ನಾರಾಯಣ ಗುರುಗಳ ಪ್ರತಿಮೆಗೆ ಮಾಲಾರ್ಪಣೆ ಮಾಡವ ನೈತಿಕತೆ ಮೋದಿಯವರಿಗಿಲ್ಲ – ರಮೇಶ್ ಕಾಂಚನ್

Spread the love

ನಾರಾಯಣ ಗುರುಗಳ ಪ್ರತಿಮೆಗೆ ಮಾಲಾರ್ಪಣೆ ಮಾಡವ ನೈತಿಕತೆ ಮೋದಿಯವರಿಗಿಲ್ಲ – ರಮೇಶ್ ಕಾಂಚನ್

  • ಟ್ಯಾಬ್ಲೊಗೆ ಅವಕಾಶ ನಿರಾಕರಿಸಿದವರಿಂದ ಚುನಾವಣಾ ಸಮಯದಲ್ಲಿ ಬಿಲ್ಲವ ಸಮುದಾಯವನ್ನು ಒಲೈಸಲು ವೋಟ್ ಬ್ಯಾಂಕ್ ಗಿಮಿಕ್

ಉಡುಪಿ: ಕೇರಳ ರಾಜ್ಯದ ಗಣರಾಜ್ಯೋತ್ಸವ ಪರೇಡ್ ಸಮಯದಲ್ಲಿ ಸಮಾನತೆಯ ಹರಿಕಾರ ಬ್ರಹ್ಮಶ್ರೀ ನಾರಾಯಣ ಗುರುಗಳ ಟ್ಯಾಬ್ಲೋ ನಿರಾಕರಣೆ ಮಾಡಿದ ಪ್ರಧಾನಿ ನರೇಂದ್ರ ಮೋದಿಯವರು ಯಾವ ಮುಖವನ್ನು ಹೊತ್ತು ಭಾನುವಾರ ಮಂಗಳೂರಿನ ಲೇಡಿಹಿಲ್ ಸರ್ಕಲ್‌ನಲ್ಲಿ ನಾರಾಯಣ ಗುರುಗಳಿಗೆ ಮಾಲಾರ್ಪಣೆ ಮಾಡುತ್ತಾರೆ ಇದೊಂದು ಕೇವಲ ಬಿಲ್ಲವ ಸಮುದಾಯವನ್ನು ಒಲೈಸಲು ಮಾಡುತ್ತಿರುವ ವೋಟ್ ಬ್ಯಾಂಕ್ ಗಿಮಿಕ್ ಅಲ್ಲದೆ ಬೇರೆ ಏನೂ ಅಲ್ಲ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಅವರ ಆಕ್ರೋಶ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ರಾಜ್ಯದಲ್ಲಿದ್ದ ಬಿಜೆಪಿ ಸರಕಾರವಾಗಲಿ ಅಥವಾ ಕೇಂದ್ರದ ಮೋದಿ ಸರಕಾರವಾಗಲಿ ನಿರಂತರವಾಗಿ ಬಿಲ್ಲವ ಸಮುದಾಯಕ್ಕೆ ಅವಮಾನ ಮಾಡಿಕೊಂಡೇ ಬಂದಿದ್ದು ಕಳೆದ ಬಾರಿ ರಾಷ್ಟ್ರದ ಗಣರಾಜ್ಯೋತ್ಸವ ಪರೇಡ್ ವೇಳೆ ಕೇರಳ ಸರಕಾರ ಕಳುಹಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ ಟ್ಯಾಬ್ಲೋ‌ವನ್ನು ಕೇಂದ್ರ ಸರಕಾರ ನಿಷೇಧಿಸಿತ್ತು. ಈ ವೇಳೆ ದೇಶದ ಗೌರವಾನ್ವಿತ ಪ್ರಧಾನ ಮಂತ್ರಿಗಳನ್ನು ಪರಿಪರಿಯಾಗಿ ಬೇಡಿಕೊಂಡರೂ ಕೂಡ ಟ್ಯಾಬ್ಲೋಗೆ ಅವಕಾಶ ನಿರಾಕರಣೆ ಮಾಡುವ ಮೂಲಕ ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಅವಮಾನಿಸದ್ದರು.

ಈ ಹಿಂದೆ ರಾಜ್ಯದಲ್ಲಿ ಅಧಿಕಾರಲ್ಲಿದ್ದ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ಕೂಡ ಪಠ್ಯಪುಸ್ತಕದಿಂದ ಬ್ರಹ್ಮಶ್ರೀ ನಾರಾಯಣಗುರುಗಳ ವಿಚಾರವನ್ನು ತೆಗೆಯಲು ಶಿಫಾರಸು ಮಾಡಿದಾಗ ಕೂಡ ಯಾವುದೇ ರೀತಿಯ ಪ್ರತಿಕ್ರಿಯೆ ಬಿಜೆಪಿ ಸರಕಾರದಿಂದ ಬಂದಿರಲಿಲ್ಲ. ಬಿಲ್ಲವ ಸಮುದಾಯದಿಂದ ಮಂತ್ರಿಯಾಗಿದ್ದ ಪ್ರಸ್ತುತ ಉಡುಪಿ-ಚಿಕ್ಕಮಂಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಕೋಟ ಶ್ರೀನಿವಾಸ ಪೂಜಾರಿಯವರು ಕೂಡ ಈ ಬಗ್ಗೆ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸದೆ ಈಗ ನಾನು ಬಿಲ್ಲವ ಸಮುದಾಯದ ಅಭ್ಯರ್ಥಿ ಎಂದು ಜಾತಿ ಕಾರ್ಡ್ ಬಳಸಲು ಹೊರಟಿದ್ದಾರೆ.

