ಒಟ್ಟು ಸೇರಿ “ಗ್ಲೊಬಲ್ ಹ್ಯೂಮೆನಿಟಿ ಅವಾರ್ಡ್ – 2017” (ವಿಶ್ವ ಮಾನವೀಯತೆ ಪ್ರಶಸ್ತಿ 2017) ಯು.ಎ.ಇ.ಯಲ್ಲಿ ವಿವಿಧ್ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರಿಗೆ ಪ್ರಶಸ್ತಿ ಪ್ರಧಾನ ಮಾಡಿದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಮಿನಿಸ್ಟ್ರಿ ಆಫ್ ಎಕ್ಸ್ಟರ್ನಲ್ ಅಫೈರ್ಸ್ ಗವರ್ನಮೆಂಟ್ ಆಫ್ ಇಂಡಿಯಾ ಇದರ ಸದಸ್ಯರಾಗಿರುವ ಶ್ರೀ ಎಸ್. ಎಂ. ಸುರೇಶ್ ರವರು ಸರ್ವರನ್ನು ಸ್ವಾಗತಿಸಿದರು. ಶ್ರೀಮತಿ ಜ್ಯೋತಿಲಕ್ಷ್ಮೀ ಬೆಳಗೂರ್ ರವರಿಂದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು.

ಸೌದಿ ಅರೆಬಿಯಾ ಎನ್.ಅರ್.ಐ ಜೋನ್ ಪದಾಧಿಕಾರಿ ಶ್ರೀ ಮಹ್ಮದ್ ಫಾಯಿಮ್ ಪ್ರಾಸ್ತವಿಕ ಭಾಷಣ, ಉಪಾಧ್ಯಕ್ಷರಾದ ಶ್ರೀ ಬೋಪಯ್ಯ ಚೋವಂಡ ರವರಿಂದ ಸಂಸ್ಥೆಯ ಬಗ್ಗೆ ಪೂರ್ಣ ಮಾಹಿತಿ ಹಾಗೂ ಅಧ್ಯಕ್ಷರಾದ ಶ್ರೀ ಮೋಹನ್ ರಾವ್ ನಲವಡೆ ರವರು ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ನಿರ್ಮೂಲನೆಯ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಿದರು. ಶ್ರೀ ಮೋಹನ್ ಹಾಗೂ ಶ್ರೀ ರುದ್ರಯ್ಯ ಹಿರೆಮಠ್ ಯು.ಎ.ಇ.ಯ ಬಗ್ಗೆ ಮಾಹಿತಿಯನ್ನು ನೀಡಿದರು.

“ಗ್ಲೊಬಲ್ ಹ್ಯೂಮೆನಿಟಿ ಅವಾರ್ಡ್ – 2017” ಪ್ರಶಸ್ತಿ ಪುರಸ್ಕೃತರು

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ “ಗ್ಲೊಬಲ್ ಹ್ಯೂಮೆನಿಟಿ ಅವಾರ್ಡ್ – 2017” ಪ್ರಶಸ್ತಿ ಪ್ರಧಾನಿಸಲಾಯಿತು. ಪ್ರಶಸ್ತಿ ಪುರಸ್ಕೃರಲ್ಲಿ ಶ್ರೀಯುತರುಗಳಾದ ಮೋಹನ್ ನರಸಿಂಹ ಮೂರ್ತಿ, ಬಿ. ಕೆ. ಗಣೇಶ್ ರೈ, ರವೀಶ್ ಗೌಡ, ಮಂಜುನಾಥ್ ಎಂ. ವೀರೇಂದ್ರ ಬಾಬು, ಹರೀಶ್ ಶೇರಿಗಾರ್, ಹೆಚ್. ಹೆಚ್. ಬೆಳಗೂರ್, ದೀಪಕ್ ಸೋಮಶೇಖರ್, ನೋಯಲ್ ಡಿ ಅಲ್ಮೆಡಾ, ರುದ್ರಯ್ಯ ಎನ್. ಹಿರೆಮಠ್, ಅರುಣಾ ಮುತಗದ್ದೂರ್, ಮಹ್ಮದ್ ಫಾಯಿಮ್ ಪ್ರಶಸ್ತಿಯನ್ನು ಸ್ವೀಕರಿಸಿದರು.

ಶಶಿಧರ್ ರತ್ನಾಕರ್ ಸಚಿ ಈವೆಂಟ್ಸ್ ಅಂಡ್ ಕ್ರಿಯೇಶನ್ಸ್ ಬೆಂಗಳೂರು ಕಾರ್ಯಕ್ರಮವನ್ನು ಆಯೋಜಿಸಿದ್ದರು.

ಭೋಜನ ಕೂಟದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

 


Spread the love