ನುಡಿದಂತೆ ನಡೆದ ಮುಖ್ಯ ಮಂತ್ರಿ: ಸುಶೀಲ್ ನೊರೊನ್ಹ

Spread the love

ನುಡಿದಂತೆ ನಡೆದ ಮುಖ್ಯ ಮಂತ್ರಿ: ಸುಶೀಲ್ ನೊರೊನ್ಹ

ಮುಖ್ಯ ಮಂತ್ರಿ ಎಚ್. ಡಿ. ಕುಮಾರ್‍ಸ್ವಾಮಿ ಮಂಡಿಸಿದ ಬಜೆಟನ್ನು ದಕ್ಷಿಣ ಕನ್ನಡ ಜಿಲ್ಲಾ ಜಾತ್ಯತೀತ ಜನತಾ ದಳ ಸ್ವಾಗತಿಸಿದೆ.  ರಾಜ್ಯ ವಿಧಾನಸಭಾ ಚುನಾವಣಾ ಪೂರ್ವಭಾವಿಯಾಗಿ ಮಾನ್ಯ ಕುಮಾರಸ್ವಾಮಿಯವರು ಮಂಗಳೂರಿನಲ್ಲಿ ಬುಧ್ದಿ ಜೀವಿಗಳ ಕಾರ್ಯಕ್ರಮವನ್ನು ಏರ್ಪಡಿಸಿ, ಜಿಲ್ಲೆಯ ಸಮಸ್ಯೆಗಳು ಹಾಗೂ ಅಭಿವೃದ್ಧಿಯ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ ಕೆಲವು ಆಶ್ವಾಸನೆಗಳನ್ನು ನೀಡಿದ್ದರು.

ಮುಖ್ಯವಾಗಿ ಕರಾವಳಿ ಪ್ರವಾಸೋದ್ಯಮ, ಟ್ರಾಫಿಕ್ ಒತ್ತಡ ತಪ್ಪಿಸಲು, ಮೆಟ್ರೋ ರೈಲ್ವೆ ಸೇವೆ ನಗರ ವಿಕಾಸಕ್ಕೆ ಮಂಗಳೂರು ಮಹಾನಗರ ಪಾಲಿಕೆಗೆ ವಿಶೇಷ ಅನುದಾನ, ಹಲವು ವರುಷಗಳ ಕೈಸ್ತ ಸಮುದಾಯದ  ಪ್ರತ್ಯೇಕ ನಿಗಮ ಸ್ಥಾಪನೆ ಬೇಡಿಕೆ ಈ ಎಲ್ಲಾದಕ್ಕೂ ಸ್ಪಂದನೆ ದೊರೆತ್ತಿದ್ದು, ಜಿಲ್ಲೆಯ ಎಲ್ಲಾ ಜನ ಪ್ರತಿನಿದಿಗಳು, ಸರಕಾರಿ ಅಧಿಕಾರಿಗಳು, ಜೊತೆ ಕೂಡಿ ಯೋಜನೆಯನ್ನು ಅನುಸ್ಠಾನಗೊಳಿಸಲು ಒಗ್ಗಟ್ಟಾಗಿ ಕಾರ್ಯ ಯೋಜನೆಯನ್ನು ಜಾರಿಗೊಳಿಸಬೇಕು.

ಬಜೆಟ್ಟಿನಲ್ಲಿ ರೈತಸಿರಿ, ಮಾತೃಶ್ರೀ ಯೋಜನೆ, ಅಂಗನವಾಡಿ ಕಾರ್ಯಕರ್ತರ ಗೌರವ ಧನ ಹೆಚ್ಚಳ, ಶ್ರಮಿಕ  ಸೌರಭ, ಗೃಹ ಲಕ್ಷ್ಮಿ ಬೆಳೆ ಸಾಲ, ಅಹಿಂದ ವರ್ಗಕ್ಕೆ ವಿಶೇಷ ಅನುದಾನ, ಶಿಕ್ಷಣದ ಗುಣಮಟ್ಟಕ್ಕೆ ಒತ್ತು, ಮೀನುಗಾರಿಕೆಗೆ ವಿಶೇಷ ಸವಲತ್ತು, ಈ ಎಲ್ಲಾ  ಕೊಡುಗೆ ಜನಸಾಮಾನ್ಯರ   ಕಾಳಜಿ ಇರುವ  ಬಜೆಟ್ ಇದಾಗಿದೆ ಎಂದು ಜೆಡಿಎಸ್ ಜಿಲ್ಲಾ ವಕ್ತಾರ ಸುಶೀಲ್ ನೊರೊನ್ಹಾ ತಿಳಿಸಿದ್ದಾರೆ.


Spread the love