ನೀರಿನ ದರ ವಿಪರೀತ ಏರಿಕೆ ಸಿಪಿಐ(ಎಂ) ವಿರೋಧ

Spread the love

ನೀರಿನ ದರ ವಿಪರೀತ ಏರಿಕೆ ಸಿಪಿಐ(ಎಂ) ವಿರೋಧ

ಮಂಗಳೂರು:  ಮಹಾನಗರ ಪಾಲಿಕೆಯು ಕಳೆದ ಏಪ್ರಿಲ್ ತಿಂಗಳಿನಲ್ಲಿ ಹೆಚ್ಚಳ ಮಾಡಿರುವ ನೀರಿನ ದರವು ವಿಪರೀತ ಹಾಗೂ ಅವೈಜ್ಞಾನಿಕ ಎಂದು ಸಿಪಿಐ(ಎಂ) ಪಂಜಿಮೊಗರು ವಾರ್ಡ್ ಸಮಿತಿ ಆರೋಪಿಸಿದೆ.

ಹಿಂದಿನ ದರಕ್ಕಿಂತ ಮೂರರಿಂದ ಐದು ಪಟ್ಟು ದರ ಹೆಚ್ಚಳ ಮಾಡಿರುವುದು ನ್ಯಾಯವಲ್ಲ. ಕನಿಷ್ಠ ಮಿತಿಯಲ್ಲೂ ಕಡಿತಗೊಳಿಸಲಾಗಿದೆ. ಪಾಲಿಕೆಯೊಳಗೆ ಜನಪ್ರತಿನಿಧಿಗಳ ಆಡಳಿತ ಇಲ್ಲದೇ ಇರುವ ಸಮಯವನ್ನು ಬಳಸಿಕೊಂಡು ಮನಸ್ಸೋ ಇಚ್ಛೆ ದರ ಹೆಚ್ಚಿಸಲಾಗಿದೆ. ಮೂರು ತಿಂಗಳುಗಳ ಕಾಲ ಬಿಲ್ಲನ್ನು ನೀಡದೇ ಇದೀಗ ಏಕಕಾಲದಲ್ಲಿ ಬಿಲ್ ನೀಡಲಾಗುತ್ತಿದೆ. ಇದರಿಂದ ಕನಿಷ್ಠ ಬಳಕೆ ರೀಡಿಂಗ್ ಮಾನದಂಡವನ್ನು ತಪ್ಪಾಗಿ ಅನುಸರಿಸಲಾಗುತ್ತಿದೆ. ಈ ಅವ್ಯವಸ್ಥೆಯನ್ನು ಕೂಡಲೇ ಸರಿಪಡಿಸಬೇಕು ಎಂದು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಿಗೆ  ಸಿಪಿಐ(ಎಂ) ಪಂಜಿಮೊಗರು ಶಾಖೆ ಮನವಿ ಸಲ್ಲಿಸಿದೆ.

ನಿಯೋಗದಲ್ಲಿ ಪಕ್ಷದ ಮುಖಂಡರಾದ ಮಾಜಿ ಕಾರ್ಪೋರೇಟರ್ ದಯಾನಂದ ಶೆಟ್ಟಿ, ಎ. ಅಹಮ್ಮದ್ ಬಶೀರ್, ನವೀನ್ ಡಿ’ಸೋಜಾ, ನೌಷದ್, ಚರಣ್ ಶೆಟ್ಟಿ ಉಪಸ್ಥಿತರಿದ್ದರು.


Spread the love