ದ.ಕ. ಜಿ.ಪ. ಶಾಲೆ ಕಾವೂರು 165 ಶಾಲಾ ಮಕ್ಕಳಿಗೆ ಉಚಿತ ಕೊಡೆಗಳ ವಿತರಣೆ

Spread the love

ಮಂಗಳೂರು: ರೋಟರಿ ಸಂಸ್ಥೆಯ ಅಂತರಾಷ್ಟ್ರೀಯ ಧ್ಯೇಯ ವಾಕ್ಯವಾದ “ವಿಶ್ವಕ್ಕೆ ಒಂದು ವರವಾಗಿ” ವನ್ನು ಮತ್ತು ತತ್ವ ಸಿದ್ಧಾಂತ ವನ್ನು ಅನುಸರಿಸಿ ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಮತ್ತು ಯುವಕರು ಸ್ಥಾಪಿಸಿದ ಸೇವಾ ಸಂಸ್ಥೆ “ಶೀಲ್ಡ್ ಪ್ರತಿಷ್ಠಾನ” ಜಂಟಿಯಾಗಿ ಒಂದು ಸಮಾಜ ಸೇವಾ ಕಾರ್ಯಕ್ರಮವನ್ನು ದ.ಕ.ಜಿ.ಪ. ಶಾಲೆ ಕಾವೂರು ಪ್ರಾಂಗಣದಲ್ಲಿ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಆಯೋಜಿಸಿದರು.

1-kavoor 2-kavoor-001 3-kavoor-002 4-kavoor-003

ಕಾವೂರು ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ, ಶ್ರೀ. ಬಿ. ಲಕ್ಷ್ಮಣ್ ಶೆಟ್ಟಿ ಯವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಧ್ವಜಾರೋಹಣವನ್ನು ನೆರವೇರಿಸಿ, ಗೌರವಿಸಿ ಆಗಸ್ಟ್ 15 ದಿನಾಂಕದ ಮಹತ್ವವನ್ನು ವಿವರಿಸಿ ದೇಶಾಭಿಮಾನಿಗಳಾದ ಹುತಾತ್ಮರನ್ನು ಸ್ಮರಿಸಿ ಅವರು ದೇಶಕ್ಕಾಗಿ ಸಲ್ಲಿಸಿದ ನಿಸ್ವಾರ್ಥ ಸೇವೆ, ಸ್ವಾತಂತ್ರ್ಯ ಕ್ಕೋಸ್ಕರ ಮಾಡಿದ ತ್ಯಾಗ, ಬಲಿದಾನವನ್ನು ಕೊಂಡಾಡಿದರು.

ರೋಟರಿ ಕ್ಲಬ್ ಆಪ್ ಮಂಗಳೂರು ಸೆಂಟ್ರಲ್‍ಅದ್ಯಕ್ಷ ಇಲಾಯಸ್ ಸಾಂಟಿಸ್, ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಭಾರತ ದೇಶವು ಶ್ರೀಮಂತವಾಗಿದ್ದು, ಮಾನವ ಸಂಪನ್ಮೂಲ ಸಂಪತ್ತಿನಿಂದ ತುಂಬಿದ್ದು, ವಿದ್ಯಾರ್ಥಿಗಳು ಉತ್ತಮ ಗುಣಮಟ್ಟದ ಶಿಕ್ಷಣ ಪಡೆದು ದೇಶ ಪ್ರೇಮ ಬೆಳೆಸಿ, ಉತ್ತಮ ಪ್ರಜೆಗಳಾಗಿ ಬಾಳಬೇಕೆಂದು ಸಲಹೆ ನೀಡಿದರು.

ಮಾಜಿ ರೋಟರಿ ಜಿಲ್ಲಾ ಗವರ್ನರ್ ಡಾ| ಬಿ. ದೇವದಾಸ್ ರೈ, ಉಪ ಪೋಲಿಸ್ ಅದಿಕ್ಷಕರು, ಪೋಲಿಸ್‍ಲೋಕಾಯುಕ್ತ ಇಲಾಖೆ ಶ್ರೀ. ವಿಠಲ್‍ದಾಸ್ ಪೈ, ಯವರು ಗೌರವ ಅತಿಥಿಯಾಗಿ ಪಾಲ್ಗೊಂಡಿದ್ದರು.

ಬಳಿಕ ಸ್ವಾತಂತ್ರ ದಿನಚಾರಣೆಯ ಅಂಗವಾಗಿ 165 ಶಾಲಾ ಮಕ್ಕಳಿಗೆ ಉಚಿತ ಕೊಡೆಗಳನ್ನು ವಿತರಿಸಿ ಸಿಹಿ ತಿಂಡಿ, ಬಿಸ್ಕಿಟ್, ಚಾಕೋಲೇಟ್ ವಿತರಿಸಿದರು. ಮೆಡಿಮಿಕ್ಸ ಸಂಸ್ಥೆ ಸಾಬೂನುಗಳನ್ನು ಪ್ರಾಯೋಜಿಸಿತ್ತು.

ರೋಟರಿ ಸಾರ್ವಜನಿಕ ಸಂಪರ್ಕ ಆಧಿಕಾರಿ ಎಂ ವಿ ಮಲ್ಲ್ಯ ರವರು ಕಾರ್ಯಕ್ರಮವನ್ನು ಸಂಘಟಿಸಿದರು.

ವೇದಿಕೆಯಲ್ಲಿ ಶೀಲ್ಡ್ ಪ್ರತಿಷ್ಠಾನದ ಅಧ್ಯಕ್ಷ ಶ್ರೀ. ಧರ್ಮಿಥ್ ರೈ ಕಾರ್ಯದರ್ಶಿ ಶ್ರೀ. ವರದನ್ ಪೈ ಮತ್ತು ಶಾಲಾ ಪೋಷಕ ರಕ್ಷಕ ಸಂಘದ ಅಧ್ಯಕ್ಷ ಉಮೇಶ್, ಲಯನ್ಸ್ ಕ್ಲಬ್ ಅಧ್ಯಕ್ಷ ಸಿ ಆರ್ ಸಿಂಹ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾದ್ಯಾಯ ಗಂಗಾಧರ್ ಸ್ವಾಗತಿಸಿದರು, ಶಿಕ್ಷಕಿ ರವಿಕಲಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.


Spread the love