ನೇಜಾರು ಹತ್ಯಾಕಾಂಡ: ಮುಸ್ಲಿಂ ಬಾಂಧವ್ಯ ವೇದಿಕೆಯಿಂದ ಕಾನೂನು ಸಚಿವರಿಗೆ ಮನವಿ

Spread the love

ನೇಜಾರು ಹತ್ಯಾಕಾಂಡ: ಮುಸ್ಲಿಂ ಬಾಂಧವ್ಯ ವೇದಿಕೆಯಿಂದ ಕಾನೂನು ಸಚಿವರಿಗೆ ಮನವಿ

ಉಡುಪಿ: ದೇಶವನ್ನೇ ಬೆಚ್ಚಿಬೀಳಿಸಿದ ನೇಜಾರು ಹತ್ಯಾಕಾಂಡ ಪ್ರಕರಣವನ್ನು ಉಡುಪಿಗೆ ತ್ವರಿತಗತಿ ನ್ಯಾಯಾಲಯ ಮಂಜೂರು ಮಾಡಿ ವಿಚಾರಣೆ ನಡೆಸಿ ಹಂತಕನನ್ನು ಶಿಕ್ಷಿಸಬೇಕೆಂದು ಮುಸ್ಲಿಂ ಸಾಹಿತಿಗಳು ಲೇಖಕರು ಚಿಂತಕರ ವೇದಿಕೆಯಾದ ಮುಸ್ಲಿಂ ಬಾಂಧವ್ಯ ವೇದಿಕೆ ಕರ್ನಾಟಕ ಇದರ ನಿಯೋಗವು ಉಡುಪಿ ಜಿಲ್ಲಾಧಿಕಾರಿಯವರ ಮೂಲಕ ರಾಜ್ಯದ ಕಾನೂನು ಸಚಿವರಿಗೆ ಮನವಿ ಸಲ್ಲಿಸಿತು.

ಇದರ ಜೊತೆಗೇ ಈ ಪ್ರಕರಣದಲ್ಲಿ ಉಡುಪಿ ಜಿಲ್ಲಾ ಪೋಲಿಸ್ ಹಂತಕನನ್ನು 48 ಗಂಟೆಗಳಲ್ಲೇ ಹಿಡಿದು ಕಾರ್ಯದಕ್ಷತೆಯನ್ನು ಮೆರೆದಿದ್ದಕ್ಕೆ ವೇದಿಕೆಯ ವತಿಯಿಂದ ಪ್ರಶಂಸನಾ ಪತ್ರವನ್ನು ಎಸ್ ಪಿ ಅರುಣ್ ಕುಮಾರ್ ರವರಿಗೆ ಅವರ ಕಛೇರಿಯಲ್ಲಿ ನೀಡಿ ಗೌರವಿಸಲಾಯಿತು. ನಂತರ ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡಿದ ವೇದಿಕೆ ಸದಸ್ಯರು ಸಾಂತ್ವನ ಹೇಳಿದರು.

ನಿಯೋಗದಲ್ಲಿ ವೇದಿಕೆಯ ಗೌರವಾಧ್ಯಕ್ಷ ಎಸ್ ಬಿ ದಾರಿಮಿ, ಪ್ರಧಾನ ಕಾರ್ಯದರ್ಶಿ ಮುಷ್ತಾಕ್ ಹೆನ್ನಾಬೈಲ್, ಝಮೀರ್ ಅಹ್ಮದ್ ರಶಾದಿ, ಇಬ್ರಾಹಿಮ್ ಸಾಹೇಬ್ ಕೋಟಾ, ಮುಹಮ್ಮದ್ ಇರ್ಫಾನಿ, ನಜೀರ್ ಬೆಳವಾಯಿ, ಅಶ್ರಫ್ ಕುಂದಾಪುರ, ಇಕ್ಬಾಲ್ ಹಾಲಾಡಿ, ರಫೀಕ್ ನಾಗೂರು, ಅಬ್ದುಲ್ ರೌಫ್, ತೌಫೀಕ್ ಗಂಗೊಳ್ಳಿ, ಅಸ್ಲಮ್ ಹೈಕಾಡಿ, ಉಸ್ಮಾನ್ ಹೈಕಾಡಿ, ಆರ್ ಎ ಲೋಹಾನಿ, ಮುಹಮ್ಮದ್ ಮುಹಸೀನ್ ಮುಂತಾದವರು ಉಪಸ್ಥಿತರಿದ್ದರು..


Spread the love