ಧನಂಜಯ ಸರ್ಜಿ ನನ್ನ ಮನೆಗೆ ಬಂದಿರುವ ಬಗ್ಗೆ ನನಗೆ ಮಾಹಿತಿಯಿಲ್ಲ – ರಘುಪತಿ ಭಟ್

Spread the love

ಧನಂಜಯ ಸರ್ಜಿ ನನ್ನ ಮನೆಗೆ ಬಂದಿರುವ ಬಗ್ಗೆ ನನಗೆ ಮಾಹಿತಿಯಿಲ್ಲ – ರಘುಪತಿ ಭಟ್

ಉಡುಪಿ: ನೈಋತ್ಯ ಪದವೀಧರರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾll ಧನಂಜಯ ಸರ್ಜಿ ಅವರು “ನನ್ನ ಮನೆಗೆ ಬಂದಿದ್ದರು. ನಾನು ಮನೆಯ ಗೇಟಿನಲ್ಲಿ ಕಾಯಿಸಿ ವಾಪಾಸು ಕಳಿಸಿದೆ” ಎಂದು ಮಾಧ್ಯಮದಲ್ಲಿ ಹೇಳಿಕೆ ನೀಡಿದ್ದಾರೆ. ಅವರ ಈ ರೀತಿಯ ಸುಳ್ಳು ಹೇಳಿಕೆ ಅವರ ವ್ಯಕ್ತಿತ್ವವನ್ನು ತೋರಿಸುತ್ತದೆ ಎಂದು ರಘುಪತಿ ಭಟ್ ಅವರು ಹೇಳಿದ್ದಾರೆ.

ಮನೆಗೆ ಬಂದವರನ್ನು ಉಪಚರಿಸಿ ಕಳುಹಿಸುವ ಸಂಸ್ಕೃತಿ ನಮ್ಮದು. ನನ್ನ ಮನೆಯ ಬಗ್ಗೆ ದಶಕಗಳಿಂದ ಉಡುಪಿಯ ಜನತೆಗೆ ಗೊತ್ತಿದೆ. ನೈಋತ್ಯ ಪದವೀಧರರ ಕ್ಷೇತ್ರದಲ್ಲಿ ನಾನು ಸ್ಪರ್ಧಿಸುವ ನಿರ್ಧಾರ ಕೈಗೊಂಡಾಗ ಜಿಲ್ಲೆಯ ಶಾಸಕರು, ಬಿಜೆಪಿ ನಾಯಕರು ನನ್ನ ಮನೆಗೆ ಬಂದಿದ್ದಾರೆ. ಎಲ್ಲರಲ್ಲೂ ಗೌರವದಿಂದ ಮಾತನಾಡಿ ನನ್ನ ನಿರ್ಧಾರ ತಿಳಿಸಿದ್ದೆ. ಯಾರಿಗೂ ಅಗೌರವ ತೋರಿಸಿಲ್ಲ. ಇದು ಎಲ್ಲರಿಗೂ ತಿಳಿದ ವಿಚಾರವೆ.

ಲೋಕಸಭಾ ಚುನಾವಣೆಯಲ್ಲಿ ನಾನು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪ್ರಭಾರಿಯಾಗಿದ್ದಾಗ ಡಾll ಧನಂಜಯ ಸರ್ಜಿ ಅವರು ಶಿವಮೊಗ್ಗ ಗ್ರಾಮಾಂತರ ಪ್ರಭಾರಿಯಾಗಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರ ಪರವಾಗಿ ಒಟ್ಟಿಗೆ ಕೆಲಸ ಮಾಡಿದ್ದೇವೆ. ಅವರ ಮೇಲೆ ನನಗೆ ಗೌರವ ಇದೆ. ಈ ರೀತಿಯ ಸುಳ್ಳು ಹೇಳುವ, ಜನರ ದಿಕ್ಕು ತಪ್ಪಿಸುವ ಹೇಳಿಕೆ ಸರಿಯಲ್ಲ ಎಂದು ರಘುಪತಿ ಭಟ್ ಪ್ರಕಟಣೆಯಲ್ಲಿ ಹೇಳಿದ್ದಾರೆ.


Spread the love

Leave a Reply