ಅವರದ್ದೇ ಬಿಲ್ಲವ ಸಮುದಾಯದ ಗೋಪಾಲ ಪೂಜಾರಿ, ವಿನಯ ಕುಮಾರ್ ಸೊರಕೆ, ರಕ್ಷಿತ್ ಶಿವರಾಂ ಅವರನ್ನು ಸೋಲಿಸುವಂತೆ ಕರೆ ನೀಡುವಾಗ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಬಿಲ್ಲವ ಜಾತಿಯವರು ಎನ್ನುವುದು ಮರೆತು ಹೋಗಿತ್ತು. ಈ ಹಿಂದೆ ಲೋಕಸಭಾ ಚುನಾವಣೆಗೆ ಅಭಿವೃದ್ಧಿಯ ಹರಿಕಾರ, ಸಾಲ ಮೇಳ ಖ್ಯಾತಿಯ ಮೂಲಕ ಮನೆ ಮಾತಾದ ಬಿಲ್ಲವ ನಾಯಕ ಜನಾರ್ದನ ಪೂಜಾರಿಯವರು ಸ್ಪರ್ಧಿಸಿದಾಗ ಕೂಡ ಅವರನ್ನು ಸೋಲಿಸುವಂತೆ ಮನೆ ಮನೆಗೆ ತೆರಳಿ ಪ್ರಚಾರ ಮಾಡಿದವರು ಕೋಟ ಶ್ರೀನಿವಾಸ ಪೂಜಾರಿ ಎನ್ನುವುದನ್ನು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಜನತೆ ಮರೆತಿಲ್ಲ. ಹೆಜ್ಜೆ ಹೆಜ್ಜೆಗೂ ಬಿಲ್ಲವ ಸಮುದಾಯಕ್ಕೆ ಅನ್ಯಾಯವಾಗದ ದನಿ ಎತ್ತದ ಬಿಜೆಪಿ ನಾಯಕರು ಧರ್ಮ ರಾಜಕೀಯಕ್ಕೆ ಅದೇ ಸಮುದಾಯದ ಹಲವಾರು ಯುವಕರು ಬಲಿಯಾಗಲು ಕಾರಣರಾಗಿದ್ದಾರೆ ಅಲ್ಲದೆ ಹಲವಾರು ಮಂದಿ ಇಂದಿಗೂ ಜೈಲಿನಲ್ಲಿ ಕೊಳೆಯುವಂತೆ ಮಾಡಿ ಅವರುಗಳ ಕುಟುಂಬಗಳು ಪ್ರತಿನಿತ್ಯ ಕಣ್ಣಿುರಿನಲ್ಲಿ ಕೈತೊಳೆಯುವಂತೆ ಮಾಡಿದ ಕೀರ್ತಿ ಇದ್ದರೆ ಅದು ಬಿಜೆಪಿ ಪಕ್ಷಕ್ಕೆ ಸಲ್ಲಲೇಬೇಕು.

ಈಗ ಮೋದಿಯವರು ಮಂಗಳೂರಿಗೆ ಬಂದರೆ ಬಿಲ್ಲವರು ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲಿಸುವುದಿಲ್ಲ ಎಂಬ ಕಾರಣಕ್ಕಾಗಿ ಸಾರ್ವಜನಿಕ ಸಭೆಯ ಬದಲು ರೋಡ್ ಶೋ ಮೂಲಕ ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಹಾರಾರ್ಪಣೆ ಮಾಡುವುದರ ಮೂಲಕ ಬಿಜೆಪಿ ಪಕ್ಷದವರು ನಾಟಕ ಮಾಡಲು ಹೊರಟಿದ್ದಾರೆ. ಇವರ ಈ ನಾಟಕಗಳನ್ನು ಈಗಾಗಲೇ ಕಂಡಿರುವ ಬಿಲ್ಲವ ಸಮುದಾಯ ಈ ಬಾರಿ ಸಂಪೂರ್ಣವಾಗಿ ಎಚ್ಚೆತ್ತುಕೊಂಡಿದ್ದು ಜಾತಿಯ ಬದಲಾಗಿ ಉತ್ತಮ, ಸಜ್ಜನ ಅಭ್ಯರ್ಥಿಯನ್ನು ಬೆಂಬಲಿಸಲು ಮುಂದಾಗಿದ್ದಾರೆ. ಬಿಜೆಪಿಗರ ಸುಳ್ಳು ಭರವಸೆಗಳಿಗೆ ಮರುಳಾಗುವ ಜನರು ಯಾರೂ ಇಲ್ಲ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love